ಮಧ್ಯಪ್ರದೇಶ:ಕೆಲವು ವಸ್ತುಗಳನ್ನು ಮುನ್ನೆಚ್ಚರಿಕೆಯಿಂದ ಬಳಸಬೇಕು. ಇಲ್ಲೊಬ್ಬ ವೃದ್ಧ ಅಜಾಗರೂಕತೆಯಿಂದ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.
ದಯಾರಾಮ್ ಬಾರೋಡ (68) ಮೃತ ವೃದ್ಧ. ಮೊಬೈಲ್​​ ಚಾರ್ಜ್​​ಗೆ ಹಾಕಿ ಮಾತನಾಡುತ್ತಿರುವಾಗ ಸ್ಫೋಟವಾಗಿದೆ. ಈ ಸ್ಫೋಟ ಎಷ್ಟು ಭಯಾನಕವಾಗಿತ್ತು ಎಂದರೆ, ದಯಾರಾಮ್ ತಲೆಯಿಂದ ಎದೆಯ ಭಾಗದವರೆಗೆ ದೇಹ ಛಿದ್ರ ಛಿದ್ರವಾಗಿದೆ. ಉಜ್ಜಯಿನಿಯಿಂದ 40 ಕಿಮೀ ದೂರದಲ್ಲಿರುವ ಬದ್‌ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ದಯಾರಾಮ್ ಬರೋದ್ ಅವರು ಮನೆಯಲ್ಲಿ ಚಾರ್ಜ್ ಆಗುತ್ತಿದ್ದ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಮೊಬೈಲ್​​ ಚಾರ್ಜ್​ ಹಾಕಿರುವುದರಿಂದ  ​ ಸ್ಫೋಟವಾಗಿದೆ. ಈ ಪರಿಣಾಮ ದಯಾರಾಮ್​​ ಅವರ ತಲೆಯಿಂದ ಎದೆವರೆಗೆ ದೇಹ ಸಂಪೂರ್ಣ ತುಂಡು ತುಂಡಾಗಿದೆ. ಪವರ್ ಪಾಯಿಂಟ್ ಕೂಡ ಸಂಪೂರ್ಣ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ:ಬೇರೊಬ್ಬಳೊಂದಿಗೆ ಓಡಿ ಹೋದ ಪತಿ; ಗಂಡನ ಜತೆಗೆ ಹೋದವಳ ಪತಿಯನ್ನೇ ವಿವಾಹವಾದ ಮಹಿಳೆ
ಸ್ಥಳದಿಂದ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಒಂದು ಫೋನ್ ಮಾತ್ರ ಕೆಟ್ಟದಾಗಿ ಹಾಳಾಗಿರುವುದು ಕಂಡುಬಂದಿದೆ. ಪೊಲೀಸರು ಮೊಬೈಲ್‌ನ ತುಣುಕುಗಳನ್ನು ವಶಪಡಿಸಿಕೊಂಡು ತನಿಖೆಗೆ ಕಳುಹಿಸಿದ್ದಾರೆ. ಚಾರ್ಜಿಂಗ್‌ನಲ್ಲಿ ಮೊಬೈಲ್‌ನೊಂದಿಗೆ ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ರೈಲುಗಳು ಮುಖಾಮುಖಿ ಡಿಕ್ಕಿ; 26 ಮಂದಿ ಮೃತ್ಯು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 7 =
Remember me
