ಭೋಪಾಲ್​:ತನ್ನ ಮೇಲೆ 10 ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದುದ್ದಲ್ಲದೆ, ಕೆಲಸ ಬಿಡದಂತೆ ತಡೆಯುತ್ತಿದ್ದ ಅಬಕಾರಿ ಇಲಾಖೆಯ ಸಬ್​ ಇನ್​ಸ್ಪೆಕ್ಟರ್​ (ಎಸ್​ಐ) ಅನ್ನು ಸ್ವತಃ ಬಾಲಕಿಯೇ ಪೊಲೀಸರ ವಶಕ್ಕೆ ಒಪ್ಪಿಸಿದ್ದಾಳೆ.
ಮಧ್ಯಪ್ರದೇಶ ಅಬಕಾರಿ ಇಲಾಖೆಯ ಎಸ್​ಐ ಪಂಕಜ್​ ಜೈನ್​ ಬಂಧಿತರು. ಉಜ್ಜೈನ್​ನಲ್ಲಿನ ಹೋಟೆಲ್​ಗೆ ಬರುವಂತೆ ಬಾಲಕಿಗೆ ಸೂಚಿಸಿದ್ದ ಎಸ್​ಐ, ಬೇರೊಬ್ಬರ ಹೆಸರಿನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದರು. ಅಲ್ಲಿಗೆ ಪೊಲೀಸ್​ ತಂಡದೊಂದಿಗೆ ಹೋದ ಬಾಲಕಿ ಎಸ್​ಐ ಅವರನ್ನು ಹಿಡಿದುಕೊಟ್ಟಳು ಎನ್ನಲಾಗಿದೆ.
ಪಂಕಜ್​ ಜೈನ್​ ಮನೆಯಲ್ಲಿ 17 ವರ್ಷದ ಬಾಲಕಿ ಮನೆಗೆಲಸ ಮಾಡುತ್ತಿದ್ದಳು. ಕಳೆದ 10 ತಿಂಗಳಿಂದ ಆಕೆಯ ಮೇಲೆ ಎಸ್​ಐ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದರು. ಇವರ ಪೀಡನೆಗೆ ಬೇಸತ್ತು ಆಕೆ ಕೆಲಸ ಬಿಡಲು ಮುಂದಾದಾಗ, ಸುಳ್ಳು ಪೊಲೀಸ್​ ಕೇಸ್​ನಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಅನ್​​ಲಾಕ್​-2: ಇನ್ಮುಂದೆ ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಕರ್ಫ್ಯೂ…
ಸೋಮವಾರದಂದು (ಜು.20) ಉಜ್ಜೈನ್​ನ ಹೋಟೆಲ್​ ಬರುವಂತೆ ತಾಕೀತು ಮಾಡಿದ್ದ ಎಸ್​ಐ, ಬೇರೊಬ್ಬರ ಹೆಸರಿನಲ್ಲಿ ಕೊಠಡಿ ಕಾಯ್ದಿರಿಸಿದ್ದರು ಎನ್ನಲಾಗಿದೆ. ಪೀಡನೆಯಿಂದ ಬೇಸತ್ತಿದ್ದ ಬಾಲಕಿ ಇವರಿಂದ ಬಿಡುಗಡೆ ಪಡೆಯಲೇ ಬೇಕು ಎಂಬ ಗಟ್ಟಿ ನಿರ್ಧಾರ ಕೈಗೊಂಡು, ಸ್ಥಳೀಯ ಪೊಲೀಸ್​ ತಂಡದೊಂದಿಗೆ ಹೋಟೆಲ್​ಗೆ ತೆರಳಿದ್ದಳು.
ಮೊದಲು ಒಳ ಹೋದ ಪೊಲೀಸರಿಗೆ ಪಂಕಜ್​ ಜೈನ್​ ಏನೇನೋ ಸಬೂಬು ಹೇಳಿ ಸಾಗಹಾಕಲು ಯತ್ನಿಸಿದ್ದರು. ಆದರೆ, ಬಾಲಕಿ ಕೊಠಡಿಗೆ ಬಂದು ವಾಸ್ತವವನ್ನು ವಿವರಿಸಿದ ನಂತರದಲ್ಲಿ ನಿರುತ್ತರರಾದ ಪಂಕಜ್​ ಜೈನ್​ ಪೊಲೀಸರಿಗೆ ಶರಣಾದರು ಎನ್ನಲಾಗಿದೆ.
ಈ ವಿಷಯವನ್ನು ತಿಳಿಸಿದ ಉಜ್ಜೈನ್​ನ ಸಿಎಸ್​ಪಿ ರಜನೀಶ್​ ಕಶ್ಯಪ್​, ಸದ್ಯ ಪಂಕಜ್​ ಜೈನ್ ಅವರನ್ನು ಬಂಧಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
