ಕಲ್ಕತ್ತ:ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಬಾಲಿವುಡ್ ನಟ ಹಾಗೂ ಮಾಜಿ ಸಂಸದ ಮಿಥುನ್ ಚಕ್ರವರ್ತಿ ಅವರಿಗೆ ಕೇಂದ್ರ ಸರ್ಕಾರ ‘ವೈ’ ಶ್ರೇಣಿಯ ಭದ್ರತೆಯನ್ನು ನೀಡಿದೆ.
ಈ ವಿಷಯವನ್ನು ಖಚಿತಪಡಿಸಿರುವ ಕೇಂದ್ರ ಗೃಹ ಇಲಾಖೆ, ಮಿಥುನ್ ಅವರಿಗೆ ಸಿಐಎಸ್​ಎಫ್ ಕಮಾಂಡೋಗಳು ದಿನದ 24 ತಾಸೂ ಭದ್ರತೆಯನ್ನು ನೀಡಲಿದ್ದಾರೆ ಎಂದು ತಿಳಿಸಿದೆ.
ಕಳೆದ ಭಾನುವಾರ ಕಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಮಿಥುನ್ ಬಿಜೆಪಿ ಸೇರಿದ್ದರು. ತಾವು ಪಶ್ಚಿಮ ಬಂಗಾಳ ಜನರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಬಿಜೆಪಿ ಸೇರಿದ್ದೇನೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ:‘ಹೌದ್ರೀ.. ನಾನು ರಮೇಶ್​ ಜಾರಕಿಹೊಳಿಗೆ ಧೈರ್ಯ ಹೇಳಿದ್ದು ನಿಜ.. ರಾಜಕಾರಣಿಗಳಿಗೆ ಮನುಷ್ಯತ್ವ ಇರಬೇಕ್ರೀ’
ಟಿಎಂಸಿಯಿಂದ ರಾಜ್ಯಸಭೆ ಸಂಸದರೂ ಆಗಿದ್ದ ಮಿಥುನ್ ಚಕ್ರವರ್ತಿ, ಆರೋಗ್ಯ ಕಾರಣದಿಂದ ರಾಜ್ಯಸಭೆ ಸದಸ್ಯತ್ವ ತೊರೆದಿದ್ದರು. ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಿಥುನ್​ ಸೇರ್ಪಡೆಯಿಂದ ಬಂಗಾಳ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ. ಅಲ್ಲದೇ ಅವರು ಚುನಾವಣೆಯ ನಲವತ್ತು ಸ್ಟಾರ್​ ಪ್ರಚಾರಕರಲ್ಲಿ ಒಬ್ಬರಾಗಿದ್ದಾರೆ.
ಆಸ್ಪತ್ರೆಯಲ್ಲಿರೋ ದೀದಿ ಹತ್ರ ಇರೋದು ಒಂಬತ್ತೇ ಗ್ರಾಂ ಚಿನ್ನ, ಒಂದೇ ಒಂದು ಸ್ವಂತ ವಾಹನನೂ ಇಲ್ವಂತೆ!

4ರ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವೃದ್ಧ ದಂಪತಿ! ಇಳಿ ವಯಸ್ಸಿನಲ್ಲಿ ಜೈಲು ಪಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
