ಸ್ಯಾನ್ ಫ್ರಾನ್ಸಿಸ್ಕೊ:ಅಮೆರಿಕ ಮೂಲದ ಔಷಧ ಕಂಪನಿ ಮೊಡರ್ನಾ ಕೋವಿಡ್ -19 ಲಸಿಕೆಯ 3ನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಜುಲೈನಲ್ಲಿ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ.30,000 ಜನರ ಸಹಭಾಗಿತ್ವವನ್ನು ಒಳಗೊಂಡ ಲಸಿಕೆಯ ಪ್ರಯೋಗದ ಕೊನೆಯ ಹಂತ ಅಧ್ಯಯನ ಯೋಜನೆಯಲ್ಲಿ ಬದಲಾವಣೆ ತರುವ ಕಾರಣದಿಂದಾಗಿ ವಿಳಂಬವಾಗಲಿದೆ ಎಂದು ವರದಿಯೊಂದು ಹೇಳಿದ ನಂತರ ಸಂಸ್ಥೆ ಈ ಕುರಿತು ತಿಳಿಸಿದೆ.ಈ ಪ್ರಯೋಗವನ್ನು ಜುಲೈ 9 ರಂದು ಪ್ರಾರಂಭಿಸಲು ನಿರ್ಧರಿಸಲಾಗಿತ್ತು ಎಂದು ಚಿಕಾಗೋದ ಇಲಿನಾಯ್ಸ್ ವಿವಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.ಜುಲೈನಲ್ಲಿ ಪ್ರಯೋಗವನ್ನು ಇನ್ನೂ ಪ್ರಾರಂಭಿಸುವ ಭರವಸೆ ಇದೆ ಎಂದು ಮಾಡರ್ನಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ನಟ ಧ್ರುವ ಸರ್ಜಾ ಆರೋಗ್ಯದಲ್ಲಿ ಏರುಪೇರು: ಅಣ್ಣನ ಕೊರಗಲ್ಲೇ ಆಸ್ಪತ್ರೆ ಸೇರಿದ್ರಾ ಧ್ರುವ?
“ಮೊರ್ಡೆನಾ ಈ ಹಿಂದೆ ತನ್ನ ಕೋವಿಡ್ -19 ಲಸಿಕೆ ಎಂಆರ್​​ಎನ್ಎ -1273 ರ 3 ನೇ ಹಂತದ ಪ್ರಯೋಗವು ಜುಲೈನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿತ್ತು. ಈ ಪ್ರಯೋಗವು ಜುಲೈನಲ್ಲಿ ಪ್ರಾರಂಭವಾಗಲಿದೆ ಮತ್ತು 3 ನೇ ಹಂತದ ಪ್ರಯೋಗವನ್ನು ಪ್ರಾರಂಭಿಸುವ ಮೊದಲ ಸಂಸ್ಥೆ ಇದು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಕಂಪನಿ ಹೇಳಿದೆ.ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲು ಅಂತಿಮ ನಿಯಮಾವಳಿಯನ್ನು ರೂಪಿಸಲು ನಾವು ಎನ್ಐಹೆಚ್ / ಒಡಬ್ಲ್ಯೂಎಸ್ (ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ / ಆಫೀಸ್ ಆಫ್ ವರ್ಕ್​ಪ್ಲೇಸ್​​​​ ಸೊಲ್ಯೂಷನ್ಸ್) ನೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇವೆ ಎಂದು ಹೇಳಿದೆ.
ಇದನ್ನೂ ಓದಿ:ಜೆಇಇ, ನಿಟ್ ಪರೀಕ್ಷೆ ಮುಂದೂಡಿಕೆ, ಹೊಸ ದಿನಾಂಕ ನಿರ್ಧಾರ ಪ್ರಕಟಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಮಾಡರ್ನಾ ಲಸಿಕೆ ಆರ್​​ಎನ್​​ಎ ಆಧಾರಿತ ಲಸಿಕೆಯಾಗಿದ್ದು, ದೇಹವು ಕೋವಿಡ್ -19 ನಿಂದ ರಕ್ಷಿಸುವ ಪ್ರತಿಕಾಯಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಕಳೆದ ತಿಂಗಳ ಕೊನೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯುಕೆ ಮೂಲದ ಅಸ್ಟ್ರಾಜೆನೆಕಾ ಕೋವಿಡ್ -19 ವಿರುದ್ಧ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಶರವೇಗದಲ್ಲಿ ಸಾಗುತ್ತಿದೆ, ಮೊಡರ್ನಾ ಕೂಡ ಹಿಂದೆ ಬಿದ್ದಿಲ್ಲ ಎಂದು ಎಂದು ಹೇಳಿದೆ.
ಯಾರೋ ಬಂದಿದ್ದಾರೆ ನೋಡು ರಚ್ಚು: ತಾಯಿ ಮಾತು ಕೇಳಿ ಮನೆ ಬಾಗಿಲು ತೆರೆದ ರಚಿತಾಗೆ ಕಾದಿತ್ತು ಸರ್ಪ್ರೈಸ್!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + nineteen =
Remember me
