ಕೋಟ:ಶಾಲೆಯೊಂದರ ಶೌಚಗೃಹದಲ್ಲೇ ಅಪ್ರಾಪ್ತ ವಯಸ್ಕೆಯೊಬ್ಬಳು ಮಗುವಿಗೆ ಜನ್ಮ ನೀಡಿ, ಖಾಲಿ ಜಾಗವೊಂದರಲ್ಲಿ ಶಿಶುವನ್ನು ಇಟ್ಟುಹೋದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ತಿಂಗಳಿಂದ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಕಸಿನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ರಾಜಸ್ಥಾನದ ಹಳ್ಳಿಯೊಂದರಲ್ಲಿ ಇಂದು ಸಿಕ್ಕ ಈ ನವಜಾತ ಶಿಶುವನ್ನು ಹಾಗೂ ಮಗುವಿಗೆ ಜನ್ಮನೀಡಿದ್ದ ಅಪ್ರಾಪ್ತ ವಯಸ್ಕಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಂಬಂಧಿ, 21 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಯಿ-ಮಗು ಇಬ್ಬರ ಆರೋಗ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದೂ ತಿಳಿಸಿದ್ದಾರೆ.
ಇಂದು ಬೆಳಗ್ಗೆ ನವಜಾತ ಶಿಶು ಪತ್ತೆಯಾದ ನಾಲ್ಕೈದು ಗಂಟೆಗಳಲ್ಲೇ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು. ಮಗುವಿಗೆ ಜನ್ಮನೀಡಿದ 15 ವರ್ಷದ ಹುಡುಗಿಯ ಹೇಳಿಕೆ ಮೇರೆಗೆ ಪೊಲೀಸರು ಆತನ ವಿರುದ್ಧ ಅತ್ಯಾಚಾರ ಹಾಗೂ ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಕಸಿನ್ಸ್ ಆಗಿದ್ದು, ಆತ ಆಕೆಯನ್ನು ಕಳೆದ ಸುಮಾರು ಹತ್ತು ತಿಂಗಳಿನಿಂದ ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಅಜ್ಜಿ ಮನೆಗೆ ಹೋಗುತ್ತಿದ್ದ ಹುಡುಗಿಯನ್ನು ಅದೇ ಹಳ್ಳಿಯಲ್ಲಿದ್ದ ಕಸಿನ್​ ಭೇಟಿ ಆಗುತ್ತಿದ್ದು, ಅಲ್ಲಿ ತಂಗುತ್ತಿದ್ದ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಹೀಗೆ ಒಂದೆರಡು ದಿನ ಅಜ್ಜಿ ಮನೆಗೆ ಬಂದು ತಂಗುತ್ತಿದ್ದಾಗೆಲ್ಲ ಬರುತ್ತಿದ್ದ ಈತ ಈ ಕೃತ್ಯವನ್ನು ಎಸಗುತ್ತಿದ್ದ ಎಂಬುದು ಬಯಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ.
ಒಂದೇ ಮಾದರಿಯ 2 ಅಪಘಾತಕ್ಕೆ ಬೆಚ್ಚಿಬಿದ್ದ ಹೊನ್ನಾಳಿ, ಕಾರಲ್ಲಿ ಶವ ಪತ್ತೆ: ಅಂದು ಶಾಸಕರ ತಮ್ಮನ ಮಗ, ಇಂದು ಎಎಸ್‌ಐ ಪುತ್ರ..

ಎರಡೂವರೆ ವರ್ಷದ ಮಗಳಿಗೆ ತಿನ್ನಲೂ ಕೊಡಿಸಲಾಗದೆ ಕೊಂದ ಟೆಕ್ಕಿ!; ಕೆಲಸವೂ ಇರಲಿಲ್ಲ, ಆರ್ಥಿಕ ನಷ್ಟ ಜತೆಗೆ ರಾಬರಿ ಕೇಸ್​..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
