ನವದೆಹಲಿ:ಭಾರತದ ಸ್ವದೇಶಿ ಆಂದೋಲನಕ್ಕೆ ಬೆದರಿರುವ ಇತರ ರಾಷ್ಟ್ರಗಳು ಹೇಗಾದರೂ ಮಾಡಿ ಈ ಆಂದೋಲನವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ನಡುವೆಯೇ, ಭಾರತದ ಜನತೆಗೂ ಸುಳ್ಳನ್ನೇ ಉಣಬಡಿಸುತ್ತಿವೆ.
ಚೀನಾ ಮೂಲದ ಟಿಕ್​ಟಾಕ್​ಗೆ ಪರ್ಯಾಯವಾಗಿ ಭಾರತ ಮಿತ್ರೋ ಆ್ಯಪ್​ ಆರಂಭಿಸಿದ್ದೇ ತಡ, ಇದರ ಜನಪ್ರಿಯತೆಯಿಂದ ಹತಾಶಗೊಂಡ ಪಾಕಿಸ್ತಾನ, ಈ ಆ್ಯಪ್​ನ ಮೂಲ ಕೋಡ್​ ತನ್ನದೇ ಎಂದು ವರದಿ ಮಾಡಿತು. ಈ ಆರೋಪದ ನಡುವೆಯೇ ಭಾರತದ ಮಾಧ್ಯಮಗಳಲ್ಲಿಯೂ ಮಿತ್ರೋ ಆ್ಯಪ್​ ಕುರಿತಂತೆ ಸಾಕಷ್ಟು ಟೀಕೆಗಳು ಕೇಳಿಬಂದವು. ಅದೇ ಇನ್ನೊಂದೆಡೆ ಮಿತ್ರೋ ಆ್ಯಪ್​ ಅತ್ಯಧಿಕ ರೀತಿಯಲ್ಲಿ ಡೌನ್​ಲೋಡ್​ ಆಗುತ್ತ ಟಿಕ್​ ಟಾಕ್​ ರೇಟಿಂಗ್​ ಕಡಿಮೆ ಆದದ್ದೇ ತಡ, ಅಮೆರಿಕ ಮೂಲದ ಗೂಗಲ್​ ಸಂಸ್ಥೆ, ಟಿಕ್​ಟಾಕ್​ ರೇಟಿಂಗ್​ ಹೆಚ್ಚು ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸಿತು. ನಂತರ ಮಿತ್ರೋ ಆ್ಯಪ್​ ಪಾಕ್​ ಮೂಲದ್ದು ಎಂದು ಸುದ್ದಿ ಆಗುತ್ತಲೇ ತನ್ನ ಪ್ಲೇಸ್ಟೋರ್​ನಿಂದ ಈ ಆ್ಯಪ್​ ಅನ್ನು ಕಿತ್ತೇ ಹಾಕಿತು!
ಇದನ್ನೂ ಓದಿ:ಭಾರತದ ಆ್ಯಪ್​ಗೆ ಹೆದರಿ​ ಚೀನಾದ ಟಿಕ್​ಟಾಕ್​ ರೇಟಿಂಗ್​ ಹೆಚ್ಚಿಸೇಬಿಟ್ಟಿತಲ್ಲ ಗೂಗಲ್​!
ಆದರೆ ಈ ಆ್ಯಪ್​ನ ಮೂಲ ಕೋಡ್​ ಪಾಕಿಸ್ತಾನದ್ದು ಎಂಬುದು ಹಸಿಸುಳ್ಳು. ನಾವು ಪಾಕಿಸ್ತಾನದ ಕೋಡ್​ ಕದ್ದೂ ಇಲ್ಲ, ಅದರ ಅವಶ್ಯಕತೆಯೂ ನಮಗೆ ಇಲ್ಲ ಎಂದು ಉತ್ತರಿಸಿದ್ದಾರೆ ಮಿತ್ರೋ ಆ್ಯಪ್​ನ ಸೃಷ್ಟಿಕರ್ತರಾಗಿರುವ ಶಿವಾಂಕ್ ಅಗರ್​ವಾಲ್​ ಮತ್ತು ಅನೀಶ್ ಖಂಡೇಲ್ವಾಲ್.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಇವರು, ಮಿತ್ರೋ ಆ್ಯಪ್​ನ ಮೂಲ ಕೋಡ್​ ಪಾಕಿಸ್ತಾನ ಹೇಳಿರುವಂತೆ ಕ್ಯೂಬಾಕ್ಸಸ್ ಸಂಸ್ಥೆಯದ್ದು ಅಲ್ಲವೇ ಅಲ್ಲ. ಎಲ್ಲಾ ಮಾರ್ಗಸೂಚಿ ಹಾಗೂ ನಿಯಮಾವಳಿಗಳನ್ನು ಅನುಸರಿಸಿ, ಆರಂಭಿಕ ಮೂಲ ಮಾದರಿಯ ಕೋಡಿಂಗ್​ ಅನ್ನು ಆಸ್ಟ್ರೇಲಿಯಾದ ಕಂಪನಿಯಾದ ಎನ್ವಾಟೋದಿಂದ ಖರೀದಿ ಮಾಡಲಾಗಿದೆ. ಯಾವುದೇ ಹೊಸದಾಗಿರುವ ಆ್ಯಪ್​ ಸೃಷ್ಟಿ ಮಾಡುವಾಗ, ಈ ರೀತಿಯಾಗಿ ಮೂಲ ಕೋಡಿಂಗ್​ ಖರೀದಿ ಮಾಡಿ, ಅದನ್ನು ಬದಲಾವಣೆ ಮಾಡಿಕೊಳ್ಳುವುದು ಸಾಮಾನ್ಯ. ಆದ್ದರಿಂದ ತನ್ನ ಕೋಡ್​ ಕದಿಯಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗೂಗಲ್​ ಪ್ಲೇ ಸ್ಟೋರ್​ನಿಂದ ಸದ್ಯ ಮಿತ್ರೋ ಆ್ಯಪ್​ ತೆಗೆಯಲಾಗಿದೆ. ಗೂಗಲ್​ ಸಂಸ್ಥೆಯು ಕೆಲವೊಂದು ದಾಖಲೆಗಳನ್ನು ಕೇಳಿದ್ದು, ಅದನ್ನು ನೀಡುತ್ತಿದ್ದೇವೆ. ಶೀಘ್ರದಲ್ಲಿ ಪುನಃ ಆ್ಯಪ್​ ಪ್ಲೇಸ್ಟೋರ್​ಗೆ ಬದಲಿಗೆ ಎಂದಿದ್ದಾರೆ.
ಇದನ್ನೂ ಓದಿ:ಜೂನ್​ 30ರೊಳಗೆ ಆಧಾರ್​- ಪ್ಯಾನ್​ ಜೋಡಣೆ ಕಡ್ಡಾಯ: ಹೇಗೆ? ಏಕೆ? ಇಲ್ಲಿದೆ ವಿವರ
ನಕಲಿ ಆರೋಗ್ಯಸೇತು ಆ್ಯಪ್​ ಬಿಡುಗಡೆ!ಇನ್ನೊಂದೆಡೆ, ಭಾರತದ ಆರೋಗ್ಯ ಸೇತು ಆ್ಯಪ್​ನ ಜನಪ್ರಿಯತೆ ನೋಡಿ ಕುಗ್ಗಿ ಹೋಗಿರುವ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿ ತೋರಿಸಿ ನಕಲಿ ‘ಆರೋಗ್ಯಸೇತು ಆ್ಯಪ್​ ಬಿಡುಗಡೆ ಮಾಡಿದೆ. ಭಾರತದಲ್ಲಿ 10 ಕೋಟಿಗೂ ಅಧಿಕ ಡೌನ್‌ಲೋಡ್‌ ಕಂಡಿರುವ, ವಿಶ್ವದ ಟಾಪ್‌ ಎಂಟು ಆ್ಯಪ್​ಗಳ ಪಟ್ಟಿಯಲ್ಲಿರುವ ಆರೋಗ್ಯಸೇತುವಿನ ನಕಲಿ ಆವೃತ್ತಿಯನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.
ಈ ಮೂಲಕ ಪಾಕಿಸ್ತಾನದ ಹ್ಯಾಕರ್‌ಗಳು ಭಾರತೀಯ ಪ್ರಜೆಗಳ ಹಾಗೂ ಸೇನೆಯ ಮಾಹಿತಿ ಕದಿಯಲು ಮುಂದಾಗಿದ್ದಾರೆ ಎಂದು ಮಹಾರಾಷ್ಟ್ರದ ಸೈಬರ್‌ ಇಲಾಖೆಯ ಐಜಿ ಯಶಸ್ವಿ ಯಾದವ್‌ ಎಚ್ಚರಿಸಿದ್ದಾರೆ.
ಆದ್ದರಿಂದ ಈ ನಕಲಿ ಆ್ಯಪ್​ ತಡೆಗಟ್ಟಲು ಕೆಲವೊಂದು ಮಾರ್ಗಸೂಚಿಗಳನ್ನು ತಿಳಿಸಲಾಗಿದೆ. ಅದೇನೆಂದರೆ:*ಅಸಲಿ ಆರೋಗ್ಯ ಸೇತುವಿನ ಎಕ್ಸ್‌ಟೆನ್ಷನ್‌ ಫೈಲ್‌ನ ಹೆಸರು gov.in ಎಂದು ಇದೆ. ನಕಲಿ ಆ್ಯಪ್‌ನ ಎಕ್ಸ್‌ಟೆನ್ಷನ್‌ ಫೈಲ್‌ನ ಹೆಸರು Apk ಅಂತ ಇರುತ್ತದೆ.*ಗೂಗಲ್​ ಪ್ಲೇ ಸ್ಟೋರ್‌ ಅಥವಾ ಐಒಎಸ್‌ನಲ್ಲಿ ಮಾತ್ರವೇ ಆರೋಗ್ಯ ಸೇತು ಡೌನ್‌ಲೋಡ್‌ ಮಾಡಿಕೊಳ್ಳಬೇಕು*ಆರೋಗ್ಯ ಸೇತು ಹೆಸರಿನಲ್ಲಿ ಬರುವ ಯಾವುದೇ ಮೆಸೇಜ್​ನಲ್ಲಿ ಇರುವ ಲಿಂಕ್​ಗಳನ್ನು ಡೌನ್‌ಲೋಡ್‌ ಮಾಡಬಾರದು. ಲಿಂಕ್​ ಕ್ಲಿಕ್ಕಿಸಲೇಬಾರದು.* ಮೊಬೈಲ್‌ಗೆ ಅನುಮಾನಾಸ್ಪದ ಲಿಂಕ್‌ ಬಂದರೆ ಸೈಬರ್‌ ಪೊಲೀಸರಿಗೆ ಮಾಹಿತಿ ನೀಡಬೇಕು.(ಏಜೆನ್ಸೀಸ್​)
ಕಾನೂನಿನ ಮೊರೆ ಹೋಗಿ ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿ ಕಣ್ಮುಚ್ಚಿದ ಪತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + 4 =
Remember me
