ಜೈಪುರ:ಅತ್ಯಾಚಾರ ಪ್ರಕರಣವೊಂದು ಪೊಲೀಸರನ್ನೇ ತಬ್ಬಿಬ್ಬು ಮಾಡಿದ ಪ್ರಸಂಗ ರಾಜಸ್ಥಾನದ ಸಿರೋಹಿಯಲ್ಲಿ ನಡೆದಿದೆ.
ವಾಶ್​ ರೂಮ್​ಗೆ ತೆರಳಿದಾಗ ನನ್ನ ಮೇಲೆ ಅತ್ಯಾಚಾರ ನಡೆಯಿತು. ಆರೋಪಿ ನನ್ನನ್ನು ಹೆಸರಿಸಿ ಆಟೋದಲ್ಲಿ ಮನೆಗೆ ಕಳುಹಿಸಿದನು ಎಂದು ನ.28ರಂದು ಅಪ್ರಾಪ್ತೆಯೊಬ್ಬಳು ಸಿರೋಹಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸಂತ್ರಸ್ತೆಯ ನೆರವಿನಿಂದ ಡಿ.5ರಂದು ಆರೋಪಿಯನ್ನು ಬಂಧಿಸಿದರು.
ಇದಾದ ಬಳಿಕ ಆರೋಪಿಯನ್ನು ವೈದ್ಯಕೀಯ ಚಿಕಿತ್ಸೆ ಒಳಪಡಿಸಿದಾಗ ಆತ ಪುರುಷನಲ್ಲ ಮಹಿಳೆ ಎಂಬ ಶಾಕಿಂಗ್​ ಸಂಗತಿ ಬಯಲಾಗಿದ್ದು, ಪೊಲೀಸರೇ ತಬ್ಬಿಬ್ಬಾಗಿದ್ದಾರೆ. ಪುರುಷನ ವೇಷದಲ್ಲಿದ್ದ ಮಹಿಳೆಯಿಂದಲೇ ಕೃತ್ಯ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.
ಆರಂಭದಲ್ಲಿ ಅತ್ಯಾಚಾರ ಎಂದು ದೂರು ದಾಖಲಾಗಿತ್ತು. ಆದರೆ, ಯಾವಾಗ ಆರೋಪಿ ಪುರುಷನಲ್ಲ, ಮಹಿಳೆ ಅಂತಾ ಗೊತ್ತಾದಾ ಅತ್ಯಾಚಾರ ಪ್ರಕರಣವನ್ನು ಕೈಬಿಟ್ಟು, ಅಪಹರಣ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಉದ್ದೇಶ ತಕ್ಷಣಕ್ಕೆ ತಿಳಿದುಬಂದಿಲ್ಲ. ಪೊಲೀಸರ ಪ್ರಕಾರ, ಪತಿಯಿಂದ ದೂರವಾಗಿರುವ ಆರೋಪಿ ಮಹಿಳೆ ತನ್ನ ಜೀವನೋಪಾಯಕ್ಕಾಗಿ ಮಹಿಳೆ ವೇಷ ಧರಿಸಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಮದುವೆಗಳಲ್ಲಿ ಮೇಜುಗಳನ್ನು ಹಾಕುವುದು, ಅಡುಗೆ ಮಾಡುವುದು ಅಥವಾ ದೀಪಗಳನ್ನು ಹಿಡಿಯುವುದು ಮುಂತಾದ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
Rajasthan | On 28th Nov, a minor from Sirohi registered a complaint that she was raped when she went to a washroom. We conducted the probe & arrested the accused. During the medical test, it was revealed that the accused is a woman, not man: Maya Pandit, Station Officer, Sirohipic.twitter.com/9H3R8R0E5j
— ANI MP/CG/Rajasthan (@ANI_MP_CG_RJ)December 17, 2022

ಶಾಲಾ ಬಸ್​ನಲ್ಲಿ ಮನೆಗೆ ಮರಳುವಾಗ ಹೃದಯಾಘಾತದಿಂದ 4ನೇ ತರಗತಿ ವಿದ್ಯಾರ್ಥಿ ಸಾವು

ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆಯೊಡ್ಡಿ ನಾಲಿಗೆ ಹರಿಬಿಟ್ಟ ಪಾಕ್​ ನಾಯಕಿ!

ಕ್ಲಾಸ್​ಮೇಟ್​ಗೆ ವಾಟ್ಸ್​ಆ್ಯಪ್​ ಮೆಸೇಜ್​ ಮಾಡಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ: ನಂತರ ನಡೆದಿದ್ದು ದುರಂತ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 11 =
Remember me
