ನವದೆಹಲಿ:ಮಾರಕ ಸಾಂಕ್ರಾಮಿಕ ರೋಗ ರೋವಿಡ್​ಗೆ ಚಿಕಿತ್ಸೆಗೆ 20 ಲಕ್ಷ ಡೋಸ್​ನಷ್ಟು ಲಸಿಕೆ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇತ್ತೀಚೆಗೆ ಹೇಳಿದ್ದರು.
ಅಂತೆಯೇ, ಭಾರತವೂ ಸೇರಿ ವಿವಿಧ ದೇಶಗಳಲ್ಲಿ ಲಸಿಕೆ ತಯಾರಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿವಿಧ ಹಂತಗಳಲ್ಲಿ ಪರೀಕ್ಷೆಯಲ್ಲಿರುವ ಲಸಿಕೆಗಳನ್ನು ತುರ್ತು ಅಗತ್ಯಗಳಲ್ಲಿ ಬಳಸಲು ಸಜ್ಜುಗೊಳಿಸಲಾಗಿದೆ ಎಂದು ಕಂಪನಿಗಳು ಕೂಡ ಘೋಷಿಸಿವೆ.
ಸದ್ಯ ಭಾರತದಲ್ಲಂತೂ ಲಾಕ್​​ಡೌನ್ ತೆರವಿನ ಬಳಿಕ ಕರೊನಾ ಹೆಮ್ಮಾರಿ ಇನ್ನಿಲ್ಲದಂತೆ ವ್ಯಾಪಿಸುತ್ತಿದೆ. ಪ್ರಮುಖ ಮಹಾನಗರಗಳಲ್ಲಂತೂ ದಿನೇದಿನೆ ಹೆಚ್ಚುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ನಿಜಕ್ಕೂ ಜನರನ್ನು ಕಂಗೆಡಿಸಿದೆ. ಪರಿಸ್ಥಿತಿ ವಿಷಮವಾಗುತ್ತ ಸಾಗುತ್ತಿದ್ದರೂ, ಈ ಲಸಿಕೆಗಳನ್ನೇಕೆ ಬಳಸುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರನ್ನೂ ಕಾಡುತ್ತಿದೆ.
ಇದನ್ನೂ ಓದಿ;ಸದ್ಯ ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…!
ಸದ್ಯ ಜಗತ್ತಿನಲ್ಲಿ 120ಕ್ಕೂ ಅಧಿಕ ಕಂಪನಿಗಳು ಕರೊನಾಗೆ ಲಸಿಕೆ ಕಂಡುಹಿಡಿಯುವ ಕಾರ್ಯದಲ್ಲಿ ತೊಡಗಿವೆ. ಅದರಲ್ಲಿ 10 ಕಂಪನಿಗಳಷ್ಟೇ ‘ಮಾನವರ ಮೇಲೆ ಪ್ರಯೋಗ’ ಹಂತದಲ್ಲಿವೆ. ಕೆಲ ಕಂಪನಿಗಳು ಆರಂಭಿಕ ಹಂತದಲ್ಲಿ ಇದರಲ್ಲೂ ಯಶಸ್ಸು ಗಳಿಸಿರುವುದಾಗಿ ಹೇಳಿಕೊಂಡಿವೆ. ಆದರೆ, ಅಂತಿಮ ಹಂತದ ಪರೀಕ್ಷೆ ಹಾಗೂ ಮಾನವರ ಮೇಲೆ ಬಳಕೆಗೆ ಸುರಕ್ಷಿತವಾಗಿವೆ ಎನ್ನುವುದು ದೃಢಪಡದೇ ಈ ಲಸಿಕೆಗಳನ್ನು ಬಳಸುವಂತಿಲ್ಲ.
ಕರೊನಾ ಸೋಂಕಿಗೆ ಒಳಗಾದವರಿಗೆ ಲಸಿಕೆ ನೀಡಿದ ಬಳಿಕ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಹಲವು ಕಂಪನಿಗಳು ಹೇಳಿಕೊಂಡಿವೆ. ಅವರು ತ್ವರಿತವಾಗಿ ಚೇತರಿಸಿಕೊಂಡಿರುವುದು ಕೂಡ ಅಧ್ಯಯನದಲ್ಲಿ ತಿಳಿದು ಬಂದಿದೆ. ಆದರೆ, ಅದೇ ವ್ಯಕ್ತಿ ಇನ್ನೊಮ್ಮೆ ಸೋಂಕಿಗೆ ಒಳಗಾದರೆ ಉಂಟಾಗುವ ಪರಿಣಾಮವೇನು? ಸದ್ಯ ಸಂಶೋಧಕರು ಕೂಡ ಗಮನ ಹರಿಸುವುದು ಇದೇ ವಿಚಾರದ ಬಗ್ಗೆ.ಲಸಿಕೆ ಪಡೆದು ಸೋಂಕಿನಿಂದ ಗುಣಮುಖನಾದ ವ್ಯಕ್ತಿ ಮತ್ತೊಮ್ಮೆ ಸೋಂಕಿಗೆ ಒಳಗಾದರೆ, ಆ ಹಂತವನ್ನು ಎದುರಿಸಲು ಆತನಲ್ಲಿ ಅಗತ್ಯ ಪ್ರತಿರೋಧ ಶಕ್ತಿಯನ್ನು ಇದು ಉಂಟು ಮಾಡಿರುತ್ತದೆಯೇ? ಇಲ್ಲವೇ, ಆತ ಇನ್ನಷ್ಟು ಗಂಭೀರ ಅನಾರೋಗ್ಯಕ್ಕೆ ತುತ್ತಾಗಲು ಕಾರಣವಾಗುತ್ತಾ ಎಂಬುದು ತಿಳಿಯಬೇಕಿದೆ.
ಇದನ್ನೂ ಓದಿ;ಕರೊನಾ ಲಸಿಕೆ ಭಾರತದಲ್ಲಿ ಸೆಪ್ಟೆಂಬರ್​ಗೆ ಸಿಗೋದು ಪಕ್ಕಾ; ಜಿದ್ದಿಗೆ ಬಿದ್ದು ಉತ್ಪಾದನೆಯಲ್ಲಿ ತೊಡಗಿವೆ ಕಂಪನಿಗಳು
ಮಾನವರ ಮೇಲಿನ ಪ್ರಯೋಗದಲ್ಲಿ ಆರಂಭಿಕ ಹಂತದ ಯಶಸ್ಸು ಗಳಿಸಿರುವ ಅಮೆರಿಕದ ಮಾಡೆರ್ನಾ ಕಂಪನಿ ಈ ಹಂತದ ಪರೀಕ್ಷೆಯನ್ನು ಇಲಿಗಳ ಮೇಲೆ ನಡೆಸಿದೆ. ಒಂದೇ ಡೋಸ್​ ಲಸಿಕೆ ಪಡೆದ ಇಲಿಯಲ್ಲಿ ಮರು ಸೋಂಕಿಗೆ ಒಳಗಾದರೂ ಶ್ವಾಸಕೋಶದಲ್ಲಿ ತೀವ್ರತರವಾದ ತೊಂದರೆ ಎದುರಾಗಿಲ್ಲ ಎಂದು ಹೇಳಿದೆ. ಆದರೆ, ಇದು ಆರಂಭದಲ್ಲೇ ಆರಂಭದ ಫಲಿತಾಂಶವಾಗಿದೆ. ಇನ್ನಷ್ಟು ವಿಸ್ತೃತ ಅಧ್ಯಯನ ನಡೆಯಬೇಕಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಈ ಹಂತದ ಪರೀಕ್ಷೆ ಮುಗಿಯುವವರೆಗೂ ಕಾಯಬೇಕಾದುದು ಅನಿವಾರ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 15 =
Remember me
