ನವದೆಹಲಿ:ಕರೊನಾದಿಂದಾಗಿ ನಸ್ರೀನ್ ಮೃತಪಟ್ಟಿದ್ದಾಳೆ ಎಂದು ಆಕೆಯ ಕುಟುಂಬದವರಿಗೆ ನಿನ್ನೆ ಜು. 7ರಂದು ಬೆಳಗ್ಗೆ ಏಮ್ಸ್ ಆಸ್ಪತ್ರೆಯಿಂದ ಫೋನ್ ಬಂತು. ಏಳು ಜನ ಕುಟುಂಬಸ್ಥರು ಆಸ್ಪತ್ರೆಗೆ ಹೋದರು. ಆದರೆ ‘ಶವ ಕೊಡಲು ಇನ್ನಷ್ಟು ಸಮಯ ಬೇಕು, ಅಲ್ಲಿಯವರೆಗೆ ಅಂತ್ಯಕ್ರಿಯೆಗೆ ನೀವು ತಯಾರಿ ಮಾಡಿಕೊಳ್ಳಿ’ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರು. ‘ಮುಖ ನೋಡುವುದಕ್ಕಾದರೂ ಬಿಡಿ’ ಎಂದು ಮೃತಳ ಸೋದರ ಮನವಿ ಮಾಡಿದ. ಅದಕ್ಕೂ ಒಪ್ಪದ ಆಸ್ಪತ್ರೆಯವರು ‘ಅಂತ್ಯಕ್ರಿಯೆ ಸಂದರ್ಭದಲ್ಲೇ ಮುಖ ನೋಡಬಹುದು’ ಎಂದರು.
ಬೇರೆ ದಾರಿ ಕಾಣದೆ ಒಬ್ಬರನ್ನು ಮಾತ್ರ ಅಲ್ಲೇ ಬಿಟ್ಟು ಉಳಿದವರೆಲ್ಲ ಖಬರಸ್ತಾನಕ್ಕೆ ಹೋಗಿ ದಫನ ಮಾಡುವುದಕ್ಕೆ ತಯಾರಿ ಮಾಡಿಕೊಂಡರು. ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಶವವನ್ನು ಮಧ್ಯಾಹ್ನದ ವೇಳೆಗೆ ಖಬರಸ್ತಾನಕ್ಕೆ ಆರೋಗ್ಯ ಸಿಬ್ಬಂದಿಯೇ ತಂದರು. ದಫನ ಮಾಡುವ ಮೊದಲು ನಸ್ರೀನ್‌ಳ ಮೂವರು ಮಕ್ಕಳು ಕೂಡ ‘‘ಕೊನೆಯ ಬಾರಿ ಮುಖ ನೋಡಲು ಅವಕಾಶ ಕೊಡಿ’’ ಎಂದು ಆರೋಗ್ಯ ಸಿಬ್ಬಂದಿಯನ್ನು ಕೇಳಿಕೊಂಡರು. ಮೊದಲು ಒಪ್ಪದ ಅವರು ಐನೂರು ರೂ. ಕೊಡುವುದಾಗಿ ಹೇಳಿದ ಮೇಲೆ ಮುಖ ತೋರಿಸಲು ಮುಂದಾದರು. ಆದರೆ ನಸ್ರೀನ್ ಕುಟುಂಬದವರಿಗೆ ಶಾಕ್ ಕಾದಿತ್ತು. ಆ ಶವ ನಸ್ರೀನ್‌ಳದಾಗಿರಲಿಲ್ಲ! ಬೇರೊಬ್ಬ ಹಿಂದು ಮಹಿಳೆಯದಾಗಿತ್ತು.ಇದನ್ನೂ ಓದಿ:ಮೊದಲ ಹಂತದಲ್ಲಿ 375 ಜನರ ಮೇಲೆ ದೇಶೀಯ ಲಸಿಕೆ ಕೊವಾಕ್ಸಿನ್​ ಪ್ರಯೋಗ; 13ರವರೆಗೆ ನೋಂದಣಿಗೆ ಅವಕಾಶ
ಇದನ್ನು ಅಲ್ಲಿದ್ದ ಆರೋಗ್ಯ ಸಿಬ್ಬಂದಿಗೆ ತಿಳಿಸಿದಾಗ, ‘‘ಏನೋ ಎಡವಟ್ಟಾಗಿದೆ. ಸ್ವಲ್ಪ ಹೊತ್ತಿನಲ್ಲಿ ನಸ್ರೀನ್‌ಳ ಶವವನ್ನು ತರುತ್ತೇವೆ’’ ಎಂದು ಹೇಳಿ ಹೊರಟುಹೋದರು. ನಸ್ರೀನ್ ಕುಟುಂಬಸ್ಥರು ಹಲವಾರು ಗಂಟೆಗಳ ಕಾಲ ಖಬರಸ್ತಾನದಲ್ಲೇ ಕಾಯುತ್ತಿದ್ದರೂ ಅವರು ವಾಪಸ್ ಬರಲೇ ಇಲ್ಲ. ನಸ್ರೀನ್ ಕುಟುಂಬಸ್ಥರು ಮತ್ತೆ ಆಸ್ಪತ್ರೆಗೆ ಹೋಗಿ ವಿಚಾರಿಸಿದರು. ಆಗ ಗೊತ್ತಾಗಿದ್ದು- ನಸ್ರೀನ್‌ಳ ಶವವನ್ನು ಹಿಂದು ಕುಟುಂಬವೊಂದು ಆಗಲೇ ಅಂತ್ಯಕ್ರಿಯೆ ಮಾಡಿಯಾಗಿತ್ತು! ಆ ಹಿಂದು ಕುಟುಂಬಕ್ಕೂ ತಾವು ಅಂತ್ಯಕ್ರಿಯೆ ನೆರವೇರಿಸಿದ ಶವ ತಮ್ಮ ಮಗಳದಲ್ಲ ಎಂಬುದು ನಂತರ ತಿಳಿಯಿತು! ಈಗ ಈ ಘಟನೆ ಬಗ್ಗೆ ಏಮ್ಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಶವಾಗಾರದ ಒಬ್ಬ ನೌಕರನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಮತ್ತೊಬ್ಬನನ್ನು ಸಸ್ಪೆಂಡ್ ಮಾಡಿದ್ದಾರೆ.
https://www.vijayavani.net/india-may-become-worst-hit-record-2-87-lakh-covid-cases/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 4 =
Remember me
