ಮುಂಬೈ:ಪ್ರತ್ಯೇಕ ಘಟನಯೊಂದರಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಪಕ್ಷೇತರ ಶಾಸಕಿಯೊಬ್ಬರು ಜೂನಿಯರ್​ ಇಂಜಿನಿಯರ್​ಗೆ ಸಾರ್ವಜನಿಕರ ಎದುರಲ್ಲೇ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಮುಂಬೈನ ಮೀರಾ ಭಯಂದರ್​ ವಿಧಾನಸಭೆ ಕ್ಷೇತ್ರದ ಪಕ್ಷೇತರ ಶಾಸಕಿ ಗೀತಾ ಜೈನ್​ ಮುನ್ಸಿಪಾಲ್​ ಕಾರ್ಪೋರೇಷನ್​(MBMC)ನ ಜೂನಿಯರ್​ ಇಂಜಿನಿಯರ್​ ಶುಭಂ ಪಾಟೀಲ್​ಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಜೂನಿಯರ್​ ಇಂಜಿನಿಯರ್​ ಶುಭಂ ಪಾಟೀಲ್​ ನೇತೃತ್ವದಲ್ಲಿ ಕಾಶಿಮೀರಾದ ಪೆಂಕಾರಪದ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಶುಭಂ ನೇತೃತ್ವದ ಅಧಿಕಾರಿಗಳ ತಂಡ ಸುರಿಯುವ ಮೆಳಯನ್ನು ಲೆಕ್ಕಿಸದೆ ಆರು ತಿಂಗಳ ಮಗು ಮತ್ತು ಹಿರಿಯ ನಾಗರೀಕರನ್ನು ಮನೆಯಿಂದ ಹೊರದಬ್ಬಿದ್ದರು.
ವಿಡಿಯೋ ಕೃಪೆ:Free Press Jorunal
#WATCH|#MeeraBhayandarlegislator#GeetaJainslapped a junior engineer attached to ward number six of the Mira Bhayandar Municipal Corporation (MBMC) in Kashimira on Tuesday. The video clip of the#incidentwent#viralon social media.pic.twitter.com/cKPZ71Pppa
ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಶಾಸಕಿ ಗೀತಾ ಜೈನ್​ ಅಧಿಕಾರಿಗಳಾದ ಶುಭಂ ಹಾಗೂ ಸೋನಿ ಜೈನ್​ಗೆ ಮಳೆಗಾಲದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಬಾರದೆಂಬ ಸರ್ಕಾರಿ ನಿರ್ಣಯ(GR)ದ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಅಧಿಕಾರಿಗಳಿಬ್ಬರು ಶಾಸಕಿಗೆ ಎದುರು ಜವಾಬ್​ ನೀಡಿದ್ದರಿಂದ ಸಿಟ್ಟಿಗೆದ್ದು ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಸಕಿ ಗೀತಾ ಜೈನ್​ ಮಳೆಗಾಲದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸದಂತೆ ಸರ್ಕಾರದ ಕಡೆಯಿಂದ ನಿರ್ಣಯವನ್ನು ಹೊರಡಿಸಲಾಗಿದೆ. ಇದರ ಹೊರತ್ತಾಗಿಯೂ ಅತಿಕ್ರಮಣ ತೆರವು ಮಾಡಲು ಮುಂದಾಗಿದ್ದರು. ಈ ವಿಚಾರ ತಿಳಿದು ನಾನು ಸ್ಥಳಕ್ಕೆ ತೆರಳಿದಾಗ ಅಲ್ಲಿರುವ ನಿವಾಸಿಗಳು ಅಧಿಕಾರಿಗಳ ದುಂಡಾವರ್ತನೆ ಬಗ್ಗೆ ದೂರಿದ್ದರು.
ಈ ಬಗ್ಗೆ ಅಧಿಕಾರಿಗಳ ಪ್ರಶ್ನಿಸಿದಾಗ ಅವರ ಉತ್ತರ ಕೊಡದೆ ತಲೆ ತಗ್ಗಿಸಿಕೊಂಡು ನಗುತ್ತಿದ್ದರು. ಇದರಿಂದ ಕುಪಿತಗೊಂಡು ಅವರ ಮೇಲೆ ಕೈ ಮಾಡಿದ್ದೇನೆ ಅಷ್ಟೇ ಹೊರತು ಬೇರೆ ಯಾವ ಉದ್ದೇಶ ಇರಲಿಲ್ಲ ಎಂದು ಘಟನೆಯ ಕುರಿತು ಶಾಸಕಿ ಗೀತಾ ಜೈನ್​ ತಿಳಿಸಿದ್ದಾರೆ.
ಇನ್ನು ಅಧಿಕಾರಿಗಳ ಮೇಲೆ ಶಾಸಕಿ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ. ಕೆಲವರು ಶಾಸಕಿಯ ಕ್ರಮವನ್ನು ಒಪ್ಪಿದರೆ, ಇನ್ನು ಕೆಲವರು ಇದನ್ನು ಖಂಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ಧಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + 14 =
Remember me
