ಕೊಟ್ಟಾಯಂ:ಆಕಸ್ಮಿಕವಾಗಿ ಚರಂಡಿಗೆ ಬಿದ್ದ ಮೊಬೈಲ್ ಫೋನ್ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಸುಮಾರು 3 ಗಂಟೆಗಳ ಕಾಲ ಹರಸಾಹಸಪಟ್ಟ ಘಟನೆ ಕೊಟ್ಟಾಯಂನ ನಗರದ ಕೇಂದ್ರ ಭಾಗದಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ಪುಲಿಮೂಡು ಜಂಕ್ಸನ್​ ಬಳಿ ಘಟನೆ ನಡೆದಿದ್ದು, ಚರಂಡಿಗೆ ಬಿದ್ದಿದ್ದ ಅಲಪುಜ್ಜ ಚಂಬಕುಲಂ ನಿವಾಸಿ ಅಲಿಸ್​ ಜೋಸ್​ ಅವರ ಮೊಬೈಲ್​ ಅನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.
ಇದನ್ನೂ ಓದಿ:ಅಮೆರಿಕದಲ್ಲಿ ಭಾರತೀಯನ ಮೇಲೆ ಗುಂಡಿನ ದಾಳಿ: ನೋಡಿಕೊಳ್ಳಲು ಯಾರು ಇಲ್ಲ, ಆತಂಕದಲ್ಲಿ ಕುಟುಂಬ
ಘಟನೆಯ ವಿವರಣೆಗೆ ಬರುವುದಾದರೆ, ಅಲಿಸ್​ ಅವರು ಸೈಡ್​ ವಾಕ್​ ಮೂಲಕ ಹಾದು ಹೋಗುತ್ತಿದ್ದರು. ಈ ವೇಳೆ ತಮ್ಮ ಬ್ಯಾಗ್​ಬಿಂದ ಛತ್ರಿಯನ್ನು ಹೊರತೆಗೆಯುವಾಗ ಆಕಸ್ಮಿಕವಾಗಿ ಮೊಬೈಲ್​ ಕೈನಿಂದ ಜಾರಿ ಚರಂಡಿಯೊಳಗೆ ಬಿದ್ದಿದೆ. ಮೊಬೈಲ್​ ಕವರ್​ ಒಳಗೆ ಹಣ ಇಟ್ಟಿದ್ದರಿಂದ ಗಾಬರಿಗೊಂಡ ಅಲಿಸ್​ ಹತ್ತಿರದ ಅಂಗಡಿಯವರ ನೆರವು ಕೇಳಿದ್ದಾರೆ.
ಚರಂಡಿ ಮೇಲೆ ಹಾಕಲಾಗಿದ್ದ ಸ್ಲ್ಯಾಬ್​ ಅನ್ನು ತೆಗೆಯಲಾಗದೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಲ್ಯಾಬ್​ ಅನ್ನು ಸುಲಭವಾಗಿ ತೆಗೆಯಬಹುದು ಅಂದುಕೊಂಡಿದ್ದರು. ಆದರೆ, ಸ್ಲ್ಯಾಬ್​ 9 ಇಂಚು ದಪ್ಪವಿದ್ದುದ್ದರಿಂದ ಸಿಬ್ಬಂದಿಯು ಸಹ ಹರಸಾಹಸ ಪಡಬೇಕಾಯಿತು.
ಇದನ್ನೂ ಓದಿ:ಡಿಜೆ, ಡಾನ್ಸ್, ಪಾರ್ಟಿ ನಿಷೇಧ, ಹೊಸ ವರ್ಷ ಸಂಭ್ರಮ ಸರಳ ಆಚರಣೆಗೆ ಸೂಚನೆ
ಕೊನೆಗೆ ಸ್ಲ್ಯಾಬ್​ ಮೇಲೆ ರಂಧ್ರವನ್ನು ಕೊರೆದು ಟಾರ್ಚ್​ಲೈಟ್​ ಮೂಲಕ ಮೊಬೈಲ್​ ಪತ್ತೆ ಹಚ್ಚಿ ಹೊರತೆಗೆದರು. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಧನೇಶ್​, ರೋಷನ್​, ಶೆಫೀಕ್​, ಅಜಿತ್​, ರೆಜಿ ಕುರಿಯಾಕೊಸೆ ಮತ್ತು ಶೈಜು ತೊಡಗಿಕೊಂಡಿದ್ದರು. ಮೊಬೈಲ್​ ಮರಳಿ ಪಡೆದ ಅಲಿಸ್​ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು.(ಏಜೆನ್ಸೀಸ್​)
ಪತಿಗೆ ನನ್ನಲ್ಲಿ ಆಸಕ್ತಿಯಿಲ್ಲ- ಮಕ್ಕಳಾಗದ್ದಕ್ಕೆ ಅತ್ತೆ ನನ್ನನ್ನು ಹೀಯಾಳಿಸುತ್ತಿದ್ದಾರೆ… ಕುಗ್ಗಿ ಹೋಗಿದ್ದೇನೆ…

ಹೊಸ ರೂಪಾಂತರ ಕರೊನಾ ವೈರಸ್ ಭೀತಿ: ಲಂಡನ್​ನಿಂದ ಬಂದ ಮೇಲೆ ಕ್ವಾರಂಟೈನ್​ ಆಗದ ಹರ್ಷಿಕಾ!

ಪ್ರಧಾನಿ ನರೇಂದ್ರ ಮೋದಿಗೆ ಒಲಿದ ಅಮೆರಿಕದ ಪ್ರತಿಷ್ಠಿತ ‘ಲೀಜನ್ ಆಫ್ ಮೆರಿಟ್’ ಅವಾರ್ಡ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 8 =
Remember me
