ಪಠಾಣ್​ ಕೋಟ್​:ಪಂಜಾಬ್​ನ ಗುರುದಾಸ್​ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್​ ಅವರು ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಅಲ್ಲಿನ ಜನರು ಪೋಸ್ಟರ್​ಗಳನ್ನು ಹಾಕುತ್ತಿದ್ದಾರೆ.
ಪಠಾಣ್​ಕೋಟ್​ದ ರೈಲ್ವೆ ಸ್ಟೇಶನ್​ ಮತ್ತು ಪಾರ್ಕ್​ಗಳಲ್ಲಿ ಎಂಪಿ ಸನ್ನಿ ಡಿಯೋಲ್​​ ಮಿಸ್ಸಿಂಗ್​ ಪೋಸ್ಟರ್​ಗಳನ್ನು ಅಂಟಿಸಲಾಗಿದೆ.
ಸನ್ನಿ ಡಿಯೋಲ್​ ಅವರನ್ನು ತುಂಬ ದಿನಗಳಿಂದ ನಾವು ನೋಡಲಿಲ್ಲ. ಅವರು ಕ್ಷೇತ್ರದಲ್ಲಿ ಎಲ್ಲಿಯೂ ಕಾಣುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಗುರುದಾಸ್​ ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸನ್ನಿ ಡಿಯೋಲ್​, ಕಾಂಗ್ರೆಸ್​ನ ಸುನೀಲ್​ ಝಾಕರ್​ ಮತ್ತು ಆಪ್​ನ ಪೀಟರ್​ ಮಾಸಿಹ್​ ವಿರುದ್ಧ ಗೆಲುವು ಸಾಧಿಸಿದ್ದರು.
ಸನ್ನಿ ಡಿಯೋಲ್​ಗೆ ವಿವಾದ ಹೊಸದೇನಲ್ಲ.ಸಂಸದರಾಗಿ ಚುನಾಯಿತರಾದ ಅವರು ತಮ್ಮ ಗೈರಿನಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಭೆಗಳಿಗೆ ಹಾಜರಾಗಲು, ಪ್ರಮುಖ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಪ್ರತಿನಿಧಿಯೋರ್ವನನ್ನು ನೇಮಕ ಮಾಡಿಕೊಳ್ಳುವ ಮೂಲಕ ಕಾಂಟ್ರವರ್ಸಿ ಸೃಷ್ಟಿಸಿದ್ದರು. (ಏಜೆನ್ಸೀಸ್​)
Punjab: 'Missing' posters of Sunny Deol, BJP MP from Gurdaspur constituency, seen in Pathankotpic.twitter.com/SHGpMsxlaq
— ANI (@ANI)January 13, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 15 =
Remember me
