ಗುಜರಾತ್​:ತಾಯಿ ಗದರಿದ್ದಕ್ಕೆ ಮನನೊಂದ 13 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಗುಜರಾತ್​ನ ಜಾಮ್​ನಗರ ಬಳಿ ನಡೆದಿದೆ.
ಮೃತ ಬಾಲಕಿಯನ್ನು ಜೇನಿಶಾ ಅಭಂಗಿ ಎಂದು ಗುರುತಿಸಲಾಗಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೇನಿಶಾ ಹಾಗೂ ಆಕೆಯ ತಾಯಿ ಊರ್ಮಿಳಾ ಬೇಸಿಗೆ ರಜೆ ಕಳೆಯಲೆಂದು ಮಾವನ ಮನೆಗೆ ಬಂದಿದ್ದರು. ಈ ವೇಳೆ ಬಾಲಕಿಯು ಮೊಬೈಲ್​ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿರುವುದನ್ನು ಗಮನಿಸಿದ ಊರ್ಮಿಳಾ ಆಕೆಗೆ ಗದರಿಸಿದ್ದಳು. ತದನಂತರ ಸಿಟ್ಟಿಗೆದ್ದ ಬಾಲಕಿ ಕೊಠಡಿಯೊಳಗೆ ಹೋಗಿದ್ದಳು.
ಇದನ್ನೂ ಓದಿ:ತಂದೆಯ ಸ್ನೇಹಿತನ ಜತೆ ಅನೈತಿಕ ಸಂಬಂಧ: ಹೋಟೆಲ್​​ ಮಾಲೀಕನ ಹತ್ಯೆ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಯಲು
ಆದರೆ ಮನೆಯವರು ಹಾಗೂ ಬಾಲಕಿಯ ತಾಯಿಯು ಆಕೆ ಆಟವಾಡಲು ಹೊರಗಡೆ ಹೋಗಿದ್ದಾಳೆಂದು ಭಾವಿಸಿದ್ದರು. ಆಕೆ ವಾಪಸ್ ಬಾರದೆ ಇದ್ದಾಗ ಕುಟುಂಬದವರು ತಮ್ಮ ನೆರೆಹೊರೆಯವರು ಹಾಗೂ ಬಾಲಕಿಯ ಸ್ನೇಹಿತರ ಬಳಿ ಜೇನಿಶಾ ಬಗ್ಗೆ ವಿಚಾರಿಸಿದ್ದರು. ಕೊನೆಗೆ ರೂಮ್​ ಬಾಗಿಲು ತೆರೆದು ನೋಡಿದಾಗ ಬಾಲಕಿಯು ಫ್ಯಾನ್​ಗೆ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಬಾಲಕಿ ಅದಾಗಲೇ ಮೃತಪಟ್ಟಿದ್ದಳು. ಇನ್ನು ಘಟನೆ ಕುರಿತು ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 7 =
Remember me
