ಶ್ರೀನಗರ:ಆರುವರ್ಷಗಳ ಹಿಂದೆ 19 ವರ್ಷದ ಬಲಿಷ್ಠ ಯುವಕನೋರ್ವ ಪುಲ್ವಾಮಾದ ಸಾಂಬೂರಾ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 12ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು, ಆ ಪ್ರವಾಹದ ಮಧ್ಯೆಯೇ ಈಜಿಕೊಂಡು ಹೋಗಿ ರಕ್ಷಣೆ ಮಾಡಿದ್ದ. ಅಂದು ಅವನನ್ನು ದೊಡ್ಡ ಹೀರೋ ಎಂದೇ ಹೊಗಳಲಾಗಿತ್ತು.
ಬರಿ ಜನಸಾಮಾನ್ಯರಷ್ಟೇ ಅಲ್ಲ, ಸರ್ಕಾರವೇ ಆತನ ಕಾರ್ಯವನ್ನು ಶ್ಲಾಘಿಸಿತ್ತು . ಆ ಯುವಕ ಅಸಿಫ್​ ಮುಜಾಫರ್​ ಮಿರ್​ಗೆ ಈಗ 25ವರ್ಷ. ಆದರೆ ಈಗ ಈತ ಉಗ್ರ ಸಂಘಟನೆ ಸೇರಿಕೊಂಡಿದ್ದಾನೆ. ಆಸಿಫ್​ ಉಗ್ರರ ಜತೆ ಕೈಸೇರಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.ಇದನ್ನೂ ಓದಿ:ಆತ್ಮಹತ್ಯಾ ದಾಳಿಗೆ ಸ್ಫೋಟಕಗಳಿದ್ದ ಬೆಲ್ಟ್​, ಜಾಕೆಟ್​ ಸಿದ್ಧಪಡಿಸಿದ್ದ ಐಸಿಸ್​ ಉಗ್ರ; ಪೊಲೀಸರಿಂದ ಬಾಂಬ್​ ನಿಷ್ಕ್ರಿಯ
ಆಗಸ್ಟ್​ 10ರಂದು ಆಸಿಫ್ ಕಾಣೆಯಾಗಿದ್ದಾನೆ. ಅಂದು ಅಂಗಡಿಗೆ ಹೋದವನು ಸಂಜೆ ಮನೆಗೆ ಬಂದಿಲ್ಲ. ನಾವು ಸ್ವಲ್ಪ ದಿನ ಅವನಿಗಾಗಿ ಕಾದೆವು. ಎಲ್ಲೋ ಸ್ನೇಹಿತರ ಜತೆ ಹೋಗಿದ್ದಾನೆ ಎಂದೇ ಭಾವಿಸಿದ್ದೆವು. ಆದರೆ ನಾಲ್ಕೈದು ದಿನಗಳಾದರೂ ವಾಪಸ್​ ಬಾರದಾಗ ಪೊಲೀಸರಿಗೆ ದೂರು ನೀಡಿದೆವು ಎಂದು ಆಸಿಫ್​ ಕುಟುಂಬದವರು ತಿಳಿಸಿದ್ದಾರೆ.
ಆದರೆ ತನಿಖೆಯ ನಂತರ ಹೊರಬಿದ್ದಿದ್ದು ಬೆಚ್ಚಿಬೀಳಿಸುವ ಸತ್ಯವಾಗಿತ್ತು. ಆಸಿಫ್​ ಜೈಶ್​ ಎ ಮೊಹಮ್ಮದ್​ ಉಗ್ರಸಂಘಟನೆಗೆ ಸೇರ್ಪಡೆಯಾಗಿದ್ದಾನೆ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ.ಇದನ್ನೂ ಓದಿ:ಮಿಸ್ಟರ್ ಡಿಕೆಶಿ, ನೀವು ಜಾಮೀನಿನ ಮೇಲೆ ಹೊರಗಿದ್ದೀರಿ ಎಂಬುದನ್ನ ಅರಿತುಕೊಳ್ಳಿ; ಪ್ರಹ್ಲಾದ್ ಜೋಶಿ
ಆದರೆ ಆಸಿಫ್​ ಇತ್ತೀಚೆಗೆ ಹಲವು ಬಾರಿ ಪೊಲೀಸರಿಂದ ಬಂಧಿತನಾಗಿದ್ದ. ಎರಡು ತಿಂಗಳು ಶ್ರೀನಗರ ಜೈಲಿನಲ್ಲಿಯೂ ಇದ್ದ. ಕೆಲವು ಪ್ರಕರಣಗಳ ವಿಚಾರಣೆಗಳಿಗಾಗಿಯೂ ಈತನನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು ಎಂದು ಕುಟುಂಬದವರೇ ಮಾಹಿತಿ ನೀಡಿದ್ದಾರೆ.
ಆಸಿಫ್​ ಪದವೀಧರ. ಈತನ ತಂದೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಈಗ ನಿವೃತ್ತರಾಗಿದ್ದಾರೆ. ಆಸಿಫ್​​ಗೆ ಓರ್ವ ತಮ್ಮನಿದ್ದು, ಆತ11ನೇ ತರಗತಿಯಲ್ಲಿ ಓದುತ್ತಿದ್ದಾನೆ. (ಏಜೆನ್ಸೀಸ್​)
ಅಸ್ಸಾಂ ಸಿಎಂ ಅಭ್ಯರ್ಥಿಯಾಗ್ತಾರಾ ಸುಪ್ರೀಂಕೋರ್ಟ್​ ನಿವೃತ್ತ ಮುಖ್ಯ ನಾಯಮೂರ್ತಿ? ರಂಜನ್​ ಗೊಗೊಯ್​ ಹೇಳೋದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
