ಕೂಕ್​ವಿಲ್ಲೆ (ಅಮೆರಿಕ):ಈ ಘಟನೆ ಶುರುವಾಗುವುದು ಮಾರ್ಚ್​ 3ರಿಂದ. ಅಂದು ನಸುಕಿನ ಸುಮಾರು 2 ಗಂಟೆಯ ಸಮಯ. ಸಂಪೂರ್ಣ ಅಮೆರಿಕ ಸವಿನಿದ್ದೆಯಲ್ಲಿದ್ದಾಗ, ಭಯಾನಕ ಸುಂಟರಗಾಳಿಯೊಂದು ಅರ್ಧಕ್ಕಿಂತ ಹೆಚ್ಚಿನ ಅಮೆರಿಕ ಪ್ರದೇಶಕ್ಕೆ ಬಡಿದಪ್ಪಳಿಸಿತು. ಇದೇನಿದು ಭಯಂಕರ ಶಬ್ದ ಎಂದು ಕಣ್ಣು ಬಿಡುವ ಮೊದಲೇ 26 ಮಂದಿ ಪ್ರಾಣ ಕಳೆದುಕೊಂಡರು. ಸಹಸ್ರಾರು ಮಂದಿ ಗಂಭೀರವಾಗಿ ಗಾಯಗೊಂಡರು.ಬಿರುಗಾಳಿಗೆ ತತ್ತರಿಸಿದ ಪ್ರದೇಶಗಳ ಪೈಕಿ ಟೆನ್ನೇಸಿ ಕೂಡ ಒಂದು. ಎರಿಕ್​ ಮತ್ತು ಫೇತ್ ಜಾನ್ಸ್​ನ್​ ದಂಪತಿ ಇಲ್ಲಿ ವಾಸವಾಗಿದ್ದಾರೆ. ಅವರ ಮನೆಯ ಮುದ್ದಿನ ಮಗಳೇ ಆರು ವರ್ಷದ ಬೆಲ್ಲಾ. ಇದು ಆಸ್ಟ್ರೇಲಿಯನ್ ಶೆಫರ್ಡ್ ನಾಯಿ. ಈ ದಂಪತಿಗೆ ಮೂವರು ಮಕ್ಕಳು. ಆ ಮಕ್ಕಳಂತೆಯೇ ಈ ನಾಯಿಯನ್ನೂ ಮನೆಯ ಮಗಳಂತೆಯೇ ಸಾಕಿದ್ದರು.ಸುಂಟರಗಾಳಿ ಇನ್ನೂ ಇವರ ಮನೆಯ ಬಳಿ ರೌದ್ರಾವತಾರ ತೋರಿಸಿರಲಿಲ್ಲ. ಅದಾಗಲೇ ಬೆಲ್ಲಾ ಜೋರಾಗಿ ಕಿರುಚತೊಡಗಿತು. ಅಪಾಯದ ಮುನ್ಸೂಚನೆ ಮನುಷ್ಯರಿಂತ ಮೊದಲೇ ಪ್ರಾಣಿಗಳಿಗೆ ಸಿಗುತ್ತದೆಯಲ್ಲವೆ? ಅದೇ ರೀತಿ ಬೆಲ್ಲಾಗೆ ಕೂಡ ಮುನ್ಸೂಚನೆ ಸಿಕ್ಕಿಬಿಟ್ಟಿತ್ತು. ಮನೆಯಲ್ಲಿಯೇ ಕಟ್ಟಿಹಾಕಿದ್ದ ಈ ನಾಯಿಗೆ ತನ್ನ ಯಜಮಾನ, ಯಜಮಾನಿಯನ್ನು ಹೇಗೆ ಏಳಿಸುವುದು ಎಂದು ತಿಳಿಯಲೇ ಇಲ್ಲ. ಆದರೂ ತನ್ನ ಪ್ರಯತ್ನ ಬಿಡಲಿಲ್ಲ. ಅತ್ಯಂತ ಕೆಟ್ಟದಾಗ ಕರ್ಕಶ ದನಿಯಿಂದ ಬೊಗಳತೊಡಗಿತು. ಆಗ ಈ ದಂಪತಿ ಅತ್ಯಂತ ಭಯದಿಂದ ಎಚ್ಚರಗೊಂಡು ನಾಯಿಯತ್ತ ನೋಡಿದರು. ಅದು ಕಣ್ಣಲ್ಲಿಯೇ ಮುಂದೆ ಆಗಬಹುದಾದ ಅನಾಹುತದ ಬಗ್ಗೆ ವಿವರಿಸಿಬಿಟ್ಟಿತು.ನಾಯಿಯ ವರ್ತನೆ ಕಂಡ ಈ ದಂಪತಿಗೆ ಸಂದೇಹ ಉಂಟಾಗಿ ಹೊರಗಡೆ ಬಂದು ನೋಡಿದರು. ಆದರೆ ಎಲ್ಲವೂ ಶಾಂತವಾಗಿಯೇ ಇತ್ತು. ಆಗ ನಾಯಿಯ ಕಡೆ ಪ್ರಶ್ನಾರ್ಥಕವಾಗಿ ಮುಖ ಮಾಡಿದಾಗ ಅದು ಟಿ.ವಿಯ ಕಡೆ ನೋಡತೊಡಗಿತು. ಕೂಡಲೇ ದಂಪತಿ ಟಿ.ವಿ ಆನ್​ ಮಾಡಿದರು. ಅದಾಗಲೇ ಅಲ್ಲಿ ಸುಂಟರಗಾಳಿಯ ಬಗ್ಗೆ ಸುದ್ದಿ ಬಿತ್ತರಗೊಳ್ಳುತ್ತಿತ್ತು. ಇನ್ನೇನು ತಮ್ಮ ಮನೆಯ ಸಮೀಪ ಕೆಲವೇ ಕ್ಷಣಗಳಲ್ಲಿ ಇದು ಅಪ್ಪಳಿಸಲಿದೆ ಎಂಬ ಮಾಹಿತಿ ದಂಪತಿಗೆ ಸಿಕ್ಕಿತು.ತಡ ಮಾಡದೇ ಇಬ್ಬರೂ ಮಕ್ಕಳನ್ನು ಕರೆದುಕೊಂಡು ಸುರಕ್ಷಿತ ಸ್ಥಳಕ್ಕೆ ಧಾವಿಸಿದರು. ಅದಾದ ಕೆಲವೇ ನಿಮಿಷಗಳಲ್ಲಿ ಸುಂಟರಗಾಳಿ ಇವರ ಮನೆಗೂ ಅಪ್ಪಳಿಸಿ, ಅವರ ಕಟ್ಟಡ ಕುಸಿಯಿತು. ಅವರ ಮನೆ ಮಗಳು ಬೆಲ್ಲಾಳಿಂದ ಮೂರು ಮಕ್ಕಳು ಮತ್ತು ದಂಪತಿ ಬಚಾವಾಗಿದ್ದರು.‘ಅಬ್ಬಾ’ ಎಂದು ನಿಟ್ಟುಸಿರು ಬಿಟ್ಟರು. ಆದರೆ ಅಕ್ಕಪಕ್ಕ ಎಲ್ಲಿ ನೋಡಿದರೂ ಬೆಲ್ಲಾಳ ಪತ್ತೆಯೇ ಸಿಗಲಿಲ್ಲ. ಎಲ್ಲಿ ಹುಡುಕಿದರೂ ಸಿಗಲೇ ಇಲ್ಲ. ಒಂದು ದಿನ, ಎರಡು ದಿನ, ಒಂದು ವಾರ… ಕಾದು ಕಾದು ಸೋತು ಹೋದರು ಈ ದಂಪತಿ. ತಮ್ಮ ಪ್ರೀತಿಯ ನಾಯಿಯನ್ನು ಕಳೆದುಕೊಂಡ ಮಕ್ಕಳ ದುಃಖವಂತೂ ಮುಗಿಲುಮುಟ್ಟಿತ್ತು. ಒಂದು ತಿಂಗಳು ಮೀರಿದರೂ ನಾಯಿಯ ಪತ್ತೆಯೇ ಇರಲಿಲ್ಲ, ಅಂದಿನ ಸುಂಟರಗಾಳಿಯಲ್ಲಿ ಸಿಲುಕಿ ತಮ್ಮ ಮಗಳು ಸತ್ತೇ ಹೋದಳು ಎಂದುಕೊಂಡರು ದಂಪತಿ. ಎಲ್ಲ ಆಸೆಯನ್ನೂ ಬಿಟ್ಟಾಗಿತ್ತು.ಹೀಗೆ 54 ದಿನ ಕಳೆದು ಹೋಯಿತು. ಅದೊಂದು ದಿನ ಯಾರೂ ಊಹಿಸಲಾರದ ಘಟನೆ ನಡೆಯಿತು. ಅದೇನೆಂದರೆ ಬೆಲ್ಲಾ ಮನೆಗೆ ವಾಪಸಾಗಿದ್ದಳು. ಮನೆಯವರು ತಮ್ಮ ಕಣ್ಣುಗಳನ್ನೇ ನಂಬದಾದರು. ತೀರಾ ಸೋತು ಸಣ್ಣಗಾಗಿದ್ದ ಬೆಲ್ಲಾ ಮನೆಯವರನ್ನು ನೋಡುತ್ತಿದ್ದಂತೆಯೇ ಹರ್ಷದಿಂದ ಕಣ್ಣೀರು ಸುರಿಸತೊಡಗಿತು. ಇನ್ನು ಮನೆಯವರ ಬಗ್ಗೆ ಬೇರೆ ಹೇಳಬೇಕೆ? ಅಪ್ಪಿ, ಮುದ್ದಾಡಿದರು. ಎಲ್ಲಿಗೆ ಹೋಗಿದ್ದಿ ಇಲ್ಲಿಯವರೆಗೆ ಎಂದು ಹುಸಿ ಮುನಿಸನ್ನೂ ತೋರಿದರು. ಆ ನಾಯಿ ಅದೇನು ಹೇಳಿತೋ, ಅದಕ್ಕೇನು ಆಗಿತ್ತೋ, ಇಷ್ಟು ದಿನ ಎಲ್ಲಿ ಹೋಗಿತ್ತೋ ಒಂದೂ ಮನೆಯವರಿಗೆ ತಿಳಿಯಲಿಲ್ಲ. ಅಂತೂ ಮನೆಯ ಮಗಳು ವಾಪಸ್ಸಾಗಿದ್ದಷ್ಟೇ ಅವರಿಗೆ ಸಿಕ್ಕ ಖುಷಿ. ತಮ್ಮ ಐದು ಜೀವವನ್ನು ಉಳಿಸಿದಾಕೆ ಅವಳಲ್ಲವೆ? ನಂಬಿಗಸ್ಥ ಶಬ್ದಕ್ಕೆ ಪರ್ಯಾಯವೆನಿಸಿದೆ ನಾಯಿ. ಇದಕ್ಕೆ ಈ ಪ್ರಕರಣವೂ ಒಂದು ಸಾಕ್ಷಿಯಾಗಿದೆ. (ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × four =
Remember me
