ರಾಜಂ:ಆಂಧ್ರಪ್ರದೇಶದ ರಾಜಂನಲ್ಲಿ ವೈಎಸ್​ಆರ್​ಸಿಪಿ ಪರ ಪ್ರಚಾರ ನಡೆಸುತ್ತಿದ್ದ ವಾಹನ ಡಿಕ್ಕಿ ಹೊಡೆದು 9 ವರ್ಷದ ಬಾಲಕ ಸಾವನ್ನಪ್ಪಿರು ಘಟನೆ ನಡೆದಿದೆ.
ಇದನ್ನೂ ಓದಿ:L S polls: ಛತ್ತೀಸ್‌ಗಢದಲ್ಲಿ ಗ್ರನೇಡ್​ ಸ್ಫೋಟದಲ್ಲಿ ಸಿಆರ್‌ಪಿಎಫ್ ಯೋಧ ಹುತಾತ್ಮ!
9 ವರ್ಷದ ಬಾಲಕ ಗುರುವಾರ ರಾತ್ರಿ ಬೊಬ್ಬಲಿ ಜಂಕ್ಷನ್ ಬಳಿ 8 ಗಂಟೆ ಸುಮಾರಿಗೆ ತಿಂಡಿ ಖರೀದಿಸಲು ಬಂದಿದ್ದ ವೇಳೆ ವಿಧಾನಸಭೆ ಚುನಾವಣೆಗೆ ಆಂಧ್ರಪ್ರದೇಶದ ಆಢಳಿತರೂಡ ವೈಎಸ್‌ಆರ್‌ಸಿಪಿ ರಾಜಂ (ಎಸ್‌ಸಿ) ವಿಧಾನಸಭಾ ಅಭ್ಯರ್ಥಿ ಟಿ ರಾಜೇಶ್ ಅವರ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆ ವೇಳೆ ಅಭ್ಯರ್ಥಿ ಪ್ರಚಾರದ ವಾಹನದಲ್ಲಿ ಇರಲಿಲ್ಲ. ಪ್ರಚಾರ ಮುಗಿದ ಬಳಿಕ ಚಾಲಕ ವಾಹನದ ಟೈರ್​ಗಳಿಗೆ ಗಾಳಿ ತುಂಬಿಸಲು ವಾಹವನ್ನು ತೆಗದುಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಈ ಪ್ರಕರಣದಲ್ಲಿ ಚಾಲಕನ ಸುಧೀರ್ ವಿರುದ್ಧ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಬಂಧಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ಬಾಲಕನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್, ಸಿಪಿಎಂ ಬಿಜೆಪಿ ಪರ ಕೆಲಸ ಮಾಡ್ತಿದಾರೆ ವೋಟ್​ ಹಾಕ್ಬೇಡ್ರಿ: ಮಮತಾ ಬ್ಯಾನರ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
