ಮಧುರೈ:ಪೂರ್ತಿ ದೇಶ ಕರೊನಾ ಸೋಂಕಿನಿಂದಾಗಿ ನಲುಗಿದೆ. ಹೀಗಿರುವಾಗ ಅನೇಕರು ಅವರವರ ರಾಜ್ಯಗಳ ಕರೊನಾ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಸೋಂಕಿತರ ಸಹಾಯಕ್ಕೆ ಮುಂದಾಗಿದ್ದಾರೆ. ಅದೇ ರೀತಿ ಇತ್ತೀಚೆಗೆ ತಮಿಳುನಾಡಿನ ಮಧುರೈನ ಏಳು ವರ್ಷದ ಬಾಲಕನೊಬ್ಬ ತಾನು ಕೂಡಿಟ್ಟಿದ್ದ ಹಣವನ್ನು ಕೋವಿಡ್​ ಪರಿಹಾರ ನಿಧಿಗೆ ಕೊಟ್ಟಿದ್ದು, ಅಲ್ಲಿನ ನೂತನ ಸಿಎಂ ಎಂ.ಕೆ.ಸ್ಟಾಲಿನ್​ ಆತನಿಗೆ ಸರ್ಪೈಸ್​ ನೀಡಿದ್ದಾರೆ.
ಮಧುರೈನ ಹರೀಶ್​ (7) ಹೆಸರಿನ ಬಾಲಕ ಸೈಕಲ್​ ತೆಗೆದುಕೊಳ್ಳಬೇಕೆಂದು ಹಣವನ್ನು ಕೂಡಿಟ್ಟಿದ್ದನಂತೆ. ಆದರೆ ಕರೊನಾ ಎರಡನೇ ಅಲೆಯಲ್ಲಿ ಜನರು ಸಾಯುತ್ತಿರುವುದನ್ನು ಕಂಡು ನೋವುಂಡ ಆತ, ತಾನು ಕೂಡಿಟ್ಟಿದ್ದ ಹಣವನ್ನು ರಾಜ್ಯದ ಕೋವಿಡ್​ ಪರಿಹಾರ ನಿಧಿಗೆ ಕೊಟ್ಟಿದ್ದಾನೆ. ಅದರ ಜತೆ ಮುಖ್ಯಮಂತ್ರಿಗೆ ಒಂದು ಪತ್ರವನ್ನೂ ಬರೆದಿದ್ದಾನೆ. ನಾನು ಕೊಟ್ಟಿರುವ ಈ ಹಣದಲ್ಲಿ ಸೋಂಕಿತರಿಗೆ ಸಹಾಯ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾನೆ.
ಬಾಲಕನ ಸೇವಾ ಮನೋಭಾವದ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಅದರ ಬೆನ್ನಲ್ಲೇ ಸಿಎಂ ಎಂಕೆ ಸ್ಟಾಲಿನ್​ ಬಾಲಕನಿಗೆ ಸರ್ಪೈಸ್​ ಒಂದನ್ನು ನೀಡಿದ್ದಾರೆ. ಆತನ ಇಷ್ಟದ ಸೈಕಲ್​ ಅನ್ನು ಅಲ್ಲಿನ ಶಾಸಕರ ಮುಖಾಂತರ ಬಾಲಕನಿಗೆ ಕೊಡಿಸಿದ್ದಾರೆ. ಭಾನುವಾರ ಬೆಳಗ್ಗೆ ಏಳುತ್ತಿದ್ದಂತೆಯೇ ಮನೆ ಎದುರು ತನ್ನಿಷ್ಟದ ಸೈಕಲ್​ ನೋಡಿದ ಬಾಲಕ ಖುಷಿಯಿಂದ ಕುಣಿದಾಡಿದ್ದಾನೆ. ಸ್ಟಾಲಿನ್​ ಬಾಲಕನೊಂದಿಗೆ ಫೋನ್​ನಲ್ಲಿ ಮಾತನಾಡಿದ್ದಾರೆ ಕೂಡ. (ಏಜೆನ್ಸೀಸ್)
ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗಳಲ್ಲಿ 26 ಸೋಂಕಿತರ ಸಾವು! ಹೈ ಕೋರ್ಟ್​ ತನಿಖೆಗೆ ಒತ್ತಾಯಿಸಿದ ಆರೋಗ್ಯ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + sixteen =
Remember me
