ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಮಾಡೆಲ್​ಗಳ ಸರಣಿ ಸಾವು ಮುಂದುವರಿದಿದೆ. ಇದೂ ಸೇರಿ ಎರಡು ವಾರದಲ್ಲಿ ನಾಲ್ವರು ಮಾಡೆಲ್​​ಗಳು ಆತ್ಮಹತ್ಯೆಗೆ ಶರಣಾಗಿರುವುದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ.ಸರಸ್ವತಿ ದಾಸ್​ (18) ಆತ್ಮಹತ್ಯೆಗೆ ಶರಣಾದ ಮಾಡೆಲ್. ಕೋಲ್ಕತ್ತಾದ ಕಸ್ಬಾದ ತನ್ನ ಮನೆಯಲ್ಲಿ ದುಪ್ಪಟ್ಟಾದಿಂದ ನೇಣಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಾಡೆಲ್​ ಜತೆಗೆ ಮೇಕಪ್​ ಆರ್ಟಿಸ್ಟ್​ ಆಗಿದ್ದ 18 ವರ್ಷದ ಈಕೆ ಏಕಾಏಕಿ ಆತ್ಮಗಹತ್ಯೆಗೆ ಶರಣಾಗಿದ್ದಾಳೆ.
ಸದ್ಯ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ತನಿಖೆ ಕೈಗೊಳ್ಳಲಾಗುವುದು. ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಸ್ವತಿ ದಾಸ್​ ಇತರೆ ಮಾಡೆಲ್​ ಸೇರಿದಂತೆ ಕಿರುತೆರೆ ನಟ ಜತೆಯೂ ಗಳ ನಿರಂತರ ಸಂಪರ್ಕದಲ್ಲಿದ್ದು, ಉತ್ತಮ ಬಾಂಧವ್ಯ ಹೊಂದಿದ್ದರು. ತೀರಾ ಆಪ್ತರೆನಿಸಿಕೊಂಡಿದ್ದ ಇವರು ಈಕೆಯ ಸಾವು ಆತ್ಮಹತ್ಯೆ ಅಲ್ಲ ಎಂದು ಶಂಕಿಸಿದ್ದಾರೆ. ಸದ್ಯ ಆಕೆಯ ಮೊಬೈಲ್​ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.(ಏಜೆನ್ಸೀಸ್​)
ಪೆಟ್ರೋಲ್​ ಬಂಕ್​ಗಳ ಮುಂದೆ ಜನವೋ ಜನ: ನಾಳೆಯೇ ಮುಷ್ಕರ ಎಂದು ಬಂದವರಿಂದಾಗಿ ನೂಕುನುಗ್ಗಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + one =
Remember me
