ಅಲಹಾಬಾದ್:ಇಂದು ಅನೇಕ ಯುವಕರು ಕುಡಿದ ಮತ್ತಿನಲ್ಲಿ ಬೈಕ್ ಅಥವಾ ಕಾರು ಚಲಾಯಿಸಿಕೊಂಡು ಬರುವಾಗ ದಾರಿ ಮಧ್ಯೆ ಅಪಘಾತಕ್ಕೆ ಒಳಗಾಗಿ, ಗಂಭೀರವಾಗಿ ಗಾಯಗೊಂಡರೆ, ಇನ್ನು ಕೆಲವರು ಸ್ಥಳದಲ್ಲೇ ದುರ್ಮರಣ ಹೊಂದುತ್ತಾರೆ. ಕುಡಿದ ಅಮಲಿನಲ್ಲಿ ಬೈಕ್​ ಸವಾರಿ ಮಾಡುವವರ ಸಂಖ್ಯೆ ಇಂದು ಹೆಚ್ಚಿದ್ದು, ರಸ್ತೆಯಲ್ಲಿ ಸಾಗುವ ಇತರ ಸವಾರರಿಗೂ ಅಪಾಯ ತಂದಿಡುವ ಕೆಲವರನ್ನು ಗಮನದಲ್ಲಿಟ್ಟುಕೊಂಡು ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೊಸ ಅವಿಷ್ಕಾರವೊಂದನ್ನು ಜಾರಿಗೆ ತಂದಿದ್ದಾರೆ.
ಇದನ್ನೂ ಓದಿ:ಆಸ್ಕರ್ 2024: ಅತ್ಯುತ್ತಮ ನಟ, ಸಿನಿಮಾ ಸೇರಿ ಏಳು ಪ್ರಶಸ್ತಿ ಬಾಚಿಕೊಂಡ ‘ಓಪನ್​ಹೈಮರ್’​!
ಕಂಠಪೂರ್ತಿ ಕುಡಿದು ತಡರಾತ್ರಿ ಬೈಕ್ ಏರಿ, ರಸ್ತೆಯ ಮಧ್ಯೆ ಅಡ್ಡಾದಿಡ್ಡಿ ಚಲಿಸುವ ಯುವಕರ ಅಮೂಲ್ಯ ಜೀವ ಉಳಿಸುವ ಸಲುವಾಗಿ ಇಲ್ಲಿನ ವಿದ್ಯಾರ್ಥಿಗಳು ಹೊಸ ಪ್ರಯೋಗ ಮಾಡಿದ್ದು, ಬೈಕ್​ ಸ್ಟಾರ್ಟ್​ ಆದರೆ ತಾನೇ ಮನಬಂದಂತೆ ಓಡಿಸುವುದು? ಕುಡಿದ ಮತ್ತಿನಲ್ಲಿ ಕೀ ಹಾಕಿದರೂ ಬೈಕ್​ ಸ್ಟಾರ್ಟ್​ ಆಗದಿದ್ದರೇ ಏನು ಮಾಡ್ತಾರೆ? ಎಂಬ ಹಲವು ವಿಷಯಗಳನ್ನು ಚರ್ಚಿಸಿ, ಅದನ್ನು ಪ್ರಯೋಗಕ್ಕೆ ತರುವ ಮುಖೇನ ಯಶಸ್ವಿಯಾದ ಯುವ ವಿದ್ಯಾರ್ಥಿಗಳ ತಂಡದ ಬಗ್ಗೆ ನೀವು ತಿಳಿಯಲೇಬೇಕು.
ಮದ್ಯ ಸೇವಿಸಿ ನಂತರ ಬೈಕ್​ ಸ್ಟಾರ್ಟ್ ಮಾಡಲು ಯತ್ನಿಸಿದರೆ, ಖಂಡಿತ ಈ ಬೈಕ್ ಆನ್ ಆಗವುದಿಲ್ಲ. ಯಾಕಂದ್ರೆ, ಈ ಗಾಡಿ ಮದ್ಯಪಾನ ಮಾಡಿರುವುದನ್ನು ಪತ್ತೆಹಚ್ಚಲಿದ್ದು, ಯಾವ ವ್ಯಕ್ತಿ ಬೈಕ್​ ಏರುತ್ತಾರೋ, ಅವರು ಕುಡಿದಿದ್ದಾರೋ ಇಲ್ವೋ ಎಂಬುದನ್ನು ತಕ್ಷಣ ಸ್ಪಷ್ಟಪಡಿಸುತ್ತದೆ. ಒಂದು ವೇಳೆ ವ್ಯಕ್ತಿ ಮದ್ಯ ಸೇವಿಸಿದ್ದಲ್ಲಿ, ಬೈಕ್ ಯಾವುದೇ ಕಾರಣಕ್ಕೂ ಆನ್ ಆಗುವುದಿಲ್ಲ. ಇದು ಈ ಎಲೆಕ್ಟ್ರಿಕ್ ಬೈಕ್ ವಿಶೇಷತೆಯಾಗಿದೆ. MNNIT ವಿದ್ಯಾರ್ಥಿಗಳ ಅದ್ಭುತ ಕೆಲಸಕ್ಕೆ ಇದೀಗ ಅನೇಕರಿಂದ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.
ಇದನ್ನೂ ಓದಿ:‘ನನ್ನ 19 ವರ್ಷಗಳ ಕೆರಿಯರ್​ನಲ್ಲಿ ಇಂತಹ ವ್ಯಕ್ತಿಯನ್ನು ನೋಡೇ ಇಲ್ಲ’; ಮಿಲ್ಕಿ ಬ್ಯೂಟಿ ಹೇಳಿದ್ಯಾರಿಗೆ?
ಭಾರತದಲ್ಲಿ ಪ್ರತಿದಿನ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ನಮ್ಮ ಪ್ರತಿಭಾವಂತ ಯುವ ಪೀಳಿಗೆಯು ಸದಾ ಹೊಸ ವಿಷಯಗಳನ್ನು ಸಂಶೋಧಿಸುವ ಮೂಲಕ ಏನನ್ನಾದರೂ ರಚಿಸುತ್ತಲೇ ಇರುತ್ತದೆ. ಅತ್ಯಂತ ವೇಗವಾಗಿ ಸಾಗುತ್ತಿರುವ ಟೆಕ್ನಾಲಜಿಯ ಯುಗದಲ್ಲಿ, ಪ್ರತಿದಿನ ನಾವು ಅಂತಹ ಕೆಲವು ತಂತ್ರಜ್ಞಾನಗಳ ಬಗ್ಗೆ ಹೊಚ್ಚ ಹೊಸ ಮಾಹಿತಿ ತಿಳಿಯುತ್ತೇವೆ, ಅಷ್ಟೇ ಆಶ್ಚರ್ಯ ಕೂಡ ಪಡುತ್ತೇವೆ.
ಇತ್ತೀಚೆಗೆ ಉತ್ತರಪ್ರದೇಶದ ವಿದ್ಯಾರ್ಥಿಗಳ ತಂಡವೊಂದು ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದೆ. ವಾಸ್ತವವಾಗಿ, ಪ್ರಯಾಗರಾಜ್‌ನ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MNNIT) ಮತ್ತು ಸೊಸೈಟಿ ಆಫ್ ಆಟೋಮೋಟಿವ್ ಇಂಜಿನಿಯರ್ಸ್ ಕ್ಲಬ್‌ನ ಉದಯೋನ್ಮುಖ ವಿದ್ಯಾರ್ಥಿಗಳ ತಂಡವು ಹೊಸ ಎಲೆಕ್ಟ್ರಿಕ್ ಬೈಕ್ ಇದೀಗ ಎಲ್ಲರ ಮುಂದೆ ಪ್ರಸ್ತುತಪಡಿಸಿದೆ.
ಇದನ್ನೂ ಓದಿ:ಗಗನಕ್ಕೇರಿದ ಹಣ್ಣು, ತರಕಾರಿಗಳ ಬೆಲೆ; ರಂಜಾನ್​​ಗೆ ದುಬಾರಿಯಾದ ಅಗತ್ಯ ವಸ್ತುಗಳು…
ಸದ್ಯ ವಿದ್ಯಾರ್ಥಿಗಳ ಈ ಹೊಸ ಅವಿಷ್ಕಾರ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಎಲೆಕ್ಟ್ರಿಕ್ ಬೈಕ್​ನಲ್ಲಿ ಆಲ್ಕೋಹಾಲ್ ಪತ್ತೆ ಮತ್ತು ಹೊಗೆ ಪತ್ತೆ ಮಾಡುವ ವ್ಯವಸ್ಥೆ ಇದ್ದು, ಇದರಿಂದ ಸವಾರ ಕುಡಿದು ಬೈಕ್ ಚಲಾಯಿಸಿದರೆ ಬೈಕ್ ಸ್ಟಾರ್ಟ್ ಆಗುವುದಿಲ್ಲ ಎಂಬುದು ಅಚ್ಚರಿ ಸಂಗತಿ. MNNITಯ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ಎಲೆಕ್ಟ್ರಿಕ್ ಬೈಕ್ ಗಂಟೆಗೆ ಗರಿಷ್ಠ 70 ಕಿಲೋಮೀಟರ್ ವೇಗವನ್ನು ಹೊಂದಿದ್ದು, ಕೇವಲ 4 ಗಂಟೆಗಳ ಚಾರ್ಜಿಂಗ್‌ನಲ್ಲಿ 60 ಕಿಲೋಮೀಟರ್ ಪ್ರಯಾಣ ಮಾಡಬಹುದಾಗಿದೆ.
ಇದೆಲ್ಲದರ ಮಧ್ಯೆ ಬೈಕ್ ಆಲ್ಕೋಹಾಲ್ ಪತ್ತೆ ವ್ಯವಸ್ಥೆಯನ್ನು ಹೊರತುಪಡಿಸಿ, ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಇ-ಬೈಕ್‌ನಲ್ಲಿ ಆಂಟಿ ಥೆಫ್ಟ್ ಅಲಾರ್ಮ್ ಸಂವೇದಕವನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಅಪಘಾತದ ಸಂದರ್ಭದಲ್ಲೂ ತನ್ನ ಸವಾರರಿಗೆ ಸಾಕಷ್ಟು ಸುರಕ್ಷತೆಯನ್ನು ಒದಗಿಸುತ್ತದೆ ಎನ್ನಲಾಗಿದೆ.
ಇದನ್ನೂ ಓದಿ:VIDEO | ಟಿಕೆಟ್ ಇಲ್ಲದೆ ಮೆಟ್ರೋ ನಿಲ್ದಾಣ ಪ್ರವೇಶಿಸಿದ ಮಗ, ಪಾಠ ಕಲಿಸಿದ ತಾಯಿ…
MNNITಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರ ಮೇಲ್ವಿಚಾರಣೆಯಲ್ಲಿ ವಿದ್ಯಾರ್ಥಿಗಳ ತಂಡವು ಈ ಇ-ಬೈಕ್ ಅನ್ನು ಸಿದ್ಧಪಡಿಸಿದೆ. ಪ್ರಾಧ್ಯಾಪಕರು ವಿದ್ಯಾರ್ಥಿಗಳ ಸಂಶೋಧನೆಯಿಂದ ಅತೀವ ಸಂತೋಷಪಟ್ಟಿದ್ದು, ಹೆಮ್ಮೆಯಿಂದ ತಮ್ಮ ವಿದ್ಯಾರ್ಥಿಗಳು ಎಂದು ಕೊಂಡಾಡಿದ್ದಾರೆ. ಈ ಎಲೆಕ್ಟ್ರಿಕ್ ಬೈಕ್‌ನ ಸೆನ್ಸಾರ್‌ಗಳು ಸವಾರರು ಮದ್ಯ ಸೇವಿಸಿದ್ದಾರೆಯೇ ಎಂಬುದನ್ನು ಕ್ಷಣಮಾತ್ರದಲ್ಲಿ ಪತ್ತೆ ಮಾಡುತ್ತದೆ. ಇದು ಕಡಿದಾದ ಎತ್ತರದ ರಸ್ತೆಗಳನ್ನು ಸುಲಭವಾಗಿ ಏರುವ ಸಾಮರ್ಥ್ಯವನ್ನು ಹೊಂದಿರುವ ಹಿಲ್ ಅಸಿಸ್ಟ್‌ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಸಹ ಹೊಂದಿದೆ ಎಂದು ವರದಿಯಾಗಿದೆ.
ಈ ಇ-ಬೈಕ್ ಅನ್ನು ಸುಮಾರು 1.30 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿದ್ದು, ಇತ್ತೀಚೆಗೆ ಭೋಪಾಲ್‌ನಲ್ಲಿ ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಇಂಜಿನಿಯರ್ಸ್ (ISIE) ಆಯೋಜಿಸಿದ್ದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಪ್ರದರ್ಶಿಸಲಾಯಿತು. ದೇಶದ ವಿವಿಧ ಕಾಲೇಜುಗಳ 70 ತಂಡಗಳು ಇದರಲ್ಲಿ ಭಾಗವಹಿಸಿದ್ದವು. ಇದರಲ್ಲಿ MNNITಗೆ ಅತ್ಯುತ್ತಮ ವಿನ್ಯಾಸ ಮತ್ತು ಭವಿಷ್ಯದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪುಲ್ಕಿತ್ ಸಿಂಘಾಲ್, ಹರ್ಷ ಮಹರ್ಷಿ, ಆದರ್ಶ್ ಕುಮಾರ್ ಮತ್ತು ಇತರರು ಈ ಎಲೆಕ್ಟ್ರಿಕ್ ಬೈಕ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ,(ಏಜೆನ್ಸೀಸ್).
‘ನನ್ನ 19 ವರ್ಷಗಳ ಕೆರಿಯರ್​ನಲ್ಲಿ ಇಂತಹ ವ್ಯಕ್ತಿಯನ್ನು ನೋಡೇ ಇಲ್ಲ’; ಮಿಲ್ಕಿ ಬ್ಯೂಟಿ ಹೇಳಿದ್ಯಾರಿಗೆ?

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನ ಬೆತ್ತಲೆ ತಿರುಗಾಟ! ಸಿಸಿಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ಸಂಗತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 1 =
Remember me
