ಅಲಿಗಢ:ಜೇಬಿನಿಂದ ಹೊಗೆ ಬಂದಿದ್ದನ್ನು ಕಂಡು ಉದ್ಯಮಿಯೊಬ್ಬ ಮೊಬೈಲ್ ಹೊರತೆಗೆಯುತ್ತಿದ್ದಂತೆ ಬ್ಲಾಸ್ಟ್ ಆಗಿರುವ ಘಟನೆ ಉತ್ತರಪ್ರದೇಶದ ಅಲಿಗಢದದಲ್ಲಿ ನಡೆದಿದೆ.ಘಟನೆಯಲ್ಲಿ ಪ್ರೇಮ್ ರಾಜ್ ಸಿಂಗ್ ಎಂಬುವರು ಗಾಯಗೊಂಡಿದ್ದು, ಸುಮಾರು ಮೂರು ವರ್ಷಗಳ ಹಿಂದೆ ಖರೀದಿಸಿದ ಫೋನ್​ನ್ನು ತನ್ನ ಜೇಬಿನಲ್ಲಿಟ್ಟುಕೊಂಡಿದ್ದ. ಈ ವೇಳ ಜೇಬಿನಲ್ಲಿ ಏನೋ ಬಿಸಿಯಾದ ಅನುಭವವಾಗಿದ್ದು, ಕೂಡಲೇ ಜೇಬಿನಿಂದ ಹೊಗೆ ಬರಲು ಆರಂಭಿಸಿದೆ.ತಕ್ಷಣವೇ ಪ್ರೇಮ್​ರಾಜ್​ ಮೊಬೈಲ್​ನ್ನು ಹೊರತೆಗೆಯಲು ಯತ್ನಿಸಿದ್ದು, ಅದು ಬ್ಲಾಸ್ಟ್​​ ಆಗಿದೆ. ಪರಿಣಾಮವಾಗಿ ಆತನ ಎಡಗೈ ಹೆಬ್ಬೆರಳು ಮತ್ತು ತೊಡೆಯ ಮೇಲೆ ಸುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನ ಸ್ಥಿತಿ ಉತ್ತಮವಾಗಿದೆ.ಇದನ್ನೂ ಓದಿ:ಅಪರಿಚಿತರಿಂದ ಲಿಫ್ಟ್ ತೆಗೆದುಕೊಳ್ಳಲು ಹೋಗಿ 13 ಗ್ರಾಂ ಚಿನ್ನದ ಸರ ಕಳೆದುಕೊಂಡ ಮಹಿಳೆ..!ಈ ಕುರಿತು ಮಾತನಾಡಿರುವ ಗಾಯಾಳು, ತಾನು ಹಲವು ವರ್ಷಗಳಿಂದ ಅದೇ ಬ್ರಾಂಡ್ ಅನ್ನು ಬಳಸುತ್ತಿದ್ದೇನೆ. ಆದರೆ ಘಟನೆಯ ನಂತರ, ನಾನು ಕಂಪನಿಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ. ದೊಡ್ಡ ಅನಾಹುತವಾಗದಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ. ಈ ಕುರಿತು ಮಹುವಾ ಖೇರಾ ಪೊಲೀಸ್ ಠಾಣೆಯಲ್ಲಿ ಫೋನ್​ ತಯಾರಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.ಮೊಬೈಲ್ ಫೋನ್ ಸ್ಫೋಟಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವೀಡಿಯೋ ನೋಡುತ್ತಿದ್ದಾಗ ಮೊಬೈಲ್ ಬ್ಲಾಸ್ಟ್ ಆಗಿ ತಿರುವನಂತಪುರದಲ್ಲಿ 8ರ ಬಾಲಕಿ ಮೃತಪಟ್ಟಿದ್ದಳು. ಪ್ರಯಾಣಿಕನ ಮೊಬೈಲ್ ಬ್ಲಾಸ್ಟ್ ಆದ ಪರಿಣಾ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಹೀಗೆ ಅನೇಕ ಘಟನೆಗಳು ಬ್ಲಾಸ್ಟ್​​ಗೆ ಸಂಬಂಧಿಸಿದ್ದಿ, ಮೊಬೈಲ್​ ಬಳಸುವಾಗ ಎಚ್ಚರದಿಂದ ಇರುವುದು ಅತ್ಯಗತ್ಯವಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿ: ಜ್ವರದಿಂದ ಬಳಲುತ್ತಿರುವ ಮಗುವಿಗೆ ರೇಬೀಸ್ ಲಸಿಕೆ ನೀಡಿದ ನರ್ಸ್: ಮುಂದೆ ನಡೆದಿದ್ದಿಷ್ಟು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 20 =
Remember me
