ದೆಹಲಿ:ಅಪ್ರಾಪ್ತೆಗೆ 20 ಬಾರಿ ಇರಿದು, ನಂತರ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ದೆಹಲಿಯ ಶಹಾಬಾದ್ ಡೈರಿ ಪ್ರದೇಶದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಾಕ್ಷಿ(16) ಎಂದು ಗುರುತಿಸಲಾಗಿದ್ದು, ಸಾಹಿಲ್​ ಆಕೆಯನ್ನು ಹತ್ಯೆಗೈದ ಆರೋಪಿಯಾಗಿದ್ದು ಆತನ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿ ಸಾಹಿಲ್​, ತನ್ನ ಮನೆಯ ಹೊರಗೆ ಅಪ್ರಾಪ್ತೆಗೆ ಇರಿದ ನಂತರ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಆಕೆಯ ಮುಖವನ್ನು ಜಜ್ಜಿ ಹಾಕಿದ್ದಾನೆ. ದಾರಿಹೋಕರ ಮುಂದೆಯೇ ಈ ಭೀಕರ ಕೃತ್ಯ ನಡೆದಿದ್ದು, ಅಸಹಾಯಕತೆಯಿಂದ ದುಷ್ಕರ್ಮಿಯು ಹೇಯ ಕೃತ್ಯ ನಡೆಸುತ್ತಿರುವುದನ್ನು ನೋಡಿ ದಿಗ್ಭ್ರಮೆಗೊಂಡರು.
ಈ ಕುರಿತು ಮಾತನಾಡಿರುವ ಪೊಲೀಸರು, ಮೃತ ಸಾಕ್ಷಿ ಹಾಗೂ ಆಕೆಯ ಬಾಯ್​ಫ್ರೆಂಡ್​ ಸಾಹಿಲ್ ನಿನ್ನೆ ಸಾಯಂಕಾಲ ಜಗಳವಾಡಿದ್ದರು. ಈ ಹಿನ್ನೆಲೆ ಆಕೆಯನ್ನು ಆತ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.(ಏಜನ್ಸೀಸ್)​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − nine =
Remember me
