ಇಂಫಾಲ್ :ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ವಿಜಯ ಪತಾಕೆ ಹಾರಿಸಿ, ಇಂದು ದೇಶಕ್ಕೆ ಮರಳಿದ ವೇಯ್ಟ್​ ಲಿಫ್ಟರ್​ ಸೈಖೋಂ ಮೀರಾಬಾಯಿ ಚಾನು ಅವರನ್ನು ಮಣಿಪುರ ಪೊಲೀಸ್​ ಇಲಾಖೆಯಲ್ಲಿ ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್​ ಆಗಿ ನೇಮಕ ಮಾಡಲಾಗುವುದು ಎಂದು ರಾಜ್ಯದ ಸಿಎಂ ಎನ್​.ಬೈರೆನ್ ಸಿಂಗ್ ಹೇಳಿದ್ದಾರೆ.
ರಾಜ್ಯಕ್ಕೆ ಕೀರ್ತಿ ತಂದಿರುವ ಚಾನು ಅವರಿಗೆ 1 ಕೋಟಿ ರೂ. ಬಹುಮಾನವನ್ನೂ ನೀಡಲಾಗುವುದು ಎಂದಿರುವ ಸಿಎಂ ಸಿಂಗ್, ರಾಜ್ಯದಲ್ಲಿ ಶೀಘ್ರವಾಗಿಯೇ ವಿಶ್ವ ದರ್ಜೆಯ ವೇಯ್ಟ್​ ಲಿಫ್ಟಿಂಗ್ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:ಬಿಎಸ್​ವೈ ರಾಜೀನಾಮೆ: ಅಚ್ಚರಿ ಮೂಡಿಸಿದೆ ಕೇಂದ್ರ ನಾಯಕರ ಮೌನ!
ರಾಜ್ಯದ ಜೂಡೋ ಆಟಗಾರ್ತಿ ಎಲ್.ಸುಶೀಲಾ ದೇವಿ ಅವರಿಗೆ ಕಾನ್​​ಸ್ಟೆಬಲ್ ಹುದ್ದೆಯಿಂದ ಸಬ್​ಇನ್ಸ್​ಪೆಕ್ಟರ್ ಆಗಿ ಬಡ್ತಿ ನೀಡಲಾಗುವುದು. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೂ ಮಣಿಪುರ ಸರ್ಕಾರದ ವತಿಯಿಂದ ತಲಾ 25 ಲಕ್ಷ ರೂಪಾಯಿ ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.
ಒಲಿಂಪಿಕ್ಸ್​ನಲ್ಲಿ 49 ಕೆಜಿ ಮಹಿಳೆಯರ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಚಾನು ಅವರಿಗೆ ದೇಶದಾದ್ಯಂತದಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಚಾನು ಸೇರಿದಂತೆ ಮಣಿಪುರದಿಂದ 5 ಅಥ್ಲೀಟ್​ಗಳು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದಾರೆ.(ಏಜೆನ್ಸೀಸ್)
ಭಾರತದ ಮೀರಾಬಾಯಿ ಚಾನುಗೆ ದಕ್ಕಬಹುದೇ ಚಿನ್ನ?!

ಕಾಲುಗಳನ್ನು ಬಲಪಡಿಸಲು ತ್ರಿಕೋನಾಸನ ಅಭ್ಯಾಸ ಮಾಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
