ನವದೆಹಲಿ:ಬಳಕೆದಾರರ ಅನುಮತಿ ಇಲ್ಲದೆ ಅವರ ಸ್ಮಾರ್ಟ್ ಫೋನ್​ನ ಮೈಕ್ರೋಫೋನ್ ಅನ್ನು ವಾಟ್ಸ್​ಆಪ್ ಬಳಸುತ್ತಿದೆ ಎಂಬ ದೂರಿನ ಬಗ್ಗೆ ತನಿಖೆ ನಡೆಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದು ಖಾಸಗಿತನದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಮೈಕ್ರೋ ಬ್ಲಾಗಿಂಗ್ ಸಂಸ್ಥೆಯಿಂದ ಇಂಥದನ್ನು ನಿರೀಕ್ಷಿಸಿರಲಿಲ್ಲ. ಈ ಕುರಿತು ತಕ್ಷಣವೇ ಪರಿಶೀಲಿಸಿ ಆರೋಪದಲ್ಲಿ ಹುರುಳಿದ್ದರೆ ಖಂಡಿತವಾಗಿ ಕ್ರಮ ಜರುಗಿಸಲಾಗುವುದು ಎಂದು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
ಸಚಿವರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ವಾಟ್ಸ್ ಆಪ್​ನ ಮಾತೃ ಸಂಸ್ಥೆಯಾದ ಮೆಟಾದ ಭಾರತದ ನಿರ್ದೇಶಕ ಶಿವನಾಥ್ ತುಕ್ರಾಲ್, ಆಂಡ್ರಾಯ್್ಡಲ್ಲಿನ ವೈರಸ್​ನಿಂದ ಹೀಗಾಗಿದೆ. ಈ ಬಗ್ ಗೌಪ್ಯತೆಯ ಡ್ಯಾಷ್​ಬೋರ್ಡ್​ನ ಮಾಹಿತಿಯನ್ನು ತಪ್ಪಾಗಿ ಹಂಚಿಕೆ ಮಾಡುತ್ತದೆ. ಈ ಬಗ್ಗೆ ಸಂಸ್ಥೆ ಕೂಡ ಪರಿಶೀಲನೆ ನಡೆಸುತ್ತಿದೆ. ಈ ದೋಷವನ್ನು ಸರಿಪಡಿಸುವಂತೆ ಗೂಗಲ್​ಗೆ ಕೊರಲಾಗಿದೆ ಎಂದಿದ್ದಾರೆ. ಧ್ವನಿ ಕರೆಗಳು ಮತ್ತು ಟಿಪ್ಪಣಿಗಳು ಕರೆ ಮಾಡುವವರ ಮತ್ತು ಸ್ವೀಕರಿಸುವವರ ಮಾಹಿತಿಯನ್ನು ರಕ್ಷಿಸುತ್ತದೆ (ಎನ್ಕ್ರಿಪ್ಟ್). ಹೀಗಾಗಿ ಬಳಕೆದಾರರ ಮೈಕ್ರೋಫೋನ್ ದುರ್ಬಳಕೆ ಸಾಧ್ಯ ವಿಲ್ಲ, ಅದು ಅವರ ನಿಯಂತ್ರಣದಲ್ಲೇ ಇರುತ್ತದೆ. ಗ್ರಾಹಕರ ಖಾಸಗಿತನದ ರಕ್ಷಣೆಗೆ ಕಂಪನಿ ಬದ್ಧವಾಗಿದೆ ಎಂದಿದ್ದಾರೆ.
‘ನಾನು ಮಲಗಿದ್ದಾಗಲೂ ನನ್ನ ಮೊಬೈಲ್​ನ ಮೈಕ್ರೋಫೋನ್ ವಾಟ್ಸ್​ಆಪ್​ನಲ್ಲಿ ಬಳಕೆ ಆಗುತ್ತಿರುತ್ತದೆ’ ಎಂದು ಟ್ವಿಟರ್​ನಲ್ಲಿ ಇಂಜಿನಿಯರ್ ಆಗಿರುವ ಫೋಯಾದ್ ದಬಿರಿ ಕಳೆದ ವಾರ ದೂರಿದ್ದರು. ವಾಟ್ಸ್ ಆಪ್​ನಲ್ಲಿ ಏನಾಗುತ್ತಿದೆ ಎಂದು ಟ್ವೀಟ್ ಮಾಡಿದ್ದ ಅವರು, ಮೈಕ್ರೋಫೋನ್ ಅನ್ಯರಿಂದ ಬಳಕೆಯಾಗುತ್ತಿರುವ ಸ್ಕ್ರೀನ್ ಶಾಟ್​ಗಳನ್ನು ಪೋಸ್ಟ್ ಮಾಡಿದ್ದರು. ದಬಿರಿ ಅವರ ಈ ಟ್ವೀಟ್ ಅನ್ನು ಆರೂವರೆ ಕೋಟಿ ಜನರು ವೀಕ್ಷಿಸಿದ್ದು, ಅವರ ದೂರಿಗೆ ಹಲವರು ಟ್ವಿಟಿಗರು ಸಹಮತ ವ್ಯಕ್ತಪಡಿಸಿದ್ದರು. ಮೊಬೈಲ್ ಫೋನ್ ಬಳಸದಿದ್ದಾಗಲೂ ಮೈಕ್ರೋಫೋನ್ ಚಾಲನೆಯಲ್ಲಿರುವುದು ಗೊತ್ತಾಗಿದೆ ಎಂದಿದ್ದರು. ಟ್ವಿಟರ್​ನ ಮಾಲೀಕ ಎಲನ್ ಮಾಸ್ಕ್ ಕೂಡ ಪ್ರತಿಕ್ರಿಯಿಸಿ, ವಾಟ್ಸ್ ಆಪ್ ವಿಶ್ವಾಸಾರ್ಹ ಸಾಮಾಜಿಕ ಜಾಲತಾಣವಲ್ಲ ಎಂದು ಟೀಕಿಸಿದ್ದರು.
ವಾಟ್ಸ್​ಆಪ್ ವಿರುದ್ಧ ಈ ಹಿಂದೆಯೂ ಗ್ರಾಹಕರ ಮಾಹಿತಿ ದುರ್ಬಳಕೆ ಮಾಡುತ್ತಿದ್ದ ದೂರು ಕೇಳಿಬಂದಿತ್ತು. ಬಳಕೆದಾರರ ಡೇಟಾವನ್ನು ತನ್ನ ಮಾತೃ ಸಂಸ್ಥೆಯಾದ ಮೆಟಾ ಜತೆಗೆ ಹಂಚಿಕೊಳ್ಳುತ್ತದೆ. ದೂರವಾಣಿ ಕರೆ, ಮೊಬೈಲ್ ಹ್ಯಾಂಡ್​ಸೆಟ್​ನ ಮಾಹಿತಿ, ಲೋಕೇಷನ್, ಬಳಕೆದಾರರ ಸಂಪರ್ಕದಲ್ಲಿರುವವರ (ಕಾನ್​ಟ್ಯಾಕ್ಟ್) ವಿವರವನ್ನು ಹಂಚಿಕೊಳ್ಳುತ್ತದೆ ಎಂದು ದೂರಲಾಗಿತ್ತು. ಭಾರತದಲ್ಲಿ 48 ಕೋಟಿಗೂ ಹೆಚ್ಚು ವಾಟ್ಸ್​ಆಪ್ ಬಳಕೆದಾರರು ಇದ್ದಾರೆ.
ಅಂತಾರಾಷ್ಟ್ರೀಯ ವಂಚಕರ ಜಾಲದಿಂದ ಮೋಸಕ್ಕೆ ಬಲೆಬೀಸುವ ಕರೆಗಳು ಕೆಲವು ದಿನಗಳಿಂದ ವಾಟ್ಸ್​ಆಪ್ ಮೂಲಕ ಬರುತ್ತಿದೆ ಎಂದು ಅನೇಕರು ದೂರಿದ್ದಾರೆ. ಈ ರೀತಿಯ ಸ್ಪ್ಯಾಮ್ ಕರೆಗಳು ಇಂಡೋನೇಷ್ಯಾ (+62), ವಿಯೆಟ್ನಾಂ (+84) ಮಲೇಷ್ಯಾ (+60), ಕೀನ್ಯಾ (+254), ಇಥೋಪಿಯಾ (+251) ಈ ದೇಶಗಳ ಸಂಕೇತವಿರುವ (ಕೋಡ್) ಸಂಖ್ಯೆಯಿಂದ ಕರೆಗಳು ಬರುತ್ತಿವೆ ಎಂದು ವಾಟ್ಸ್​ಆಪ್​ನ ಹಲವಾರು ಗ್ರಾಹಕರು ಟ್ವೀಟ್ ಮಾಡಿದ್ದಾರೆ.
EXIT POLL ಪ್ರಕಟ: ಈ ಬಾರಿ ಯಾರಿಗೆ ಬಹುಮತ? ಇಲ್ಲಿದೆ ವಿವರ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 4 =
Remember me
