ಪಾಟ್ನಾ:ಇದು ಪತಿ-ಪತ್ನಿ ಇಬ್ಬರೂ ಜತೆಗಿದ್ದಾಗ ಎದುರಾದ ಸಂಕಟ. ಗಂಡ ಕೇಳಿದಾಕ್ಷಣ ಕೊಟ್ಟುಬಿಟ್ಟ, ಆದರೆ ಪತ್ನಿ ಕೊಡಲು ವಿರೋಧಿಸಿದಳು. ಅಷ್ಟಕ್ಕೇ ಸಿಟ್ಟಾದ ದುಷ್ಕರ್ಮಿಗಳು ಆ ಮಹಿಳೆಯ ತಲೆಗೆ ಗುಂಡಿಕ್ಕಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಸಾಯ್ಖಾ ಪರ್ವೀನ್​ ಹಾಗೂ ಇಮ್ರಾನ್ ಅಲಂ ದಂಪತಿ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಇಂಥದ್ದೊಂದು ಪ್ರಕರಣ ನಡೆದಿದೆ. ಖಾಸಗಿ ಬ್ಯಾಂಕ್ ಉದ್ಯೋಗಿ ಆಗಿರುವ ಇಮ್ರಾನ್​ ಅಲಂ ತನ್ನೂರಿಗೆ ಪತ್ನಿಯೊಂದಿಗೆ ತೆರಳುತ್ತಿದ್ದಾಗ ಎದುರಾದ ಆಗಂತುಕರು ಈ ದುಷ್ಕೃತ್ಯ ಎಸಗಿದ್ದಾರೆ.
ಬಿಹಾರದ ಸಿವಾನ್​ನಲ್ಲಿ ಉದ್ಯೋಗದಲ್ಲಿರುವ ಅಲಂ, ತನ್ನೂರು ದೆಹ್ರಿ ಆನ್​ಸಾನ್​ಗೆ ತೆರಳುತ್ತಿದ್ದರು. ಅದಕ್ಕಾಗಿ ಪಾಟ್ನಾ ರೈಲ್ವೆ ನಿಲ್ದಾಣಕ್ಕೆ ಅವರು ಆಟೋದಲ್ಲಿ ಸಾಗುತ್ತಿದ್ದಾಗ ಚಿರೈಯಾತಾಧ್​ ಫ್ಲೈ ಓವರ್​ ಮೇಲೆ ಮತ್ತೊಂದು ಆಟೋದಲ್ಲಿ ಬಂದ ಆಗಂತುಕರು ಇವರಿದ್ದ ಆಟೋ ನಿಲ್ಲಿಸುವಂತೆ ಚಾಲಕನಿಗೆ ಸೂಚನೆ ನೀಡಿದ್ದರು.
ಆಟೋ ನಿಲ್ಲುತ್ತಿದ್ದಂತೆ ಎರಡು ಪ್ರತ್ಯೇಕ ಬೈಕ್​ಗಳಲ್ಲಿ ಬಂದ ಇಬ್ಬರು ಪರ್ವೀನ್ ಮತ್ತು ಇಮ್ರಾನ್ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ಹೆದರಿಸಿದ್ದರು. ಬೆದರಿದ ಪತಿ ತನ್ನಲ್ಲಿದ್ದುದನ್ನು ತಕ್ಷಣ ಕೊಟ್ಟುಬಿಟ್ಟ. ಆದರೆ ಪತ್ನಿ ಪರ್ವೀನ್​ ಏನನ್ನೂ ಕೊಡಲು ನಿರಾಕರಿಸಿ, ವಿರೋಧ ವ್ಯಕ್ತಪಡಿಸಿದಾಗ ಸಿಟ್ಟಾದ ದುಷ್ಕರ್ಮಿಗಳು ಆಕೆಯ ತಲೆಗೆ ಶೂಟ್​ ಮಾಡಿದ್ದಾರೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರ ಬಳಿ ಇದ್ದಿದ್ದನ್ನು ದುಷ್ಕರ್ಮಿಗಳು ದೋಚಿಕೊಂಡು ಹೋಗಿದ್ದಾರೆ. ಈ ಸಂಬಂಧ ಇಮ್ರಾನ್​ ಪಾಟ್ನಾ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. (ಏಜೆನ್ಸೀಸ್​)
Video | ಆಮೇಲ್​ ಕೊಡ್ತೀನಿ ಎಂದ, ನಂತರ ಕೊಟ್ಟಿದ್ದೇ ಬೇರೆ!; ಇವರಿಬ್ಬರು ಬರೀ 5 ರೂ.ಗೆ ನಡುರಸ್ತೇಲಿ ಹೀಗಾ ಮಾಡೋದು!?

2.5 ಕೋಟಿ ದಂಪತಿಗಳಿಗೆ ಅದೇ ಸಿಗಲಿಲ್ವಂತೆ; ಕರೊನಾದಿಂದಾಗಿ ಶಿಶುಜನನ ಪ್ರಮಾಣ ಶೀಘ್ರ ಹೆಚ್ಚಳ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 15 =
Remember me
