ಶ್ರೀನಗರ:ಭಾರತೀಯ ಸೇನೆಯ ಯೋಧನೋರ್ವ ಜಮ್ಮುಕಾಶ್ಮೀರದ ಕುಲಗಾಂವ್​ ಪ್ರದೇಶದಿಂದ ನಿನ್ನೆಯಿಂದ ನಾಪತ್ತೆಯಾಗಿದ್ದಾರೆ. ಈ ಯೋಧನನ್ನು ಉಗ್ರರೇ ಅಪಹರಣ ಮಾಡಿದ್ದಾಗಿ ಸೇನೆ ಇಂದು ಶಂಕೆ ವ್ಯಕ್ತಪಡಿಸಿದೆ.
ಕಳೆದು ಹೋಗಿರುವ ಯೋಧನಿಗಾಗಿ ಸೇನೆ ಹುಡುಕಾಟ ಶುರು ಮಾಡಿದ್ದು, ಇಂದು ಹೇಳಿಕೆಯೊಂದನ್ನೂ ಬಿಡುಗಡೆ ಮಾಡಿದೆ.162 ಬೆಟಾಲಿನ್​ನ ರೈಫಲ್​ಮೆನ್​ ಶಕೀರ್​ ಮಂಜೂರ್​ ಭಾನುವಾರ ಸಂಜೆ 5ಗಂಟೆಯಿಂದಲೂ ನಾಪತ್ತೆಯಾಗಿದ್ದಾರೆ. ಕುಲಗಾಂವ್​ ಬಳಿ ಅವರ ಕಾರು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. ಉಗ್ರರೇ ಶಕೀರ್​ ಅವರನ್ನು ಅಪಹರಣ ಮಾಡಿರುವ ಶಂಕೆ ಇದೆ. ಅವರಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿಸಿದೆ.ಇದನ್ನೂ ಓದಿ:ಭೂಮಿಪೂಜೆಗೆ ಎಲ್​.ಕೆ.ಆಡ್ವಾಣಿಯವರಿಗೆ ಏಕಿಲ್ಲ ಆಹ್ವಾನ? ಇಲ್ಲಿದೆ ನೋಡಿ ನಿಜವಾದ ಕಾರಣ
ಶಕೀರ್​ ಅವರು ಈದ್​ ಹಬ್ಬ ಆಚರಿಸಲೆಂದು ಶೋಪಿಯಾನ ಜಿಲ್ಲೆಯಲ್ಲಿರುವ ಮನೆಗೆ ಬಂದಿದ್ದರು. ಹಬ್ಬದ ನಿಮಿತ್ತ ನಿನ್ನೆ ಸಂಜೆ ಅವರು ಕುಟುಂಬದೊಂದಿಗೆ ಹೊರಗೆ ಹೊರಟಿದ್ದರು. ಅದಾದ ಮೇಲೆಯೇ ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಭದ್ರತಾ ಸಿಬ್ಬಂದಿ ಶೋಪಿಯಾನ್​, ಕುಲಗಾಂವ್​, ಅನಂತ್​ನಾಗ್​ ಜಿಲ್ಲೆಗಳಲ್ಲಿ ಕಳೆದು ಹೋದ ಯೋಧನಿಗಾಗಿ ಹುಡುಕುತ್ತಿದ್ದಾರೆ. ಅಷ್ಟೇ ಅಲ್ಲ, ಸ್ಥಳೀಯ ಪೊಲೀಸರು ಡ್ರೋನ್​, ಸ್ನಿಫರ್​ ಶ್ವಾನಗಳನ್ನು ಬಳಸಿ ಹುಡುಕುತ್ತಿದ್ದಾರೆ. ಶಕೀರ್​ ಅವರನ್ನು ಹೇಗಾದರೂ ಸುರಕ್ಷಿತವಾಗಿ ಮನೆಗೆ ವಾಪಸ್​ ಕರೆತನ್ನಿ ಎಂದು ಅವರ ಕುಟುಂಬದವರು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)
‘ಪ್ರೀತಿಸುವುದನ್ನು..ಸತ್ಯ ಹೇಳುವುದನ್ನು, ತಾಳ್ಮೆಯಿಂದ ಇರುವುದನ್ನು ಕಲಿತಿದ್ದೇ ನನ್ನ ಸೋದರನಿಂದ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 17 =
Remember me
