ನೋಯ್ಡಾ:ಫ್ಯಾಷನ್ ಶೋ ನಡೆಯುತ್ತಿರುವ ವೇಳೆ ಸಂಭವಿಸಿದ ದುರಂತದಿಂದಾಗಿ ಮಾಡೆಲ್​ವೊಬ್ಬಳು ಮೃತಪಟ್ಟಿರುವ ಘಟನೆ ನೋಯ್ಡಾದ ಫಿಲ್ಮ ಸಿಟಿಯಲ್ಲಿ ನಡೆದಿದೆ.
ಇದನ್ನೂ ಓದಿ:ಗ್ರಾಪಂ ವರಿಷ್ಠರ ಮೀಸಲಾತಿ ಸಭೆ: ವೇಳಾಪಟ್ಟಿ ಪ್ರಕಟಿಸಿದ ಜಿಲ್ಲಾಧಿಕಾರಿ
ವಂಶಿಕಾ ಚೋಪ್ರಾ(24) ಮೃತಪಟ್ಟ ದುರ್ದೈವಿಯಾಗಿದ್ದು, ಬಾಬಿ ರಾಜ್ ಎಂಬ ವ್ಯಕ್ತಿ ಭೀಕರವಾಗಿ ಗಾಯಗೊಂಡಿದ್ದಾನೆ.
ಘಟನೆ ನಡೆದದ್ದು ಹೇಗೆ?ಪ್ಯಾಷನ್​ ಶೋ ನಡೆಯುತ್ತಿರುವ ವೇಳೆ ವಂಶಿಕಾ ರ‍್ಯಾಂಪ್​ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೆಳಕಿನ ಉದ್ದೇಶಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಕಂಬ ಮಾಡೆಲ್​ ಹಾಗೂ ಬಾಬಿ ರಾಜ್ ಮೇಲೆ ಬಿದ್ದಿದೆ. ಇದರಿಂದಾಗಿ ವಂಶಿಕಾ ಸ್ಥಳದಲ್ಲೇ ಮೃತಪಟ್ಟರೆ, ಬಾಬಿ ಭೀಕರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ನೋಯ್ಡಾದ ಹೆಚ್ಚುವರಿ ಡಿಸಿಪಿ, ಪ್ಯಾಷನ್​ ಶೋ ಆಯೋಜಕರು ಹಾಗೂ ಲೈಟಿಂಗ್​ ವಿಭಾಗದಲ್ಲಿ ತೊಡಗಿದ್ದ ನಾಲ್ಕು ಜನರನ್ನು ಬಂಧಿಸಿದ್ದು, ಅನುಮತಿಯನ್ನು ಪಡೆಯದೇ ಈ ಪ್ಯಾಷನ್​ ಶೋ ನಡೆಸಲಾಗಿತ್ತು ಎಂದಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
