ಅಲಿಗಢ:ದೇವಸ್ಥಾನದ ಆವರಣದಲ್ಲಿಯೇ ಸಾಧುವೊಬ್ಬ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಅಲಿಗಢದ ನೋಗ್ವಾ ಗ್ರಾಮದಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ರಾಮದಾಸ್​(70) ಎಂದು ಗುರುತಿಸಲಾಗಿದ್ದು, ಆತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರದಂದು ಬೆಳಿಗ್ಗೆ, ಸ್ಥಳೀಯ ಜನರು ಪೂಜೆ ಮತ್ತು ದರ್ಶನಕ್ಕಾಗಿ ದೇವಾಲಯವನ್ನು ತಲುಪಿದಾಗ, ಸನ್ಯಾಸಿಯ ಮೃತದೇಹವು ನೇಣು ಬಿಗಿದುಕೊಂಡಿರುವುದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:ಮಗಳ ಮದುವೆಯಲ್ಲಿ ಸಿಗರೇಟ್ ಸೇದುತ್ತಾ ಡ್ಯಾನ್ಸ್ ಮಾಡಿದ ಅಮ್ಮ; ವರ ಹೇಳಿದ್ದೇನು..?ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿಗಳು ರಾಮದಾಸ್​​ನ ಕತ್ತು ಹಿಸುಕಿ, ಆತನ ದೇಹವನ್ನು ಸುಡಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.ರಾಮದಾಸ್​​ ದೇವಸ್ಥಾನದಲ್ಲಿ ಏಕಾಂಗಿಯಾಗಿಯೇ ಇದ್ದು ಪೂಜೆ ಸಲ್ಲಿಸುತ್ತಿದ್ದು, ಈತನ ಕುಟುಂಬ ಸದಸ್ಯರು ಸಮೀಪದ ಪ್ರದೇಶದ ದಾಡೋ ಪೊಲೀಸ್ ಠಾಣೆಯ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಈತನ ಹತ್ಯೆ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + twenty =
Remember me
