ಮುಂಬೈ:ಸಿಗರೇಟ್​ ಹಚ್ಚಿಕೊಳ್ಳಲು ಬೆಂಕಿ ಕಡ್ಡಿ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಅಪ್ರಾಪ್ತ ವಯಸಿನ ಹುಡುಗರು 22 ವರ್ಷದ ಯುವಕನನ್ನು ಇರಿದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಮಂಖುರ್ದ್​ ಪ್ರದೇಶದಲ್ಲಿ ಘಟನೆ ನಡೆದಿದ್ದು ರಂಜಾನ್ ಅಬ್ದುಲ್​​ ಹಮೀದ್ ಶೇಖ್​(22) ಎಂದು ಗುರುತಿಸಲಾಗಿದೆ.
ಘಟನೆ ಸೋಮವಾರ ಸಂಜೆ ಮಂಖುರ್ದ್​ ಪ್ರದೇಶದಲ್ಲಿ ನಡೆದಿದ್ದು ಹಮೀದ್​ ಬಳಿ ಇಬ್ಬರು ಅಪ್ರಾಪ್ತ ವಯಸಿನ ಹುಡುಗರು ಬಂದು ಸಿಗರೇಟ್​ ಹಚ್ಚಿಕೊಳ್ಳಲು ಮ್ಯಾಚ್​ ಬಾಕ್ಸ್​ ಕೇಳಿದ್ದಾರೆ.
ಈ ವೇಳೆ ಬಾಲಕರಿಬ್ಬರಿಗೆ ಹಮೀದ್​ ಮ್ಯಾಚ್​ ಬಾಕ್ಸ್​ ನೀಡಲು ನಿರಾಕರಿಸಿದ್ಧಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅಪ್ರಾಪ್ತ ವಯಸಿನ ಹುಡುಗರಿಬ್ಬರು ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ:ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣ; ಆರೋಪ ನಿರಾಕರಿಸಿದ ಪ್ರಿಯಕರ
​ಪ್ರಕರಣ ಸಂಬಂಧ ಮೃತನ ತಾಯಿ ನೀಡಿದ ದೂರನ್ನು ಆಧರಿಸಿ ಪೊಲೀಸರು ಅಪ್ರಾಪ್ತ ವಯಸಿನ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಸಿಗರೇಟ್​ ಹಚ್ಚಿಕೊಳ್ಳಲು ಮೃತ ಯುವಕನ ಬಳಿ ಅಪ್ರಾಪ್ತ ವಯಸ್ಕರು ಬಂದು ಮ್ಯಾಚ್​ಬಾಕ್ಸ್​ ಕೇಳಿದ್ದಾರೆ. ಈ ವೇಳೆ ಹಮೀದ್​ ಬಾಲಕರಿಗೆ ಕೊಡುವುದಿಲ್ಲ ಎಂದು ಹೇಳಿ ನಿಂದಿಸಿದ್ದಾನೆ.
ಸಿಟ್ಟಿಗೆದ್ದ ಬಾಲಕರಿಬ್ಬರು ಹಮೀದ್​ಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ವೇಳೆ ಅಪ್ರಾಪ್ತ ವಯಸ್ಕರು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಸ್ಥಳ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸ್ಥಳೀಯರನ್ನು ವಿಚಾರಿಸಿದಾಗ ಬಾಲಕರ ಬಗ್ಗೆ ತಿಳಿದು ಬಂದಿದ್ದು ಅವರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
