ಲಖನೌ:ಉತ್ತರ ಪ್ರದೇಶದ ಲಲಿತ್‌ಪುರದ ಮೊಬೈಲ್ ರಿಪೇರಿ ಅಂಗಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್​ ಆಗುತ್ತಿದೆ. ಬಾಂಬ್​ ಮಾದರಿಯಲ್ಲೇ ಮೊಬೈಲ್​ ಒಂದು ಸ್ಫೋಟಗೊಂಡಿದ್ದು, ಅದೃಷ್ಟವಶಾತ್​ ಗ್ರಾಹಕ ಮತ್ತು ಅಂಗಡಿ ಮಾಲೀಕ ಬಚಾವ್​ ಆಗಿದ್ದಾರೆ.
ರಿಪೇರಿಗೆಂದು ಗ್ರಾಹಕನೊಬ್ಬ ಅಂಗಡಿಗೆ ಮೊಬೈಲ್ ತಂದಿದ್ದ. ಈ ವೇಳೆ ಮೊಬೈಲ್ ರಿಪೇರಿ ಮಾಡುವಾಗ ಏಕಾಏಕಿ ಬಾಂಬ್​ನಂತೆ ಮೊಬೈಲ್​ ಸ್ಫೋಟಗೊಂದು ಹೊತ್ತಿ ಉರಿದ ಘಟನೆ ಉತ್ತರ ಪ್ರದೇಶದ ಲಲಿತ್‌ಪುರದ ಪಾಲಿ ಪ್ರದೇಶದಲ್ಲಿ ನಡೆದಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭದೋಹಿ ವಲ್ಲಾ ಎಂಬ ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. 13 ಸೆಕೆಂಡ್‌ಗಳ ವಿಡಿಯೋದಲ್ಲಿ, ಅಂಗಡಿಯವನು ಫೋನ್‌ನಿಂದ ಬ್ಯಾಟರಿಯನ್ನು ತೆಗೆದುಹಾಕಿದಾಗ ಮೊಬೈಲ್​ ಸ್ಫೋಟಗೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ಕೌಂಟರ್‌ನಲ್ಲಿ ನಿಂತಿದ್ದ ಅಂಗಡಿಯ ಮಾಲೀಕ ಮತ್ತು ಗ್ರಾಹಕ ತಕ್ಷಣವೇ ಹಿಂದೆ ಸರಿಯುವ ಮೂಲಕ ಅಪಾಯದಿಂದ ತಪ್ಪಿಸಿಕೊಂಡರು. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಒಂದು ವೇಳೆ ಹಿಂದೆ ಸರಿಯದಿದ್ದರೆ, ಗಂಭೀರ ಗಾಯಗಳಾಗುವ ಸಾಧ್ಯತೆ ಇತ್ತು.
ಮೊಬೈಲ್​ ಸ್ಫೋಟಗೊಂಡ ವಿಷಯ ಗಮನಕ್ಕೆ ಬಂದಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪಾಲಿ ಪೊಲೀಸ್ ಠಾಣೆಯ ಪಟ್ಟಣ ಉಸ್ತುವಾರಿ ಸಿಯಾರಾಮ್ ಸಿಂಗ್ ಪಟೇಲ್ ತಿಳಿಸಿದ್ದಾರೆ. ಈ ವೀಡಿಯೋ ಜನರನ್ನು ದಿಗ್ಭ್ರಮೆಗೊಳಿಸಿದ್ದು, ಇದುವರೆಗೆ ಟ್ವಿಟರ್‌ನಲ್ಲಿ 15,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.(ಏಜೆನ್ಸೀಸ್​)
उत्तर प्रदेश के ललितपुर में रिपेयरिंग के दौरान एक मोबाइल बम की तरह फट पड़ाpic.twitter.com/eBUCe9f4nL
— Bhadohi Wallah (@Mithileshdhar)October 23, 2022

ಪಾಕ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆ, ವಿಡಿಯೋ ವೈರಲ್​

ಚಳ್ಳಕೆರೆಯ CPI ವಿರುದ್ಧ ರೇಪ್​ ಕೇಸ್​ ದಾಖಲು: ಇಬ್ಬರು ಪತ್ನಿಯರಿದ್ರು ಯುವತಿಗೆ 5 ಬಾರಿ ಗರ್ಭಪಾತ ಮಾಡಿಸಿದ ಆರೋಪ

ಸ್ಟಾರ್​​ ಹೋಟೆಲ್​ನಲ್ಲಿ ಅಭಿಮಾನಿಗಳಿಗೆ ಪಾರ್ಟಿ ಕೊಡಿಸಿದ ನಟಿ ಕೀರ್ತಿ ಸುರೇಶ್! ಸೌತ್​ ಬ್ಯೂಟಿಗೆ ನೆಟ್ಟಿಗರ ಮೆಚ್ಚುಗೆ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + two =
Remember me
