ಹಳ್ಳಿಯೊಂದರಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆಗೆಂದು ಇಡಲಾಗಿದ್ದ ಹಣ್ಣುಗಳನ್ನು ಕದ್ದು ತಿಂದರೆಂದು ಆರೋಪದಲ್ಲಿ ಇಬ್ಬರು ಬಾಲಕರನ್ನು ಮನಸೋಇಚ್ಛೆ ಥಳಿಸಲಾಗಿದೆ.
ಉತ್ತರಪ್ರದೇಶದ ಮಥುರಾ ಜಿಲ್ಲೆಯ ಮಂಥ್​ ಬಳಿ ನಸೀತಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಗ್ರಾಮದ ಶಾಲೆ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಬಳಿಕ ಪ್ರಸಾದವಾಗಿ ನೀಡಲು ಹಣ್ಣುಗಳನ್ನು ಶಾಲೆಯ ಒಳಗೆ ಕೋಣೆಯಲ್ಲಿ ಇಡಲಾಗಿತ್ತು. ಗ್ರಾಮದ ಇಬ್ಬರು ಬಾಲಕರು ಕೋಣೆಗೆ ಅದನ್ನು ತೆಗೆದುಕೊಂಡು ಹೋಗಿ ತಿಂದಿದ್ದಾರೆ.
ಇದನ್ನೂ ಓದಿ;ಮಾಸ್ಕ್​, ಸ್ಯಾನಿಟೈಸರ್​ ನೀಡೋದಾಗಿ ಮನೆಗೆ ಬಂದ್ರು; 8 ವರ್ಷದ ಬಾಲಕನ ಅಪಹರಿಸಿ 4 ಕೋಟಿ ರೂ.ಗೆ ಬೇಡಿಕೆಯಿಟ್ರು
ಕಾರ್ಯಕ್ರಮ ಆಯೋಜಿಸಿದ್ದ ಯುವಕರಿಗೆ ಇದು ಗೊತ್ತಾಗುತ್ತಿದ್ದಂತೆ, ಇಬ್ಬರನ್ನೂ ಹಿಡಿದು ತಂದು ಶಾಲೆಯ ಬಳಿ ಕಟ್ಟಿ ಹಾಕಿದ್ದಾರೆ. ಮನ ಬಂದಂತೆ ಥಳಿಸಿದ್ದಾರೆ. ಸುತ್ತಲೂ ಜನ ನೋಡುತ್ತಿದ್ದರೂ ಯಾರೂ ರಕ್ಷನೆಗೆ ಮುಂದಾಗಿಲ್ಲ.
ಬಾಲಕನೊಬ್ಬನ ತಂದೆಗೆ ಈ ವಿಚಾರ ಗೊತ್ತಾಗಿ ಸ್ಥಳಕ್ಕೆ ತೆರಳಿದ್ದಾರೆ. ಮಗನ ಆವಸ್ಥೆ ಕಂಡು ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿದ್ದಾರೆ. ಮಕ್ಕಳನ್ನು ಬಿಡಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಜನರು ಗಲಾಟೆ ಮಾಡಿದ ಬಳಿಕ ಥಳಿಸಿದವರ ವಿರುದ್ಧ ಎಫ್ಐಆರ್​ ದಾಖಲು ಮಾಡಿಕೊಂಡಿದ್ದಾರೆ.
ಧರ್ಮ ಮುಚ್ಚಿಟ್ಟು ಪ್ರೀತಿ ನಾಟಕ; ಲವ್​ ಜಿಹಾದ್​ಗೆ ಮಹಿಳೆ- ಮಗಳು ಬಲಿ; ಇಬ್ಬರನ್ನೂ ಕೊಂದು ಮನೆಯಲ್ಲಿ ಹೂತು ಹಾಕಿದ ಪಾಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 2 =
Remember me
