ಪಶ್ಚಿಮ ಬಂಗಾಳ:ಮಿಯಾಝಾಕಿ(Miyazaki mango)ತಳಿಯ ಮಾವು ವಿಶ್ವದ ಅತ್ಯಂತ ದುಬಾರಿ(Costliest)ಮಾವು. ಈ ಮಾವು ಸಾಮಾನ್ಯವಾಗಿ ಜಪಾನ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಇದನ್ನೂ ಓದಿ:https://www.vijayavani.net/ukraine-army-dances-for-natu-natu-song-mocking-russia
ಮಿಯಾಝಾಕಿ ಮಾವು ಕೇವಲ ಜಪಾನ್​ನಲ್ಲಿ(Japan)ಮಾತ್ರ ಲಭ್ಯವಿದೆ ಎಂದು ತಿಳಿದಿದ್ದವರಿಗೆ ಅಚ್ಚರಿ ಸುದ್ದಿಯೊಂದು ಕೇಳಿಬಂದಿದೆ. ಈ ದುಬಾರಿ ತಳಿಯ ಮಾವು ಇದೀಗ ಭಾರದಲ್ಲೂ ಕೂಡ ಲಭ್ಯವಿದೆ! ಹೌದು, ಭಾರತದ ಪಶ್ಚಿಮ ಬಂಗಾಳದಲ್ಲಿ ಮಿಯಾಝಾಕಿ ಮಾವಿನ ಮರ ಕಂಡುಬಂದಿದೆ.
ಪಶ್ಚಿಮ ಬಂಗಾಳದ(West Bengal)ದುಬ್ರಾಜ್‌ಪುರದಲ್ಲಿ ಸ್ಥಳೀಯರೊಬ್ಬರು ಎರಡು ವರ್ಷಗಳ ಹಿಂದೆ ಮಿಯಾಝಾಕಿ ಮಾವಿನ ಮರವನ್ನು ನೆಟ್ಟಿದ್ದರು. ನೆಟ್ಟಿದ ಸಂದರ್ಭದಲ್ಲಿ ಈ ಮಾವಿಗೆ ಇಷ್ಟೊಂದು ದುಬಾರಿ ಬೆಲೆ ಇದೆ ಎಂಬ ಸಂಗತಿ ಅವರಿಗೆ ತಿಳಿದಿರಲಿಲ್ಲ ಎಂಬುದು ವರದಿ ಮೂಲಕ ತಿಳಿದುಬಂದಿದೆ.
ಇದನ್ನೂ ಓದಿ:https://www.vijayavani.net/mumbai-flyer-asked-to-pay-for-excess-baggage-claims-her-bag-has-bomb
ಅಪರೂಪದ ಮಾವು ಈಗ ಭಾರತದಲ್ಲಿ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಕಂಡುಬಂದಿದ್ದು, ಇದರ ಬೆಲೆ ಕೆಜಿಗೆ 3 ಲಕ್ಷ ರೂ.! ದುಬ್ರಾಜ್‌ಪುರದ ಮಸೀದಿಯೊಂದರ ಬಳಿ ನೆಟ್ಟಿರುವ ಮಿಯಾಝಾಕಿ ಮಾವಿನ ಮರವು, ಪಶ್ಚಿಮ ಬಂಗಾಳದ ರಾಜ್ಯಾದ್ಯಂತ ಜನರನ್ನು ಆಕರ್ಷಿಸುತ್ತಿದೆ. ಜಪಾನ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಮಾವಿನ ವಿಧವನ್ನು ಪ್ರಧಾನವಾಗಿ ಗರಿಷ್ಠ ಸುಗ್ಗಿಯ ಸಮಯವಾದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಬೆಳೆಯಲಾಗುತ್ತದೆ.
ಇದನ್ನೂ ಓದಿ:https://www.vijayavani.net/water-comes-in-petrol-bunk
ಮಿಯಾಝಾಕಿ ಮಾವು ಹಣ್ಣಾಗುತ್ತಿದ್ದಂತೆ ವಿಶೇಷ ಬಣ್ಣವನ್ನು ಹೊಂದುತ್ತದೆ. ಆರಂಭದಲ್ಲಿ, ಅದರ ಬಣ್ಣ ನೇರಳೆ. ತನ್ನ ಗರಿಷ್ಠ ಪಕ್ವತೆಯನ್ನು ತಲುಪಿದ ನಂತರ, ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಂದು ಮಿಯಾಝಾಕಿ ಮಾವು ಅಂದಾಜು 350 ಗ್ರಾಂ ತೂಕ ತೂಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
