ಬಿಹಾರ:7 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಸಾವನ್ನಪ್ಪಿದ್ದಾನೆಂದು ತಿಳಿದ ಪೋಷಕರು ಆತನ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದರು. ಆದ್ರೆ, ಇದೀಗ ತಂದೆ-ತಾಯಿಗೆ ಅಚ್ಚರಿ ಎದುರಾಗಿದ್ದು, ನಾಪತ್ತೆಯಾಗಿದ್ದ ಮಗನು ಮನೆಗೆ ಹಿಂದಿರುಗಿದ್ದಾನೆ.
ಇದನ್ನೂ ಓದಿ:ಮಗುವಿನ ಮೊದಲ ಲಸಿಕೆಯೇ ತಾಯಿ ಹಾಲು – ಬಿಎಚ್‌ಇಒ ಗಂಗಮ್ಮ ಹೇಳಿಕೆ
7 ವರ್ಷಗಳ ಹಿಂದೆ ಮನೆಬಿಟ್ಟು ಹೋದ ಪುತ್ರ ಹಿಂದಿರುಗದ ಕಾರಣ ಆತ ಮೃತಪಟ್ಟಿದ್ದಾನೆ ಎಂದು ಹೆತ್ತವರು ಭಾವಿಸಿದ್ದು, ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದರು. ಆದ್ರೆ, ಗ್ರಾಮದ ಪಂಚಾಯತ್ ಮುಖ್ಯಸ್ಥರ ಸಹಾಯದಿಂದ ಅವರ ಪುತ್ರ ಇದೀಗ​ ಮನೆಗೆ ವಾಪಾಸ್ ಬಂದಿದ್ದು, ತಂದೆ-ತಾಯಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಏಳು ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ರಾಯ್ ಎಂದು ಗುರುತಿಸಲಾಗಿದ್ದು, ಮನೆಬಿಟ್ಟು ಹೋದ ರಾಯ್​ ದೆಹಲಿಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸದಸ್ಯರೊಡನೆ ವಾಸಿಸುತ್ತಿದ್ದ. ಆತನಿಗೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾದ ವೇಳೆ ಸಂಸ್ಥೆಯ ವ್ಯಕ್ತಿಯೊಬ್ಬರು ಈತನ ಹಿನ್ನೆಲೆ ತಿಳಿದು, ರಾಯ್​ ವಾಸವಿದ್ದ ಗ್ರಾಮದ ಪಂಚಾಯತ್ ಮುಖ್ಯಸ್ಥರನ್ನು ಸಂಪರ್ಕಿಸಿ, ದೆಹಲಿಯಿಂದ ಸಾರಿಗೆ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ.
ಇದನ್ನೂ ಓದಿ:NIMHANSನಲ್ಲಿ ಡಾಟಾ ಎಂಟ್ರಿ ಆಪರೇಟರ್‌ ನೇಮಕ; ಪಿಯು ವಿದ್ಯಾರ್ಹತೆ, ಅರ್ಜಿ ಸಲ್ಲಿಕೆಗೆ ಆಗಸ್ಟ್ 10 ಕೊನೆ ದಿನ
ಪಂಚಾಯತ್ ಮುಖ್ಯಸ್ಥರ ಸಹಾಯದಿಂದ ಪೋಷಕರಿಗೆ ಇದೀಗ ತಮ್ಮ ಮಗ ವಾಪಸ್​ ಸಿಕ್ಕಿದ್ದು, ಈ ಬಗ್ಗೆ ಗಂಡ-ಹೆಂಡತಿ ಸಂತಸ ವ್ಯಕ್ತಪಡಿಸಿದ್ದಾರೆ. ಕುಟುಂಬದವರು ನೀಡಿದ ಮಾಹಿತಿ ಪ್ರಕಾರ, ರಾಯ್​ ಮನೆಯಿಂದ ಹೋದಾಗ ಅವರ ವಯಸ್ಸು 30 ವರ್ಷ. ಊರು ಬಿಟ್ಟು ಹೋಗುವ ಮೊದಲೇ ಅವರ ಹೆಂಡತಿ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ,(ಏಜೆನ್ಸೀಸ್).
ಈ ವಾರ ಒಟಿಟಿ ಮತ್ತು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳಿವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
