ನವದೆಹಲಿ:ಬಿಹಾರದ ಆಡಳಿತಪಕ್ಷವಾದ ಜೆಡಿಯು ಶಾಸಕ ಗೋಪಾಲ್​ ಮಂಡಲ್​ ಅವರು ಗುರುವಾರ ರೈಲಿನಲ್ಲಿ ಪ್ರಯಾಣಿಸುವಾಗ, ಬೋಗಿಯಲ್ಲಿ ಬನಿಯನ್ ಮತ್ತು ಅಂಡರ್​ವೇರ್​ನಲ್ಲಿ ಓಡಾಡುತ್ತಿದ್ದುದು ಕಂಡುಬಂದಿದೆ. ಈ ಬಗ್ಗೆ ಇತರ ಪ್ರಯಾಣಿಕರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದು, ಜಗಳದ ಪ್ರಮೇಯ ಎದುರಾಗಿತ್ತು ಎಂದು ವರದಿಯಾಗಿದೆ.
ಗುರುವಾರ ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್ ಟ್ರೈನಿನಲ್ಲಿ ಶಾಸಕ ಗೋಪಾಲ್​ ಮಂಡಲ್​ ಅವರು ಪಟ್ನಾದಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆ ಸಮಯದಲ್ಲಿ ತಮ್ಮ ಎಸಿ ಕೋಚ್​ನಲ್ಲಿ ಬಿಳಿ ಬನಿಯನ್​ ಮತ್ತು ಅಂಡರ್​ವೇರ್​ ಮಾತ್ರ ತೊಟ್ಟು ಓಡಾಡಿದರು ಎನ್ನಲಾಗಿದೆ.
ಇದನ್ನೂ ಓದಿ:ಮನೆಯ ಬಳಿ ಆಡುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ!
“ಸಹಪ್ರಯಾಣಿಕರು ಶಾಸಕರ ನಡವಳಿಕೆ ಬಗ್ಗೆ ದೂರು ನೀಡಿದರು. ರೈಲ್ವೆ ಪೊಲೀಸ್ ಮತ್ತು ಟಿಟಿಇ, ಎರಡೂ ಕಡೆಯವರ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು” ಎಂದು ಈಸ್ಟ್​ ಸೆಂಟ್ರಲ್​ ರೈಲ್ವೆ ಸಿಪಿಆರ್​ಒ ರಾಜೇಶ್​ ಕುಮಾರ್​ ತಿಳಿಸಿದ್ದಾರೆಂದು ಎನ್​ಡಿಟಿವಿ ವರದಿ ಮಾಡಿದೆ.
#WATCHI was only wearing the undergarments as my stomach was upset during the journey: Gopal Mandal, JDU MLA, who was seen in undergarments while travelling from Patna to New Delhi on Tejas Rajdhani Express train yesterdaypic.twitter.com/VBOKMtkNTq
— ANI (@ANI)September 3, 2021

ಮತ್ತೊಂದೆಡೆ ಮಂಡಲ್​ ಅವರು ತಾವು ಆ ರೀತಿ ಓಡಾಡಿದ್ದಕ್ಕೆ ತಮ್ಮ ಹೊಟ್ಟೆ ಕೆಟ್ಟಿದ್ದದ್ದೇ ಕಾರಣ ಎಂದು ಸಮಜಾಯಿಷಿ ನೀಡಿದ್ದಾರೆ. “ಪ್ರಯಾಣದ ವೇಳೆ ನನ್ನ ಹೊಟ್ಟೆ ಕೆಟ್ಟಿದ್ದರಿಂದ ನಾನು ಒಳಉಡುಪುಗಳನ್ನು ಮಾತ್ರ ಧರಿಸಿದ್ದೆ” ಎಂದು ತಿಳಿಸಿರುವ ವಿಡಿಯೋವನ್ನು ಎಎನ್​ಐ ಸುದ್ದಿ ಸಂಸ್ಥೆ ಟ್ವೀಟ್​ ಮಾಡಿದೆ.(ಏಜೆನ್ಸೀಸ್)
ಮಧುಮೇಹ ನಿಯಂತ್ರಣಕ್ಕೆ ಮೊಲದಂತೆ ಕಾಣುವ ಈ ಯೋಗಾಸನ ಮಾಡಿ

ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ಅಮಿತ್​ ಷಾ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
