ನವದೆಹಲಿ:ರೈಲಿನಲ್ಲಿ ಪ್ರಯಾಣಿಸುವಾಗ ಅಂಡರ್​ವೇರ್​ ಮತ್ತು ಬನಿಯನ್​ ಮಾತ್ರ ತೊಟ್ಟು ಬೋಗಿಯಲ್ಲಿ ಓಡಾಡಿ ಸುದ್ದಿಯಾಗಿದ್ದ ಬಿಹಾರದ ಶಾಸಕ ಗೋಪಾಲ್​ ಮಂಡಲ್​ ಮೇಲೆ ಇದೀಗ ಮತ್ತೊಂದು ಆಪಾದನೆ ಕೇಳಿಬಂದಿದೆ. ಸಹಪ್ರಯಾಣಿಕರೊಬ್ಬರು, ಮಂಡಲ್​ ಆ ಸಮಯದಲ್ಲಿ ಪಾನಮತ್ತರಾಗಿದ್ದರು ಮತ್ತು ತಮ್ಮ ಚಿನ್ನದ ಸರ, ಉಂಗುರವನ್ನು ಕಸಿದುಕೊಂಡರು ಎಂದು ಆರೋಪಿಸಿದ್ದಾರೆ.
ಜೆಡಿಯು ಶಾಸಕ ಮಂಡಲ್​ ವಿರುದ್ಧ ಪ್ರಹ್ಲಾದ್​ ಪಾಸ್ವಾನ್​ ಎಂಬ ಪ್ರಯಾಣಿಕರು ದೆಹಲಿಯ ಸರ್ಕಾರಿ ರೈಲ್ವೇ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. “ಬಿಳಿ ಬನಿಯನ್​ ಮತ್ತು ಅಂಡರ್​ವೇರ್​ ತೊಟ್ಟು ಎಸಿ ಕೋಚ್​ನಲ್ಲಿ ಓಡಾಡುತ್ತಿದ್ದ ಶಾಸಕರು ಕುಡಿದಿದ್ದರು. ನಾನು ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ನನ್ನ ಚಿನ್ನದ ಉಂಗುರ ಮತ್ತು ಸರವನ್ನು ಕಸಿದುಕೊಂಡರು. ನನ್ನೊಂದಿಗೆ ದುರ್ವ್ಯವಹಾರ ನಡೆಸಿದರು” ಎಂದು ದೂರಿನಲ್ಲಿ ಹೇಳಿದ್ದಾರೆ. ದೂರನ್ನು ದೆಹಲಿಯ ಬಿಹಿಯ ಜಿಆರ್​ಪಿ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:ರೈಲಿನಲ್ಲಿ ಬನಿಯನ್​, ಅಂಡರ್​ವೇರ್​ನಲ್ಲಿ ಓಡಾಡಿದ ಶಾಸಕ!
ಭಾಗಲಪುರ ಜಿಲ್ಲೆಯ ಗೋಪಾಲಪುರದ ಎಂಎಲ್​ಎ ಆಗಿರುವ ಗೋಪಾಲ್​ ಮಂಡಲ್, ಗುರುವಾರ ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್ ಟ್ರೈನಿನಲ್ಲಿ ಪಟ್ನಾದಿಂದ ನವದೆಹಲಿಗೆ ಪ್ರಯಾಣಿಸುವಾಗ ಒಳಉಡುಪಿನಲ್ಲಿ ಓಡಾಡಿದ್ದ ಚಿತ್ರಗಳು ಜಾಲತಾಣದಲ್ಲಿ ಹರಿದಾಡಿದ್ದವು. ​ಈ ಪ್ರಸಂಗದ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ್ದ ಶಾಸಕರು, ತಮ್ಮ ಹೊಟ್ಟೆ ಕೆಟ್ಟಿದ್ದರಿಂದ ಬಾತ್​ರೂಮಿಗೆ ಆ ರೀತಿ ಬಟ್ಟೆ ಧರಿಸಿ ಓಡಾಡುತ್ತಿದ್ದುದಾಗಿ ಹೇಳಿದ್ದರು.(ಏಜೆನ್ಸೀಸ್)
ಹಾಲಿ, ಮಾಜಿ ಶಾಸಕರ ಮೇಲೆ ದೂರು, ಪ್ರತಿದೂರು ದಾಖಲು!
ಇಡೀ ದೇಹದ ರಕ್ತಸಂಚಾರ ಉತ್ತಮಗೊಳಿಸುವ ಯೋಗಾಸನವಿದು! ಕಾಲಿಗೆ, ಬೆನ್ನಿಗೆ ವಿಶೇಷ ವ್ಯಾಯಾಮ ನೀಡುತ್ತೆ!
‘ಈಸ್ಟ್​ ಇಂಡಿಯಾ ಕಂಪೆನಿ ಪ್ರವೃತ್ತಿ ಬಿಡಿ’: ಇನ್​ಸ್ಟಾಗ್ರಾಂ ಮೇಲೆ ಕಂಗನಾ ಗರಂ!



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
