ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು:ಹಾದಿಬೀದಿಯಲ್ಲಿ ಮೊಬೈಲ್ ಕಳ್ಳತನ ಮಾಡುವರಿಗೆ ಕೇಂದ್ರ ಸರ್ಕಾರ ಮಾಸ್ಟರ್ ಸ್ಟೋಕ್ ನೀಡುತ್ತಿದೆ.
ಸೆಂಟ್ರಲ್ ಇಕ್ವಿಪ್ಟೆಂಟ್ ಐಡೆಂಟಿಟಿ ರಿಜಿಸ್ಟರ್ ಆ್ಯಪ್ (ಸಿಇಐಆರ್) ಪೋರ್ಟಲ್ ಮೂಲಕ ಕಳವಾದ ಮತ್ತು ಕಳ್ಳತನವಾದ ಮೊಬೈಲ್‌ಗಳ ಟ್ರ್ಯಾಕ್‌ ಮಾಡಿ 2.69 ಲಕ್ಷ ಫೋನ್‌ಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ಇದರಲ್ಲಿ ಕರ್ನಾಟಕ ಪೊಲೀಸರು ಬರೋಬ್ಬರಿ 6 ಸಾವಿರ ಮೊಬೈಲ್‌ಗಳನ್ನು ಮಾಲೀಕರಿಗೆ ವಾಪಸ್ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಪೊಲೀಸ್‌ ವರದಿ ಪ್ರಕಾರ, ಪ್ರತಿದಿನ ಅಂದಾಜು 40 ಮೊಬೈಲ್ ಗಳು ಕಳವಾಗುತ್ತಿವೆ. ರಸ್ತೆಬದಿ ಸಂಭಾಷಣೆ ನಿರತ ಪಾದಚಾರಿ, ಬಸ್‌ಗಳಲ್ಲಿ ಜೇಬು ಕಳ್ಳತನ, ಸುಲಿಗೆ, ದರೋಡೆ, ಗಮನಬೇರೆಡೆ ಸೆಳೆದು ಫೋನ್ ಕಳವು ಮಾಡುವರ ಹಾವಳಿ ಹೆಚ್ಚಾಗಿದೆ.
ಕಳ್ಳರಿಗೆ ಕಡಿವಾಣ ಹಾಕಲು ಕೇಂದ್ರ ಗೃಹ ಸಚಿವಾಲಯ ಮೊಬೈಲ್ ಕಂಪನಿ ಮತ್ತು ಟೆಲಿಕಾನ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮಾರಾಟವಾಗುವ ಮೊಬೈಲ್‌ನ ಐಎಂಇ ನಂಬರ್‌ ಸರ್ಕಾರದೊಂದಿಗೆ ಕಡ್ಡಾಯವಾಗಿ ಹಂಚಿಕೊಳ್ಳಬೇಕಾಗಿದೆ. ಇದನ್ನು ಬಳಸಿಕೊಂಡ ಸಿಇಐಆರ್ ಪೋರ್ಟಲ್ ತೆರೆದು ಕಳವಾದ ಮೊಬೈಲ್ಅನ್ನು ಬ್ಲಾಕ್ ಮತ್ತು ಪತ್ತೆ ಹಚ್ಚುವ ಯೋಜನೆ ರೂಪಿಸಿತ್ತು. ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಪ್ರಯೋಗಿಕವಾಗಿ ಜಾರಿಗೆ ತಂದು ಯಶಸ್ವಿಯಾದ ಮೇಲೆ ಮೇ 17ರಿಂದ ದೇಶಾದ್ಯಂತ ವ್ಯಾಪ್ತಿ ವಿಸ್ತರಿಸಿದೆ.

ಸಿಇಐಆರ್ ವೆಬ್‌ಸೈಟ್‌ನಲ್ಲಿ ನೇರವಾಗಿ ಜನರೇ ಬ್ಲಾಕ್ ಮಾಡಬಹುದು. ದೇಶದಲ್ಲಿ ಬುಧವಾರದವರೆಗೆ 6,07,293 ಮೊಬೈಲ್ ಬ್ಲಾಕ್ ಮಾಡಲಾಗಿದೆ. ಈ ಪೈಕಿ 2,69,236 ಫೋನ್ ಗಳನ್ನು ಪತ್ತೆ ಹಚ್ಚಲಾಗಿದೆ. ಇದರ ಅಂಕಿ-ಅಂಶ ಪ್ರತಿ ನಿಮಿಷಕ್ಕೂ ಬದಲಾಗುತ್ತಾ ಹೋಗುತ್ತಿದೆ.
ಕರ್ನಾಟಕದಲ್ಲಿ ಮೊಬೈಲ್ ಬ್ಲಾಕ್ ಮಾಡುವ ಯೋಜನೆ ಕುರಿತು ಮಾರ್ಗಸೂಚಿ ರಚಿಸಲಾಗಿದೆ. ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ (ಸಿಇಎನ್) ಠಾಣಾ ಇನ್‌ಸ್ಪೆಕ್ಟರ್​ ಅನ್ನು ನೋಡಲ್ ಅಧಿಕಾರಿ ಆಗಿ ನೇಮಿಸಲಾಗಿದೆ. ಮೊಬೈಲ್ ಕಳವಾದ ಬಗ್ಗೆ ಪೊಲೀಸ್‌ ಇಲಾಖೆಯ ಇ-ಲಾಸ್ಟ್‌ನಲ್ಲಿ ದೂರು ದಾಖಲಿಸಬೇಕು. ಇ-ಲಾಸ್ಟ್‌ನಲ್ಲಿ ದೂರು ದಾಖಲಾಗುತ್ತಿದ್ದಂತೆ, ನೋಡಲ್ ಅಧಿಕಾರಿ ಸಿಇಐಆರ್‌ಗೆ ಮಾಹಿತಿ ರವಾನೆ ಮಾಡಿ ಮೊಬೈಲ್ ಆಕ್ಟಿವೇಷನ್ ಸಂಪೂರ್ಣ ಬ್ಲಾಕ್ ಮಾಡಿಸುತ್ತಾರೆ. ಇಲ್ಲವಾದರೆ ನೇರವಾಗಿ ವಾರಸುದಾರರೇ ವೆಬ್‌ಸೈಟ್‌ಗೆ ಹೋಗಿ ಬ್ಲಾಕ್ ಮಾಡಲು ಅವಕಾಶ ನೀಡಲಾಗಿದೆ.
ಪ್ರತಿ ತಿಂಗಳು ನೋಡಲ್ ಅಧಿಕಾರಿ, ಘಟಕ ಮುಖ್ಯಸ್ಥರಿಗೆ ಮೊಬೈಲ್ ಬ್ಲಾಕ್ ಮತ್ತು ಅನ್‌ಬ್ಲಾಕ್ ಕೇಸ್‌ಗಳ ವರದಿಯನ್ನು ನೀಡುತ್ತಿದ್ದಾರೆ. ನೊಂದಾಯಿತ ಐಎಂಇ ಸಂಖ್ಯೆಯ ಮೊಬೈಲನ್ನ ಸಿಇಐಆರ್ ಆ್ಯಪ್ ಸಂಪೂರ್ಣ ಬ್ಲಾಕ್ ಮಾಡುತ್ತೆ. ಕದ್ದ ಮೊಬೈಲ್ ಬಳಕೆ ಆಗುವುದಿಲ್ಲ. ಕದ್ದ ಮೊಬೈಲ್ ಖರೀದಿ ಮಾಡುವವರೇ ಇಲ್ಲದೆ ಇದ್ದಾಗ ಕಳ್ಳತನ ಪ್ರಕರಣ ಸಂಖ್ಯೆಯೂ ಇಳಿಮುಖವಾಗಲಿದೆ ಎಂಬುದು ಪೊಲೀಸರು ಅಭಿಪ್ರಾಯವಾಗಿದೆ.
ಮೊಬೈಲ್ ಪತ್ತೆಯಾದರೆ ಮತ್ತೆ ಸಿಇಐಆರ್‌ನಲ್ಲಿ ಮಾಹಿತಿ ಅಪ್ ಡೇಟ್ ಆಗಲಿದೆ. ನೋಡಲ್ ಅಧಿಕಾರಿ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ರವಾನೆ ಮಾಡಿ ವಾರಸುದಾರರಿಗೆ ತಲುಪಿಸುವ ಕ್ರಮ ಕೈಗೊಳ್ಳಲಿದ್ದಾರೆ. ವಾರಸುದಾರರು ಲಾಕ್ ಆಗಿರುವ ಮೊಬೈಲ್‌ ಅನ್‌ಲಾಕ್‌ಗೆ ಮನವಿ ಪತ್ರ ನೀಡಬೇಕು. ನೋಡಲ್ ಅಧಿಕಾರಿ, ಸಿಇಐಆ‌ ಪೋರ್ಟ್‌ನಲ್ಲಿ ಮನವಿ ಸಲ್ಲಿಸಿ ಬ್ಲಾಕ್ ತೆರವು ಮಾಡಿ ಬಳಕೆಗೆ ಯೋಗ್ಯವಾಗುವಂತೆ ಅನುಕೂಲ ಮಾಡಿಕೊಡಲಿದ್ದಾರೆ.

ಸಾರ್ವಜನಿಕರು ಸಹ www.ceir.gov.in ವೆಬ್‌ಸೈಟ್‌ಗೆ ಹೋಗಿ ದೂರು ಕೊಟ್ಟು ಮೊಬೈಲ್ ಬ್ಲಾಕ್ ಮಾಡಬಹುದು. ಕಳವಾದ ಮೊಬೈಲ್ ನಲ್ಲಿದ್ದ ಸಿಮ್ ಕಾರ್ಡ್ ಹೊಸದಾಗಿ ಪಡೆಯಬೇಕು. ಇ-ಲಾಸ್ಟ್‌ನಲ್ಲಿ ದೂರು ದಾಖಲಿಸಿ ಸ್ವೀಕೃತಿ ಪಡೆಯಬೇಕು. ಆನಂತರ ಸಿಇಐಆರ್ ವೆಬ್‌ಸೈಟ್‌ನಲ್ಲಿ ಕಳವಾದ ಮೊಬೈಲ್ ಮಾಡೆಲ್, ಐಎಂಇಐ ನಂಬರ್, ಸಿಮ್ ನಂಬರ್ ನೋಂದಣಿ ಆಪ್‌ಡೇಟ್ ಮಾಡಬೇಕು. ಗುರುತಿನ ಚೀಟಿ, ಇಮೇಲ್ ಐಡಿ ಕೊಟ್ಟರೆ ಮೊಬೈಲ್‌ಗೆ ಬರುವ ಒಟಿಪಿ ನಮೂದು ಮಾಡಿ ದೃಢೀಕರಿಸಿದರೆ ಬ್ಲಾಕ್ ಆಗಲಿದೆ. ಇಮೇಲ್‌ಗೆ 18 ನೋಂದಣಿ ಸಂಖ್ಯೆ ಬರಲಿದೆ. ಈ ಮೂಲಕ ತಮ್ಮ ದೂರಿನ ಸ್ಥಿತಿಗತಿ ಪರಿಶೀಲನೆ ಮಾಡಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seven =
Remember me
