ಚೆನ್ನೈ:ನಟಿ, ರಾಜಕಾರಣಿ ಆರ್​ಕೆ ರೋಜಾ ಅವರು ಶಸ್ತ್ರಚಿಕಿತ್ಸೆಗೆಂದು ಸೋಮವಾರ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅವರ ಪತಿ ಸೆಲ್ವಮಣಿ ಅವರು ಆಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.
ವೈಎಸ್​ಆರ್​ಸಿಪಿ ಶಾಸಕಿ ಮತ್ತು ಎಪಿಐಐಸಿ ಮುಖ್ಯಸ್ಥೆಯಾಗಿರುವ ರೋಜಾ ಅವರ ಸದ್ಯದ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆಕೆಯನ್ನು ಐಸಿಯುನಿಂದ ರೋಗಿಗಳ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರೋಜಾ ಅವರ ಮೇಲೆ ಎರಡು ವಾರಗಳ ಕಾಲ ನಿಗಾ ಇಡಲು ವೈದ್ಯರು ನಿರ್ಧರಿಸಿದ್ದಾರೆ. ಕರೊನಾ ವೈರಸ್​ ಸೋಂಕಿನ ಕಾರಣದಿಂದ ಕುಟುಂಬಸ್ಥರು ಸೇರಿದಂತೆ ರೋಜಾರ ಭೇಟಿಗೆ ಯಾರಿಗೂ ಅನುಮತಿ ಇಲ್ಲ ಎಂದು ಸೆಲ್ವಮಣಿ ಹೇಳಿದ್ದಾರೆ.
ಇದನ್ನೂ ಓದಿರಿ:ಪತ್ನಿ ಸರಿಯಿಲ್ಲ ಎಂದು ಕಣ್ಣೀರುಹಾಕಿ ಸಂಬಂಧ ಬೆಳೆಸಿದ- ಎಲ್ಲವನ್ನೂ ಒಪ್ಪಿಸಿ ಮೋಸ ಹೋದೆ ಮೇಡಂ…
ರೋಜಾ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಸೆಲ್ವಮಣಿ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ಕಳೆದ ವರ್ಷವೇ ರೋಜಾ ಅವರಿಗೆ ಆಪರೇಷನ್​ ನಡೆಯಬೇಕಿತ್ತು. ಆದರೆ, ಕರೊನಾ ಕಾರಣ ಮುಂದೂಡಲಾಗಿತ್ತು. ಜನವರಿಯಲ್ಲಿ ಸ್ಥಳೀಯ ಚುನಾವಣೆ ಇದ್ದಿದ್ದರಿಂದ ಆಪರೇಷನ್​ ವಿಳಂಬವಾಗಿತ್ತು. ಹೀಗಾಗಿ ಅವರ ಆರೋಗ್ಯ ಏರುಪೇರಾಗಿ, ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ.(ಏಜೆನ್ಸೀಸ್​)
ಅಪ್ಪನ ಆಸ್ತಿಯನ್ನು ಅಣ್ಣ ಗುಟ್ಟಾಗಿ ಮಾರಿದ್ದಾನೆ- ನಮ್ಮ ಮದುವೆಗೆ ಆತ ಖರ್ಚು ಮಾಡಿದ್ದರಿಂದ ಪಾಲು ಸಿಗುವುದಿಲ್ಲವೆ?

ಐಷಾರಾಮಿ ಕಾರಿನ ಒಡೆಯನಾದ ಪ್ರಭಾಸ್​: ಇದರ ಬೆಲೆ ಕೇಳಿದ್ರೆ ಹುಬ್ಬೇರುವುದು ಖಚಿತ!

ಆರೋಪಿ ಜತೆಗೆ 16 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು ಕಟ್ಟಿಹಾಕಿ ಮೆರವಣಿಗೆ: ಕುಟುಂಬಸ್ಥರು ಭಾಗಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − ten =
Remember me
