ಅಲಿರಾಜ್​ಪುರ್​:ಹುಡುಗನೊಂದಿಗೆ ಮೊಬೈಲ್​ನಲ್ಲಿ ಮಾತನಾಡಿದಳೆಂಬ ಸಂಶಯದಿಂದ ತನ್ನ ಕುಟುಂಬದ ನಾಲ್ವರು ಸದಸ್ಯರಿಂದಲೇ ಅಪ್ರಾಪ್ತ ಬಾಲಕಿ ಥಳಿತಕ್ಕೊಳಗಾಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಅಪ್ರಾಪ್ತೆಯನ್ನು ಸಾರ್ವಜನಿಕವಾಗಿ ಥಳಿಸಿದ್ದಲ್ಲದೆ ಆಕೆಯ ಜಡೆಯನ್ನು ತುಂಡರಿಸಿದ್ದಾರೆ. ಇದನ್ನು ಮೂಕ ಪ್ರೇಕ್ಷಕರಾಗೇ ನೋಡುತ್ತಾ ನಿಂತಿದ್ದ ಸಾರ್ವಜನಿಕರಲ್ಲಿ ಯಾರೊಬ್ಬರು ಆಕೆಯನ್ನು ಕಾಪಾಡಲು ಮುಂದೆ ಬರದೇ ಇದ್ದುದ್ದು ದುರಾದೃಷ್ಟವೇ ಸರಿ.
ಜನರು ನಾಚಿಕೆ ಪಡುವಂತಹ ಘಟನೆ ನಡೆದಿರುವುದು ಮಧ್ಯಪ್ರದೇಶದ ಅಲಿರಾಜ್​ಪುರದ ಸೊಂದ್ವಾ ಏರಿಯಾದಲ್ಲಿ. ಇದೇ ವೇಳೆಯಲ್ಲಿ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉಪವಲಯ ಪೊಲೀಸ್​ ಅಧಿಕಾರಿ ಧೀರಜ್​ ಬಾಬ್ಬರ್​, ಎಫ್​ಐಆರ್​ ದಾಖಲಿಸಲಾಗಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಹೊತ್ತಿಸಿದ್ದು, ಅನೇಕರು ಇದೊಂದು ಅಸಹ್ಯಕರ ಎಂದು ಜರಿದಿದ್ದಾರೆ. ಇದಲ್ಲದೆ ಅನೇಕರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
