ನವದೆಹಲಿ:2019 ನೇ ಸಾಲಿನ ‘ಮಿಸ್ ಇಂಡಿಯಾ ದೆಹಲಿ’ ಮಾನಸಿ ಸೇಹಗಲ್, ಆಮ್ ಆದ್ಮಿ ಪಾರ್ಟಿ(ಎಎಪಿ) ಸೇರುವ ಮೂಲಕ ಪಕ್ಷಕ್ಕೆ ಗ್ಲಾಮರ್ ಟಚ್ ನೀಡಿದ್ದಾರೆ. ಮಿಸ್​ ಇಂಡಿಯಾ ದೆಹಲಿ ಆಡಿಷನ್ಸ್​ನಲ್ಲಿ ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದ ಸೆಹಗಲ್, ಈಗ ಎಎಪಿ ಮೂಲಕ ಸಾರ್ವಜನಿಕ ಸೇವೆಯನ್ನು ಕೈಗೆತ್ತಿಕೊಳ್ಳಲು ಅಪೇಕ್ಷಿಸಿದ್ದಾರೆ ಎನ್ನಲಾಗಿದೆ.
ನೇತಾಜಿ ಸುಭಾಷ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ.ಟೆಕ್. ಪದವಿ ಗಳಿಸಿರುವ ಮಾನ್ಸಿ ಸೆಹಗಲ್, ದ್ವಾರಕಾದ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದವರು. ಸೇಹಗಲ್ ತಮ್ಮದೇ ಒಂದು ಐಟಿ ಸ್ಟಾರ್ಟ್​ಅಪ್​ ಅನ್ನು ಸಹ ನಡೆಸುತ್ತಾರೆ. ಅವರ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಬಗ್ಗೆ ಟೆಡ್​ಎಕ್ಸ್​ ಸ್ಪೀಕರ್, ಇಂಜಿನಿಯರ್ ಮತ್ತು ಎಂಟ್ರೆಪ್ರೆನರ್ ಎಂದು ಬಣ್ಣಿಸಿಕೊಂಡಿದ್ದಾರೆ.
ಇದನ್ನೂ ಓದಿ:“ನೀವು ಬೆಸ್ಟ್ ಮದರ್ ಇನ್ ಲಾ, ನಾನು ಅದೃಷ್ಟವಂತೆ”
ದೆಹಲಿ ಜಲ್ ಬೋರ್ಡ್​ ಉಪಾಧ್ಯಕ್ಷ ಮತ್ತು ಎಎಪಿ ನಾಯಕ ರಾಘವ್ ಛಡ್ಡ ಅವರ ಸಮ್ಮುಖದಲ್ಲಿ ಮಾನಸಿ ಸೆಹಗಲ್ ಎಎಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಛಡ್ಡ, ಪಕ್ಷದ ಸಿದ್ಧಾಂತ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಭಿವೃದ್ಧಿ ಕಾರ್ಯಗಳಿಂದ ಪ್ರೇರಿತರಾಗಿ ಮಾನಸಿ ಅವರು ಎಎಪಿ ಸೇರುತ್ತಿದ್ದಾರೆ ಎಂದರು.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಪ್ರಿಯಾಂಕಾರ ಆತ್ಮಚರಿತ್ರೆಯಲ್ಲಿದೆ … ‘ಪ್ಲಾಸ್ಟಿಕ್ ಚೋಪ್ರಾ’ ಆದ ಗುಟ್ಟು !
‘ಕ್ರಾಂತಿಕಾರಿ ಚಂದ್ರಶೇಖರ ಆಜಾದ್​ರ ಸಾವಿಗೆ ನೆಹರೂ ಕಾರಣ’ : ಬಿಜೆಪಿ ಶಾಸಕ
ಈ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕರೊನಾ ಲಸಿಕೆ ಉಚಿತ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 10 =
Remember me
