ನವದೆಹಲಿ:ನೇಪಾಳದಲ್ಲಿ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ ವಿಮಾನ ಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಕೊವಾಂಗ್​ ಪರ್ವತ ಪ್ರದೇಶದಲ್ಲಿ ವಿಮಾನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಬಹುತೇಕ ಎಲ್ಲರೂ ಬದುಕುಳಿದಿರುವ ಸಾಧ್ಯತೆ ತೀರ ಕಡಿಮೆ ಎನ್ನಲಾಗಿದ್ದು, ಪರ್ವತ ಪ್ರದೇಶವಾಗಿರುವುದರಿಂದ ವಿಮಾನ ಪತನಗೊಂಡ ಸ್ಥಳಕ್ಕೆ ಹೋಗಲು ಕಷ್ಟಕರವಾಗುತ್ತಿದೆ. ಈ ನಡುವೆ ಭಾರತೀಯ ಮೂಲದ ನಾಲ್ವರು ಪ್ರಯಾಣಿಕರು ಮುಂಬೈ ಮೂಲದವರೆಂದು ತಿಳಿದುಬಂದಿದೆ.
ವಿಮಾನ ಪತನಗೊಂಡ ಸ್ಥಳದಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಸೇನೆ ಸ್ಥಳಕ್ಕೆ ತಲುಪುತ್ತಿದೆ ಎಂದು ವರದಿಯಾಗಿದೆ. ತಾರಾ ಏರ್​ 9ಎನ್​​ಎಇಟಿ ಎರಡು ಇಂಜಿನ್​​ವುಳ್ಳ ಖಾಸಗಿ ವಿಮಾನ ಭಾನುವಾರ ಬೆಳಗ್ಗೆ ಕಣ್ಮರೆಯಾಗಿತ್ತು. ಪೋಖ್ರಾದಿಂದ ಹಾರಾಟ ನಡೆಸಿದ್ದ ವಿಮಾನ ಬೆಳಗ್ಗೆ 9.55ಕ್ಕೆ ಸಂಪರ್ಕ ಕಡಿತಗೊಂಡಿತ್ತು. ಕಠ್ಮಂಡುವಿನಿಂದ ಸುಮಾರು 200 ಕಿಮೀ ದೂರದ ಜೊಮ್ಸನ್​​ ನಗರದ ಬಳಿ ಹಾರಾಟ ನಡೆಸುವ ವೇಳೆ ವಿಮಾನ ನಾಪತ್ತೆಯಾಗಿತ್ತು.
ವಿಮಾನವು ಮುಸ್ತಾಂಗ್​​ ಜಿಲ್ಲೆಯಲ್ಲಿ ಹಾರಾಟ ನಡೆಸಿದ್ದು ಕಾಣಿಸಿಕೊಂಡ ಬಳಿಕ ಧೌಲಗಿರಿ ಪರ್ವತದತ್ತ ಹಾರಿದ ಬಳಿಕ ಕಣ್ಮರೆಯಾಗಿದೆ. ಅದೇ ಸಂದರ್ಭದಲ್ಲಿ ಸಂಪರ್ಕ ಕಡಿತಗೊಂಡಿದೆ ಎಂದು ಜಿಲ್ಲಾಧಿಕಾರಿ ನೇತ್ರಾ ಪ್ರಸಾದ್​​ ತಿಳಿಸಿದ್ದರು. ಇದೀಗ ವಿಮಾನ ಪತ್ತೆಯಾಗಿದೆ.
ಮುಂಬೈ ಮೂಲದ ಅಶೋಕ್​ ಕುಮಾರ್ ತ್ರಿಪಾಠಿ, ಧನುಶ್​​ ತ್ರಿಪಾಠಿ, ರಿತಿಕಾ ತ್ರಿಪಾಠೀ ಮತ್ತು ವೈಭವ ತ್ರಿಪಾಠಿ ಒಂದೇ ಕುಟುಂಬ ನಾಲ್ವರು ಇದ್ದರು. ಮೂವರು ಸಿಬ್ಬಂದಿ ಸೇರಿ ಜರ್ಮನ್​ನ ಇಬ್ಬರು ಮತ್ತು 13 ಮಂದಿ ನೇಪಾಳ ಮೂಲದವರಿದ್ದರು ಎಂದು ಏರ್​ಲೈನ್​ ವಕ್ತಾರ ಸುದರ್ಶನ್​ ಭರ್ತುವಾಲ ತಿಳಿಸಿದ್ದಾರೆ.
ನೇಪಾಳ ರಾಯಭಾರ ಕಚೇರಿಯ ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಸಹಾಯವಾಣಿ ಸಂಖ್ಯೆ: 977-9851107021(ಏಜೆನ್ಸೀಸ್​)
ನಾಲ್ವರು ಭಾರತೀಯರು ಸೇರಿ 22 ಮಂದಿ ಪ್ರಯಾಣಿಕರಿದ್ದ ನೇಪಾಳ ವಿಮಾನ ನಾಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − one =
Remember me
