ನವದೆಹಲಿ:ನಾಪತ್ತೆಯಾಗಿರುವ ಸೈನಿಕನನ್ನು ಉಗ್ರರು ಅಪಹರಿಸಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸೈನಿಕನ ಬಟ್ಟೆಗಳು ಇತ್ತೀಚೆಗೆ ಪತ್ತೆಯಾಗಿವೆ. ಆತನ ವಾಹನ ಸುಟ್ಟ ಸ್ಥಿತಿಯಲ್ಲಿ ಕುಲ್ಗಾಂ ಬಳಿ ಪತ್ತೆಯಾಗಿದೆ.ಮಗನನ್ನು ಹುಡುಕುವಾಗ ಆತನ ತಂದೆಗೆ ಆತನ ಬಟ್ಟೆಗಳು ಅವರ ಮನೆಯ ಸಮೀಪವಿರುವ ಹಣ್ಣಿನ ತೋಟದಲ್ಲಿರುವುದು ಕಂಡುಬಂದಿದೆ. ಆತನ ಬಟ್ಟೆಗಳು ಹರಿದ ಸ್ಥಿತಿಯಲ್ಲಿದ್ದು, ನೆಲದ ಮೇಲೆ ರಕ್ತದ ಕಲೆಗಳಿವೆ ಎಂದು ಆತನ ತಂದೆ ಮಂಜೂರ್ ಅಹ್ಮದ್ ವಾಗೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:15 ದಿನಗಳ ಫಿಲ್ಮ್‌ ಫೆಸ್ಟಿವಲ್‌- ಮನೆಯಲ್ಲಿದ್ದೇ ನೋಡಿ ಸಿನಿಮಾ- ಇಲ್ಲಿದೆ ಮಾಹಿತಿ…
ಸಾಧ್ಯವಾದರೆ ತನ್ನ ಮಗನನ್ನು ಕ್ಷಮಿಸಬೇಕೆಂದೂ, ಆತನ ದೇಹವನ್ನು ಹಿಂತಿರುಗಿಸಬೇಕೆಂದೂ ಆತನ ತಂದೆ ಮುಜಾಹಿದ್ದೀನ್​​ಗೆ ಮನವಿ ಮಾಡಿದ್ದಾರೆ.ಆತನನ್ನು ಉಗ್ರರು ಅಪಹರಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ರಾಮ್​ಭಾಮಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಶೋಪಿಯಾನ್ ಜಿಲ್ಲೆಯ ನಿವಾಸಿ ಮುಜಾಫರ್ ಮಂಜೂರ್ ಎಂಬುವವರ ಹೆಸರಿನಲ್ಲಿ ನೋಂದಾಯಿಸಲಾದ ವಾಹನವನ್ನು ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ವಿಮಾನ ಅಪಘಾತದ ವೇಳೆ ಪೈಲಟ್​ ಸಮಯಪ್ರಜ್ಞೆ; ಹಾಗಾಗಿ ಉಳಿಯಿತು ನಮ್ಮ ಜೀವ
ಮಂಜೂರ್, ಪ್ರಾದೇಶಿಕ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಆತನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.ಆತನನ್ನು ಉಗ್ರರು ಅಪಹರಿಸಿರಬಹುದೆಂಬ ಸಂಶಯವಿದ್ದು, ಆತನನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಬಿಎಸ್​ಪಿಯ 6 ಶಾಸಕರು ಅನರ್ಹಗೊಳ್ಳುತ್ತಾರಾ? ರಾಜಕೀಯ ನಾಟಕಕ್ಕೆ ಸಿಗುತ್ತಾ ಹೊಸ ತಿರುವು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + four =
Remember me
