Uttarpradesh: ಜೇನುನೊಣಗಳ ದಾಳಿಗೆ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಅಜ್ಜಿ ಜೊತೆಗೆ ಕಾಲ ಕಳೆಯುವ ಸಲುವಾಗಿ ಬಂದಿದ್ದ ಮೊಮ್ಮಕಳಿಬ್ಬರೂ ವಿಧಿವಶರಾಗಿದ್ದಾರೆ.
ಮಂಕಾಪುರದ ಮದ್ನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಜ್ಜಿ ಉತ್ತಮ ತಮ್ಮ ಆರು ಮತ್ತು ನಾಲ್ಕು ವರ್ಷದ ಮೊಮ್ಮಕ್ಕಳಾದ ಯೋಗೇಶ್(6) ಮತ್ತು ಯುಗ್​​​​(4) ಜೊತೆಗೆ ಹೊರಗೆ ಹೋಗಿದ್ದಾಗ ಜೇನುನೊಣಗಳ ಹಿಂಡು ಅವರ ಮೇಲೆ ದಾಳಿ ಮಾಡಿದೆ.
ಮಂಗಳವಾರದಂದು ಘಟನೆ ನಡೆದಿದ್ದು, ಮೊಮ್ಮಕ್ಕಳಾದ ಯುಗ್ (4) ಮತ್ತು ಯೋಗೇಶ್ (6) ಅವರೊಂದಿಗೆ ಹೊರಗೆ ಹೋಗಿದ್ದಾಗ ಜೇನುನೊಣಗಳು ಕಚ್ಚಿದೆ ಎಂದು ಸ್ಥಳೀಯ ಎಸ್​​​ಎಚ್​​​ಒ ಸುಧೀರ್​​ ಕುಮಾರ್​​ ಸಿಂಗ್​ ಮಾಹಿತಿ ನೀಡಿದ್ದಾರೆ.ಜೇನುನೊಣಗಳು ದಾಳಿ ನಡೆಸಿ ಕಚ್ಚಲು ಮುಂದಾದಾಗ ಅಜ್ಜಿ ಮೊಮ್ಮಕಳಿಗೆ ಕಚ್ಚಿದ ನೊಣಗಳನ್ನ ಓಡಿಸೋಕೆ ಮುಂದಾಗಿದ್ದು, ಇದೇ ವೇಳೆ ಅವರೂ ಜೇನಿನಿಂದ ಕಚ್ಚಿಸಿಕೊಂಡಿದ್ದಾರೆ.
ಜೇನುನೊಣ ಕಚ್ಚಿದ ತಕ್ಷಣವೇ ಅಜ್ಜಿ ಉತ್ತಮ ಮೊಮ್ಮಕಳಿಬ್ಬರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರನ್ನೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ದುರಾದೃಷ್ಟವಶಾತ್​​ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ನಾಲ್ಕು ವರ್ಷದ ಮೊಮ್ಮಗ ಯುಗ್ ಸಾವನ್ನಪ್ಪಿದ್ದಾರೆ.

ನಂತರದಲ್ಲಿ ಯೋಗೇಶ್ ಮತ್ತು ಉತ್ತಮ ಅವರನ್ನು ಜಿಲ್ಲಾಸ್ಪತ್ರೆಗೆ ಕರದೊಯ್ಯಲಾಗಿದ್ದು, ಚಿಕಿತ್ಸೆ ವೇಳೆ ಯೋಗೇಶ್ ಕೂಡ ಮೃತಪಟ್ಟಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರು ಅಜ್ಜಿ ಉತ್ತಮ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
