ಶ್ರೀನಗರ:ಕೇಂದ್ರ ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ಬಂಧಿಸಲ್ಪಟ್ಟ ಮೂವರು ಜೈಷ್ ಏ ಮೊಹಮ್ಮದ್ ಉಗ್ರರ ಪೈಕಿ ಒಬ್ಬಾತ ಈ ಹಿಂದೆ ನಾಪತ್ತೆಯಾಗಿದ್ದ ಸ್ಪೆಷಲ್ ಪೊಲೀಸ್ ಆಫೀಸರ್ (ಎಸ್​ಪಿಒ) ಎಂದು ಪೊಲೀಸರು ಭಾನುವಾರ ಹೇಳಿಕೊಂಡಿದ್ದಾರೆ.
ಎಸ್​ಪಿಒ ಕಳೆದ ಅಕ್ಟೋಬರ್​ 24ರಂದು ಎರಡು ಎಕೆ 47 ರೈಫಲ್​ಗಳೊಂದಿಗೆ ನಾಪತ್ತೆಯಾಗಿದ್ದ. ಖಚಿತ ಮಾಹಿತಿ ಆಧರಿಸಿ ಪೊಲೀಸರು ಸಿಆರ್​ಪಿಎಫ್​​ನ ಎರಡು ತುಕಡಿಗಳೊಂದಿಗೆ ಹಯಾತ್​ಪೋರಾ ಮತ್ತುಯ ಛಾದೂರಾ ಪ್ರದೇಶಗಳಲ್ಲಿ ಶೋಧ ಕಾರ್ಯ ಆರಂಭಿಸಿದ್ದರು. ಇದೇ ವೇಳೆ ಒಂದು ವಾಹನದವರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದರು. ಆ ವಾಹನದಲ್ಲಿದ್ದರು ಸಾಕಷ್ಟು ಪ್ರತಿರೋಧ ತೋರಿದ್ದರು. ಬಳಿಕ ಅವರನ್ನು ತಂತ್ರಪೂರ್ವಕ ಬಂಧಿಸಲಾಗಿತ್ತು.
ಇದನ್ನೂ ಓದಿ:ರೈತರಲ್ಲಿ ವಿಷಬೀಜ ಬಿತ್ತುತ್ತಿವೆ ವಿಪಕ್ಷಗಳು ; ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಸುರೇಶಗೌಡ್ ಕಿಡಿ ಅಟಲ್‌ಜೀ, ರೈತ ದಿನ ಆಚರಣೆ
ಬಂಧಿತರನ್ನು ಉಗ್ರನಾಗಿ ಬದಲಾಗಿದ್ದ ಎಸ್​ಪಿಒ ಅಲ್ತಾಫ್ ಹುಸೇನ್​ ಆಗಿದ್ದ. ಇನ್ನುಳಿದ ಉಗ್ರರನ್ನು ಶಬೀರ್ ಅಹ್ಮದ್ ಭಟ್​, ಜಮ್​ಶೀದ್ ಮ್ಯಾಗ್ರೇ, ಝಹೀದ್ ದರ್​ ಎಂದು ಗುರುತಿಸಲಾಗಿದೆ. ಎಲ್ಲರೂ ಪುಲ್ವಾಮಾ ನಿವಾಸಿಗಳು. ಅವರ ಬಳಿ ಇದ್ದ ಸ್ಪೋಟಕ, ಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಹಾಂಗೀರ್ ಎಂಬಾತನನ್ನು ಮತ್ತೆ ಇನ್ನೊಂದು ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಖರ್ಗೆ ಸಿಎಂ ಯಾಕಾಗಲಿಲ್ಲ? : ಮಾಜಿ ಪ್ರಧಾನಿಯತ್ತ ಬೊಟ್ಟು ಮಾಡಿದ್ರು ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 16 =
Remember me
