ಕೇರಳ:ಮಕ್ಕಳು ಮನೆ ಬಿಟ್ಟು ಹೋಗುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಇಲ್ಲಿ ವಿವಾಹಿತನೇ ಮನೆ ಬಿಟ್ಟು ಹೋಗಿದ್ದಾನೆ. ಅದರಲ್ಲೂ ಆತ ಹೆಂಡತಿಗೆ ಹೆದರಿ ಮನೆ ಬಿಟ್ಟು ಹೋಗಿದ್ದ ಎಂಬುದು ಗಮನ ಸೆಳೆದಿದೆ. ಇಂಥದ್ದೊಂದು ಪ್ರಕರಣ ಕೇರಳದಲ್ಲಿ ನಡೆದಿದೆ.
ನೌಷಾದ್ ಎನ್ನುವ 34 ವರ್ಷದ ವ್ಯಕ್ತಿ 25 ವರ್ಷದ ಪತ್ನಿ ಅಫ್ಸಾನ ಎಂಬಾಕೆಗೆ ಹೆದರಿ ಮನೆ ಬಿಟ್ಟು ಹೋಗಿದ್ದು, ಒಂದೂವರೆ ವರ್ಷ ನಾಪತ್ತೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಂಡತಿಯನ್ನು ಬಂಧಿಸಿದ್ದ ಪೊಲೀಸರು, ಅದರ ಬೆನ್ನಿಗೇ ನೌಷಾದ್​ನನ್ನು ಕೂಡ ಪತ್ತೆ ಹಚ್ಚಿದ್ದಾರೆ.
ನೌಷಾದ್ ಕೇರಳದ ಪತನಂತಿಟ್ಟ ಜಿಲ್ಲೆಯಿಂದ 2021ರ ನವೆಂಬರ್​​ನಲ್ಲಿ ತನ್ನ ಬಾಡಿಗೆ ಮನೆಯಿಂದ ಕಾಣೆಯಾಗಿದ್ದ. ಮತ್ತೊಂದೆಡೆ ಪತ್ನಿ ಈ ಕುರಿತಂತೆ ಸುಳ್ಳು ಹೇಳಿ ಪೊಲೀಸರ ದಿಕ್ಕು ತಪ್ಪಿಸಿದ್ದಳು. ನೌಷಾದ್​​ನನ್ನು ಕೊಲೆ ಮಾಡಿ ಶವ ಹೂತು ಹಾಕಲಾಗಿದೆ ಎಂದು ಅಫ್ಸಾನ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಶವ ತೋರಿಸುವಂತೆ ಹೇಳಿ ಕೆಲವು ಪ್ರದೇಶಗಳಿಗೆ ಕರೆದೊಯ್ದಿದ್ದರು.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ನೌಷಾದ್​ ತಂದೆ ನೀಡಿದ್ದ ನಾಪತ್ತೆ ದೂರಿನ ಮೇರೆಗೆ ಎರಡು ದಿನಗಳ ಹಿಂದೆ ಆಕೆಯನ್ನು ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ನೌಷಾದ್​ನನ್ನು ಇತ್ತೀಚೆಗೊಮ್ಮೆ ನೋಡಿದ್ದೆ ಎಂಬುದಾಗಿ ಹೇಳಿದ್ದಳು. ಪತಿ ಸಾವಿನ ಕುರಿತಂತೆ ಆಕೆ ಸುಳ್ಳು ಹೇಳಿದ್ದಳು ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು, ತಪ್ಪು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಗುರುವಾರ ಬಂಧಿಸಿದ್ದರು. ಅದರ ಬೆನ್ನಿಗೇ ನೌಷಾದ್​​ನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಅವಳು ಮಾತನಾಡುತ್ತಿಲ್ಲ, ಕರೆ ಸ್ವೀಕರಿಸುತ್ತಿಲ್ಲ ಎಂದು ತಲೆಗೆ ರಾಡ್​ನಿಂದ ಹೊಡೆದು ಪ್ರಾಣ ತೆಗೆದ!; ಅಸಲಿ ಕಾರಣ ಇದು..
ತೊಡುಫ್ಜಾ ಬಳಿಯ ತೊಮ್ಮಂಕುತು ಎಂಬಲ್ಲಿ ಪೊಲೀಸರು ನೌಷಾದ್​ನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ನಾನು ಪತ್ನಿಗೆ ಹೆದರಿ ಮನೆ ಬಿಟ್ಟಿದ್ದೆ ಎಂದು ನೌಷಾದ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದ. ಅಲ್ಲದೆ ಹೆಂಡತಿ ಕರೆಸಿಕೊಳ್ಳುತ್ತಿದ್ದ ಕೆಲವು ವ್ಯಕ್ತಿಗಳು ನನಗೆ ಥಳಿಸುತ್ತಿದ್ದರು ಎಂದೂ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ.
ಎಲ್ಲರೂ ಬೇಲಿ ಹಾರುತ್ತಿದ್ದಾರೆ ಎಂದ ಖುಷ್​​ಬೂ; ಉಡುಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹೀಗಂದಿದ್ದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
