ಲಖನೌ:ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆ ಅಖಾಡಕ್ಕೆ ಬ್ಯೂಟಿ ಕ್ವೀನ್​ ಒಬ್ಬರು ಎಂಟ್ರಿ ನೀಡಿದ್ದಾರೆ. 2015ರ ಸೌಂದರ್ಯ ಸ್ಪರ್ಧೆಯ ರನ್ನರ್​ ಅಪ್​ ಮಾಡೆಲ್​ ದೀಕ್ಷಾ ಸಿಂಗ್​ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ.
ದೀಕ್ಷಾ ಅವರು ಉತ್ತರ ಪ್ರದೇಶದ ಜೌನ್​ಪುರ್​ ಜಿಲ್ಲೆಯ ಬಕ್ಷಾ ಡೆವಲಪ್​ಮೆಂಟ್​ ಬ್ಲಾಕ್​ 26 ವಾರ್ಡ್​ನಿಂದ ಸ್ಪರ್ಧಿಸಲಿದ್ದಾರೆ. ಚುನಾವಣಾ ಅಖಾಡಕ್ಕೆ ದೀಕ್ಷಾ ಎಂಟ್ರಿಗ ಕೊಡಲು ಅವರ ಅವರ ತಂದೆಯೇ ಕಾರಣ. ತಾವು ಸ್ಪರ್ಧಿಸಬೇಕಿದ್ದ ಕ್ಷೇತ್ರ ಮಹಿಳಾ ಮೀಸಲು ಆಗಿದ್ದರಿಂದ ದೀಕ್ಷಾ ತಂದೆ ತಮ್ಮ ಮಗಳನ್ನೇ ಕಣಕ್ಕೆ ಇಳಿಸಿದ್ದಾರೆ.
ಇದನ್ನೂ ಓದಿರಿ:ಜಾರಕಿಹೊಳಿ ಇಂದೂ ಗೈರು- ಸಿಡಿ ಯುವತಿಯನ್ನು ಎದುರಿಸಲಾಗದೇ ಸಾಹುಕಾರ್​ಗೆ ಹುಷಾರ್​ ತಪ್ಪಿತಾ?
ದೀಕ್ಷಾ ತಂದೆ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಬೇಕೆಂದು ಬಹಳ ದಿನಗಳಿಂದ ತಯಾರಿ ಮಾಡಿಕೊಂಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರ ಕ್ಷೇತ್ರ ಮಹಿಳಾ ಮೀಸಲು ಆದ್ದರಿಂದ ದೀಕ್ಷಾರನ್ನು ಮನವೊಲಿಸಿ ಚುನಾವಣೆಗೆ ನಿಲ್ಲಿಸಿದ್ದಾರೆ.
ದೀಕ್ಷಾ ಅವರು ಬಿಜೆಪಿ ನಾಯಕ ದಿವಂಗತ ರಾಮ್​ ಚಂದ್ರ ಸಿಂಗ್​ ಅವರ ಸೊಸೆ ಶಾಲಿನಿ ಸಿಂಗ್​ ವಿರುದ್ಧ ಕಣಕ್ಕಿಳಿದಿದ್ದಾರೆ. ಜೌನ್​​ಪುರದ ಮೊದಲ ಹಂತದ ಪಂಚಾಯಿತಿ ಚುನಾವಣೆ ಏಪ್ರಿಲ್​ 15ರಂದು ನಡೆಯಲಿದೆ.
ಅಂದಹಾಗೆ ದೀಕ್ಷಾ ಅವರ ತಂದೆ ಜೀತೆಂದ್ರ ಸಿಂಗ್​ ಗೋವಾ ಮತ್ತು ರಾಜಸ್ಥಾನದಲ್ಲಿ ಸಾರಿಗೆ ಉದ್ಯಮ ನಡೆಸುತ್ತಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಇನ್ನು ದೀಕ್ಷಾ “ರಬ್ಬಾ ಮೆಹನ್​ ಕರಿ” ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಕಂಪನಿಗಳಲ್ಲೂ ಸಹ ದೀಕ್ಷಾ ಕೆಲಸ ಮಾಡಿದ್ದಾರೆ. ಇದೀಗ ಚುನಾವಣೆ ಅಖಾಡಕ್ಕೆ ಧುಮುಕಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.(ಏಜೆನ್ಸೀಸ್​)
ಮೊದ್ಲು ನಿನ್ನ ಅಕ್ಕ-ತಂಗಿಯರನ್ನು ಕೇಳು ಅವ್ರು ಮಾಡಿದ್ರೆ ನಾನು ಮಾಡ್ತೀನಿ: ನೆಟ್ಟಿಗನಿಗೆ ಶಾಕ್​ ಕೊಟ್ಟ ಪ್ರಿಯಾಮಣಿ!

ಟ್ಯೂಷನ್​ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ರೇಪ್​- ವಿಷ ಕುಡಿಸಿ ಕೊಲೆ ಮಾಡಿದ ಪಾಪಿಗಳು!

ಕಾಜಲ್ ಈಗ ಬರ್ಕ್ಲಿ; ನೋ ಸ್ಮೋಕಿಂಗ್ ಹುಡುಗಿಯ ಮೊದಲ ಚಿತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 8 =
Remember me
