ಮುಜಾಫರ್‌ನಗರ:ಕರೊನಾ ವೈರಸ್ ಔಷಧಿಯ ಹೆಸರು ಹೇಳಿಕೊಂಡು ಬಹಳಷ್ಟು ವಂಚನೆಗಳು ನಡೆಯುತ್ತಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ದೇವಮಾನವ ಎಂದುಕೊಂಡ ನಕಲಿ ಸನ್ಯಾಸಿ ಮಾಡುತ್ತಿದ್ದ ಭಯಾನಕ ಕೃತ್ಯವೀಗ ಬಯಲಿದೆ ಬಂದಿದೆ.
ತಾನು ಮಕ್ಕಳಿಗೆ ಕರೊನಾ ವೈರಸ್‌ ಔಷಧ ನೀಡುವುದಾಗಿ ಹೇಳುತ್ತಿದ್ದ ಶುಕ್ರತಾಳ್‌ ಆಶ್ರಮದ ಭಕ್ತಿ ಭೂಷಣ್‌ ಎಂಬ ಕಳ್ಳಸನ್ಯಾಸಿ, ಮಕ್ಕಳನ್ನು ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿರುವ ಆಘಾತಕಾರಿ ಘಟನೆ ಇದು. ಮಕ್ಕಳನ್ನು ಸಮೀಪ ಕರೆದು, ಅವರಿಗೆ ಕರೊನಾ ಔಷಧವೆಂದು ನಂಬಿಸಿ ಮದ್ಯ ಕುಡಿಸುತ್ತಿದ್ದ. . ಬಳಿಕ ಅವರಿಗೆ ನೀಲಿ ಚಿತ್ರಗಳನ್ನು ತೋರಿಸುತ್ತಿದ್ದ. ಆ ವೇಳೆ ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.
ಈತನೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ಎಫ್‌ಐಆರ್‌ ದಾಖಲಿಸಲಾಗಿದೆ.
ಇದನ್ನೂ ಓದಿ:ರೌಡಿ ದುಬೆ ಎನ್‌ಕೌಂಟರ್‌ ತನಿಖೆ ಕುರಿತು ಹೈಕೋರ್ಟ್‌ ಹೇಳಿದ್ದೇನು?
ಕರೊನಾ ಔಷಧವೆಂದು ಏನೂ ಅರಿಯದ ಮುಗ್ಧ ಮಕ್ಕಳು ಮದ್ಯಸೇವನೆ ಮಾಡುತ್ತಿದ್ದರು. ನಂತರ ಮಕ್ಕಳ ಪಾಲಕರಿಗೆ ಸಂದೇಹ ಬರಲು ಶುರುವಾಗಿದ್ದು, ದೂರು ದಾಖಲು ಮಾಡಿದ್ದಾರೆ. ಈತನ ಆಶ್ರಮದ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದ್ದು, ಅಲ್ಲಿ ದುಡಿಯುವಂತೆಯೂ ಮಕ್ಕಳನ್ನು ಒತ್ತಾಯಿಸಲಾಗುತ್ತಿತ್ತು.
ಇವುಗಳಿಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿಗೆ ಹಲವು ಕರೆಗಳು ಬಂದಿದ್ದವು. ಅದರ ಆಧಾರದ ಮೇಲೆ ದಾಳಿ ನಡೆಸಿರುವ ಪೊಲೀಸರು ಮಕ್ಕಳನ್ನು ರಕ್ಷಿಸಿದ್ದಾರೆ.ಈ ಮಕ್ಕಳೆಲ್ಲರೂ 7ರಿಂದ 16 ವರ್ಷದವರಾಗಿದ್ದು ಈಶಾನ್ಯ ಭಾರತ ಮೂಲದವರಾಗಿದ್ದಾರೆ. ಈತ ತಾನು ದೇವಮಾನವ ಎಂದು ಹೇಳಿಕೊಂಡು 12 ವರ್ಷಗಳಿಂದ ಇಲ್ಲಿ ಆಶ್ರಮ ನಡೆಸುತ್ತಿದ್ದಾನೆ. ಮಕ್ಕಳ ಪೈಕಿ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದೆ.(ಏಜೆನ್ಸೀಸ್‌)
ಇಂದು ರಾತ್ರಿಯಿಂದ ಲಾಕ್‌ಡೌನ್‌: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಡಿಟೇಲ್ಸ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + ten =
Remember me
