ನವದೆಹಲಿ:ದೇಶದಲ್ಲಿ ಕರೊನಾ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಔಷಧದ ತಯಾರಿಕೆಯ ಪ್ರಯತ್ನಗಳೂ ತ್ವರಿತವಾಗಿ ಸಾಗಿವೆ. ಸ್ವದೇಶಿ ಔಷಧಕ್ಕೆ ಸರ್ಕಾರ ಒತ್ತು ನೀಡುತ್ತಿದ್ದು, ಈ ನಿಟ್ಟಿನಲ್ಲಿ ‘ಮಿಷನ್ ಕೋವಿಡ್ ಸುರಕ್ಷಾ’ ಯೋಜನೆ ಆರಂಭಕ್ಕೆ ಮುಂದಾಗಿದೆ. ಈ ಯೋಜನೆಯಡಿ -ಠಿ; 3 ಸಾವಿರ ಕೋಟಿ ಮೊತ್ತದ ಮೂಲ (ಕಾರ್ಪಸ್) ನಿಧಿ ಸ್ಥಾಪಿಸುವುದಾಗಿ ಹೇಳಿದೆ.
ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಮಿಷನ್ ಕೋವಿಡ್ ಸುರಕ್ಷಾ ಪ್ರಸ್ತಾಪನೆ ಮಾಡಲಾಗಿದ್ದು, ಔಷಧದ ಕ್ಲಿನಿಕಲ್ ಟ್ರಯಲ್ ಪರವಾನಗಿ ಪಡೆದುಕೊಳ್ಳುವುದು, ಲಸಿಕೆ ಉತ್ಪಾದನೆ ಮತ್ತು ಕಡಿಮೆ ದರದಲ್ಲಿ ಲಸಿಕೆ ಲಭ್ಯವಾಗುವಂತೆ ಮಾಡುವುದು ಈ ನಿಧಿಯ ಉದ್ದೇಶವಾಗಿದೆ. 12ರಿಂದ 18 ತಿಂಗಳ ಅವಧಿಯ ಯೋಜನೆಯಲ್ಲಿ ಭಾರತದ ಕನಿಷ್ಠ ಆರು ಔಷಧ ತಯಾರಕರನ್ನು ಮುಂಚೂಣಿಗೆ ತರಲಾಗುವುದು. ಅವರಿಗೆ ಎಲ್ಲ ರೀತಿಯ ಸಹಕಾರಗಳನ್ನು ನೀಡಲಾಗುವುದು. ಕೈಗೆಟಕುವ ಬೆಲೆಯಲ್ಲಿ ಔಷಧ ಪೂರೈಕೆ ಜತೆಗೆ ವಿದೇಶಗಳಿಗೂ ಔಷಧ ಸರಬರಾಜು ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಮೂಲಕ ಆತ್ಮನಿರ್ಭರ ಭಾರತವನ್ನೂ ಇನ್ನಷ್ಟು ಬಲಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಣಮುಖ ಪ್ರಮಾಣ ಶೇ. 75ಕ್ಕಿಂತ ಹೆಚ್ಚು:ದೇಶದಲ್ಲಿ 23 ಲಕ್ಷಕ್ಕೂ ಅಧಿಕ ಸೋಂಕಿತರು ಗುಣಮುಖ ರಾಗಿದ್ದು, ಚೇತರಿಕೆ ಪ್ರಮಾಣವು ಶೇ. 75.27ಕ್ಕೆ ಏರಿಕೆಯಾಗಿದೆ. ಭಾನುವಾರ 61,400 ಪ್ರಕರಣಗಳು ಪತ್ತೆಯಾಗಿದ್ದು, 836 ಸೋಂಕಿತರು ಸಾವನ್ನಪ್ಪಿದ್ದಾರೆ.
ಚಿತ್ರೀಕರಣ ಮಾರ್ಗಸೂಚಿ ಸ್ಪಷ್ಟನೆ:ಧಾರಾವಾಹಿ, ಸಿನಿಮಾ ಚಿತ್ರೀಕರಣಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ ಈ ಕುರಿತು ಕೆಲ ಸ್ಪಷ್ಟನೆ ನೀಡಿದೆ. ಪ್ರತಿ ಚಿತ್ರೀಕರಣ ತಂಡದಲ್ಲಿ ಕರೊನಾ ಸಂಬಂಧಿತ ವಿಚಾರಗಳ ನಿರ್ವಹಣೆಗೆಂದು ಓರ್ವ ನಿರ್ವಾಹಕರನ್ನು ನಿಯೋಜಿಸಬೇಕು. ಆತ ಪ್ರತಿಯೊಬ್ಬ ಸಿಬ್ಬಂದಿಯ ಆರೋಗ್ಯ ದಾಖಲೆಗಳು, ಟ್ರಾವೆಲ್ ಹಿಸ್ಟರಿಯನ್ನು ಸಂಗ್ರಹಿಸಬೇಕು. ಆರೋಗ್ಯ ಸೇತು ಆಪ್ ಕಡ್ಡಾಯ. ಹತ್ತಿರದ ಆಸ್ಪತ್ರೆ, ಕರೊನಾ ಪರೀಕ್ಷಾ ಕೇಂದ್ರ, ಕ್ವಾರಂಟೈನ್ ಸೆಂಟರ್​ಗಳ ಸಂಪೂರ್ಣ ಮಾಹಿತಿ ನಿರ್ವಾಹಕರಿಗೆ ಇರಬೇಕು ಎಂದು ತಿಳಿಸಿದೆ.
ಜೆಎಂಎಂ ಪಕ್ಷದ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಶಿಬು ಸೊರೇನ್ ಮತ್ತು ಅವರ ಪತ್ನಿಗೆ ಕರೊನಾ ಸೋಂಕು ದೃಢವಾಗಿದ್ದು, ರಾಂಚಿಯ ಮೇದಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ್ಝರೊನಾ ಸೋಂಕಿನಿಂದ ಮೃತರಾದವರಿಗೆ ಪರಿಹಾರ ನೀಡಲು ದೇಶಾದ್ಯಂತ ಏಕ ನೀತಿ ಜಾರಿಯಾಗಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ್ಝರಿಯಾಣ ವಿಧಾನಸಭಾ ಅಧ್ಯಕ್ಷ ಗಿಯಾನ್ ಚಂದ್ ಗುಪ್ತಾಗೆ ಕರೊನಾ ಸೋಂಕು ದೃಢವಾಗಿದೆ. ಅವರ ಜತೆಯಲ್ಲಿ ಇಬ್ಬರು ಶಾಸಕರಲ್ಲೂ ಸೋಂಕು ಕಾಣಿಸಿಕೊಂಡಿದೆ. ಹರಿಯಾಣ ವಿಧಾನಸಭೆಯ ಮಳೆಗಾಲ ಅಧಿವೇಶನ ಆ. 26ರಿಂದ ಆರಂಭವಾಗಲಿದೆ.
ವರ್ಚುವಲ್ ಘಟಿಕೋತ್ಸವ:ಕರೊನಾ ಹಿನ್ನೆಲೆಯಲ್ಲಿ ಮುಂಬೈನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ವರ್ಚುವಲ್ ಘಟಿಕೋತ್ಸವ ಮಾಡಿದೆ. ಪದವಿ ಪಡೆದ ವಿದ್ಯಾರ್ಥಿಗಳ ಡಿಜಿಟಲ್ ರೂಪಗಳಿಗೆ ಪದವಿ ಪತ್ರ ವಿತರಿಸಲಾಗಿದೆ.
ಇದು ಕಾರ್ಯಸಾಧುವಲ್ಲ, ಅಂತಿಮ ಸೆಮಿಸ್ಟರ್​ ಪರೀಕ್ಷೆ ಮುಂದೂಡಿ; ಮೋದಿಗೆ ಪತ್ರ ಬರೆದು ಒತ್ತಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 15 =
Remember me
