ನವದೆಹಲಿ:ಕೃಷಿ ಸಂಬಂಧಿತ 3 ಹೊಸ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ ಸೇರಿದಂತೆ ದೇಶಾದ್ಯಂತ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಸೋಮವಾರ 9 ತಾಸು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಉಪವಾಸ ನಿರಶನದಲ್ಲಿ ಭಾಗಿಯಾಗಿದ್ದರು. ರೈತ ಸಂಘಟನೆಗಳ 33 ಮುಖಂಡರು ಸಿಂಘು ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಈ ನಡುವೆ, ದೆಹಲಿ-ಜೈಪುರ ಹೆದ್ದಾರಿ ಮೂಲಕ ದೆಹಲಿಯೊಳಗೆ ಪ್ರವೇಶಿಸಲು ಯತ್ನಿಸಿದ ಹರಿಯಾಣದ ರೈತರು ಹಾಗೂ ಪೊಲೀಸರ ಮಧ್ಯೆ ಕೆಲ ಕಾಲ ಘರ್ಷಣೆ ನಡೆದಿದೆ. ತಮ್ಮನ್ನು ತಡೆದಿದ್ದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಅವರ ಟ್ರಾ್ಯಕ್ಟರ್​ಗಳ ಕೀಗಳನ್ನು ಕಿತ್ತುಕೊಂಡು ಸುಮಾರು 20ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಈ ಮಧ್ಯೆ, ಉತ್ತರ ಪ್ರದೇಶದ ಹಲವೆಡೆ ಕೃಷಿ ಕಾಯ್ದೆ ಬಗ್ಗೆ ಬಿಜೆಪಿ ಜಾಗೃತಿ ಅಭಿಯಾನ ನಡೆಸಿದೆ. ಮಧ್ಯಪ್ರದೇಶದಲ್ಲಿ ಮಂಗಳವಾರ ರೈತರ ಜತೆ ಸಭೆಯನ್ನು ಏರ್ಪಡಿಸಿದ್ದು, ಹೊಸ ಕೃಷಿ ಕಾನೂನುಗಳ ಬಗ್ಗೆ ಮನವರಿಕೆ ಮಾಡಿಕೊಡಲಿದೆ.
10 ಸಂಘಟನೆಗಳು ಕಾಯ್ದೆ ಪರ:ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯೊಂದಿಗೆ ಸಂಯೋಜಿತವಾಗಿರುವ ಉತ್ತರ ಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಬಿಹಾರ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳ 10 ರೈತ ಸಂಘಟನೆಗಳು ನೂತನ ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿವೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾದ ರೈತ ಮುಖಂಡರ ನಿಯೋಗ, ಹೊಸ ಕಾಯ್ದೆಗಳಿಗೆ ತಮ್ಮ ಬೆಂಬಲವಿದೆ ಎಂದು ಹೇಳಿದೆ. ಸರ್ಕಾರ ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧವಾಗಿದೆ. ರೈತ ಮುಖಂಡರು ಮುಂದಿನ ಸಭೆಗೆ ಸಿದ್ಧರಾದಾಗ ನಿರ್ಧರಿಸಿ ತಿಳಿಸಬೇಕು ಎಂದು ತೋಮರ್ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ನಿರತವಾಗಿರುವ ಸುಮಾರು 40 ರೈತ ಸಂಘಟನೆಗಳ ಮುಂಖಂಡರ ಜತೆ ತೋಮರ್ ಸಂಪರ್ಕದಲ್ಲಿದ್ದು, ಮಾತುಕತೆಗೆ ಬರುವಂತೆ ಮನವಿ ಮಾಡುತ್ತಿದ್ದಾರೆ. ಈ ನಡುವೆ, ಗೃಹ ಸಚಿವ ಅಮಿತ್ ಷಾ ಹಾಗೂ ತೋಮರ್ ಸಿಂಗ್ ಸೋಮವಾರವೂ ಸಭೆ ನಡೆಸಿದ್ದರು.
ರೈತರ ಪ್ರತಿಭಟನೆಗೆ ಸ್ವದೇಶಿ ಜಾಗರಣ ಮಂಚ್ (ಎಸ್​ಜೆಎಂ) ಬೆಂಬಲ ವ್ಯಕ್ತಪಡಿಸಿದ್ದು, ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್​ಪಿ) ಕಾನೂನಾತ್ಮಕಗೊಳಿವುದು ಸೇರಿ ಹಲವು ಬದಲಾವಣೆಗಳಿಗೆ ಆಗ್ರಹಿಸಿದೆ. ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಎಸ್​ಜೆಎಂ, ಆರ್​ಎಸ್​ಎಸ್ ನಂಟಿರುವ 2ನೇ ಅಂಗಸಂಸ್ಥೆ ಆಗಿದೆ. ಈ ಮೊದಲು ಬಿಕೆಎಸ್ ಬೆಂಬಲ ಸೂಚಿಸಿತ್ತು. ಆದರೆ ರೈತ ಸಂಘಟನೆಗಳ ರೀತಿ ಹೊಸ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂಬ ಆಗ್ರಹವನ್ನು ಈ ಎರಡು ಸಂಘಟನೆಗಳು ವ್ಯಕ್ತಪಡಿಸಿಲ್ಲ.
ರೈತ ಸಹೋದರರ ಮಾತುಗಳನ್ನು ಕೇಳಲು, ಅವರ ಅನುಮಾನಗಳನ್ನು ನಿವಾರಿಸಲು ಹಾಗೂ ಅವರಿಗೆ ನೀಡಬಹುದಾದ ಆಶ್ವಾಸನೆ ಗಳೆಲ್ಲದಕ್ಕೂ ನಾವು ಯಾವಾಗಲೂ ಸಿದ್ಧರಿದ್ದೇವೆ. ಪ್ರತಿಭಟನೆಯನ್ನು ಹಿಮ್ಮೆಟ್ಟಿಸುವ ಕ್ರಮವನ್ನು ಸರ್ಕಾರ ಕೈಗೊಳ್ಳುವುದಿಲ್ಲ.
|ರಾಜನಾಥ ಸಿಂಗ್ರಕ್ಷಣಾ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
