ನಲ್ಗೊಂಡ:ಆರ್ಥಿಕ ಸಮಸ್ಯೆಗಳಿಂದ ಹೊರಬರಲು ಸಂಬಳ ಸಾಕಾಗುತ್ತಿಲ್ಲ ಅಂತ ಮನನೊಂದು ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ಪುಷ್ಪಲತಾ (26) ಮೃತ ಯುವತಿ. ನಲ್ಗೊಂಡ ಜಿಲ್ಲೆಯ ಹಲಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನಗೆ ಬರುತ್ತಿರುವ ಸಂಬಳದಲ್ಲಿ ಮಕ್ಕಳನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ ಎಂದು ಡೆತ್​ನೋಟ್​ ಬರೆದಿಟ್ಟು ಮನೆಯಲ್ಲಿಯೇ ಸಾವಿಗೆ ಶರಣಾಗಿದ್ದಾಳೆ.
ಇದನ್ನೂ ಓದಿ:ಒಂದೇ ಚಿತ್ರದಲ್ಲಿ 2 ಲಿಪ್​ಲಾಕ್: ನೋ ಕಿಸ್ಸಿಂಗ್ ನೀತಿಗೆ ಕಾಜೋಲ್​ ಬ್ರೇಕ್​, ವಿಡಿಯೋ ವೈರಲ್​
ಪುಷ್ಪಲತಾ ತಿರುಮಲಗಿರಿಸಾಗರ ಮಂಡಲದ ಅಲ್ವಾಲ ಗ್ರಾಮದ ಮಹೇಶ್​ ಎಂಬಾತನನ್ನು ವರಿಸಿದ್ದಳು. ದಂಪತಿಗೆ ಮಗಳು ಸಾನ್ವಿತಾ ಮತ್ತು ಮಗ ಬಾಬು ಸೈನಂದನ್​ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಗಂಡ ಪನಗಲ್​ ಮಿಷನ್​ ಭಗೀರಥ ವಾಟರ್​ ಟ್ರೀಟ್​ಮೆಂಟ್​ ಸೆಂಟರ್​ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಸಂಬಳ ಸಾಕಾಗದೇ ಕುಟುಂಬ ನಿರ್ವಹಿಸಲು ಆಗುತ್ತಿಲ್ಲ ಅಂತ ವರ್ಷದ ಹಿಂದಷ್ಟೇ ಮಹೇಶ್​ ಕೂಡ ಸಾವಿಗೆ ಶರಣಾಗಿದ್ದ.
ಬಳಿಕ ಗಂಡನ ಕೆಲಸ ಪುಷ್ಪಲತಾಗೆ ಬಂದಿತ್ತು. ಸಾಯಿ ಪ್ರತಾಪ ನಗರದ ಬಾಡಿಗೆ ಮನೆಯಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಪುಷ್ಪಲತಾ ನೆಲೆಸಿದ್ದಳು. ಗುರುವಾರ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.
ಇದನ್ನೂ ಓದಿ:ಅಪಾಯಕಾರಿ ಆಹಾರ ಸಂಯೋಜನೆಗಳು: ಈ ಆಹಾರಗಳನ್ನು ಒಟ್ಟಿಗೆ ಸೇವಿಸುತ್ತಿದ್ರೆ ಇಂದಿನಿಂದಲೇ ತಪ್ಪಿಸಿ…
ನನಗೆ ಸಿಗುತ್ತಿದ್ದ 9500 ರೂ. ಸಂಬಳ ಸಾಕಾಗುತ್ತಿರಲಿಲ್ಲ. ಅಲ್ಲದೆ, ಸಮಯಕ್ಕೆ ಸರಿಯಾಗಿ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾಳೆ. ಹೊಟ್ಟೆಯಲ್ಲಿ ಗಡ್ಡೆಯಿದ್ದು, ಶಸ್ತ್ರಚಿಕಿತ್ಸೆಗೆ 2 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.(ಏಜೆನ್ಸೀಸ್​)
ಒಂದೇ ಚಿತ್ರದಲ್ಲಿ 2 ಲಿಪ್​ಲಾಕ್: ನೋ ಕಿಸ್ಸಿಂಗ್ ನೀತಿಗೆ ಕಾಜೋಲ್​ ಬ್ರೇಕ್​, ವಿಡಿಯೋ ವೈರಲ್​

ಸೊಂಟದ ಭಾಗವನ್ನು ಎಡಿಟ್ ಮಾಡಿ ಫೋಟೊ ಪೋಸ್ಟ್ ಮಾಡಿದ ನಟಿ; ಕುದುರೆ ಕಾಲು ಎಂದು ಕಾಲೆಳೆದ ನೆಟ್ಟಿಗರು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve + 18 =
Remember me
