ಜಬಲ್ಪುರ:ಹಿಂದಿನ ಕಾಲದಲ್ಲಿ ಋಷಿಗಳು, ಸಾಧು-ಸಂತರಲ್ಲಿ ಕೆಲವರು ನೀರಿನ ಮೇಲೆ ನಡೆದಿರುವುದನ್ನು ಕೇಳಿರುತ್ತೇವೆ. ಇಲ್ಲೊಬ್ಬಳು ಮಹಿಳೆ ನೀರಿನ ಮೇಲೆ ನಡೆದಿದ್ದ ವಿಡಿಯೋ ಕಂಡ ಜನರು ಆಕೆಯನ್ನೇ ದೇವತೆ ಎಂದು ಭಾವಿಸಿದ್ದೂ ನಡೆದಿದೆ. ಅಸಲಿಗೆ ಹತ್ತು ತಿಂಗಳಿಂದ ನಾಪತ್ತೆಯಾಗಿದ್ದ ಆಕೆ ಇದರಿಂದಾಗಿ ಮತ್ತೆ ತನ್ನವರನ್ನು ಸೇರಿಕೊಳ್ಳುವಂತಾಗಿದೆ.
ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ನರ್ಮದಾ ನದಿ ತೀರದಲ್ಲಿ ಇಂಥದ್ದೊಂದು ಪ್ರಸಂಗ ನಡೆದಿದೆ. ಮಹಿಳೆಯೊಬ್ಬಳು ನೀರಿನ ಮೇಲೆ ನಡೆದಿದ್ದ ವಿಡಿಯೋ ಕಂಡ ಜನರು ಆಕೆ ದೇವತೆ ಇರಬಹುದು ಎಂದೇ ಭಾವಿಸಿದ್ದರಂತೆ. ಮಾತ್ರವಲ್ಲ, ಅದಕ್ಕಾಗಿ ಜನರು ನರ್ಮದಾ ನದಿ ತೀರಕ್ಕೆ ಬಂದು ಜಮಾಯಿಸಿದ್ದೂ ನಡೆದಿದೆ. ‘ನರ್ಮದಾ ನದಿ ತೀರದ ತಿಲ್ವಾರ ಘಾಟ್ ಬಳಿ ನೀರಿನ ಮೇಲೆ ಮಹಿಳೆ ನಡೆದು ಹೋಗುತ್ತಿರುವುದು’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ವೈರಲ್ ಹರಿದಾಡಿತ್ತು.
ಇದನ್ನೂ ಓದಿ:ನಂದಿನಿ-ಅಮುಲ್ ಸಂಘರ್ಷ: ಕೆಎಂಎಫ್​ನಿಂದ ಹೊರಬಿತ್ತು ಮಹತ್ವದ ಸ್ಪಷ್ಟನೆ
ಬಳಿಕ ಪೊಲೀಸರೂ ಅಲ್ಲಿಗೆ ಧಾವಿಸಿ ಬಂದು ವಿಚಾರಣೆ ನಡೆಸಿದಾಗ ಅದು ಜ್ಯೋತಿ ರಘುವಂಶಿ ಎಂಬಾಕೆ ಎಂದು ತಿಳಿದುಬಂದಿದೆ. ನರ್ಮದಾಪುರಂ ನಿವಾಸಿ ಆಗಿರುವ ಈಕೆ 10 ತಿಂಗಳ ಹಿಂದೆ ಮನೆ ಬಿಟ್ಟು ಬಂದಿರುವುದು ಕೂಡ ಪೊಲೀಸ್ ವಿಚಾರಣೆ ವೇಳೆ ಬಯಲಾಗಿತ್ತು. ತಕ್ಷಣ ಆಕೆಯ ಮನೆಯವರನ್ನು ಸಂಪರ್ಕಿಸಿದ ಪೊಲೀಸರು ಮನೆಯವರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ಚಿಕಿತ್ಸೆಗೆಂದು ಉಡುಪಿಯಿಂದ ಬೆಂಗಳೂರಿಗೆ ಬಂದವನ ಎರಡೂ ಕಾಲು ಪೂರ್ತಿ ಜಖಂ!
ಮಾತ್ರವಲ್ಲ, ಆಕೆ ನೀರಿನ ಮೇಲೆ ನಡೆದಂತೆ ಕಂಡ ದೃಶ್ಯದ ಹಿಂದಿನ ರಹಸ್ಯವೂ ಬಯಲಾಗಿದೆ. ನರ್ಮದಾ ನದಿ ಕೆಲವೆಡೆ ಆಳ ತುಂಬಾ ಕಡಿಮೆ ಇದ್ದು, ಅಂಥ ಕೆಲವು ಜಾಗದಲ್ಲಿ ನಡೆದುಕೊಂಡ ಹೋದಾಗ ನೀರಿನ ಮೇಲೆಯೇ ನಡೆದುಕೊಂಡ ಹೋದ ಹಾಗೆ ಅನಿಸುತ್ತದೆ ಎಂದು ತಿಳಿಸಿದ್ದಾಳೆ. ಭಕ್ತಿಯ ದ್ಯೋತಕವಾಗಿ ನರ್ಮದಾ ಪರಿಕ್ರಮಕ್ಕಾಗಿ ತಾನು ಬಂದಿದ್ದೆ ಎಂದೂ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.
ಅಪರಿಚಿತರ ಬಳಿ ಲಿಫ್ಟ್ ಕೇಳಿಯೇ ಏಕಾಂಗಿಯಾಗಿ ಇಡೀ ರಾಜ್ಯ ಸುತ್ತಲಾರಂಭಿಸಿದ್ದಾಳೆ ಈ ಯುವತಿ: ಉದ್ದೇಶವಾದರೂ ಏನು?

ಮದ್ವೆಯಾಗಿ 17 ವರ್ಷಗಳ ಬಳಿಕ ಗೊತ್ತಾಯ್ತು ಇಬ್ಬರ ನಡುವಿನ ಅಸಲಿ ಸಂಬಂಧ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
