‘2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಶಿಯಲ್ಲಿ ಪ್ರಚಾರ ಮಾಡಿದ ನಂತರ ನಾನು ಅಹಮದಾಬಾದ್​ಗೆ ಹೋಗಿದ್ದೆ. ನಾನು ಅವರಿಗೆ ಸ್ವಲ್ಪ ಪ್ರಸಾದ ತೆಗೆದುಕೊಂಡು ಹೋಗಿದ್ದೆ. ಅಮ್ಮನನ್ನು ಭೇಟಿಯಾದಾಗ, ಕಾಶಿ ವಿಶ್ವನಾಥ ಮಹಾದೇವನಿಗೆ ಪೂಜೆ ಸಲ್ಲಿಸಿದೆಯಾ ಎಂದು ಕೇಳಿದರು. ತಾಯಿ ಇನ್ನೂ ‘ಕಾಶಿ ವಿಶ್ವನಾಥ ಮಹಾದೇವ’ ಎಂದು ಪೂರ್ಣ ಹೆಸರನ್ನು ಬಳಸುತ್ತಾರೆ. ನಂತರ ಮಾತುಕತೆಯ ಸಮಯದಲ್ಲಿ, ಯಾರದೋ ಮನೆಯ ಆವರಣದಲ್ಲಿ ದೇವಸ್ಥಾನವಿದೆ ಎಂಬಂತೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗಗಳು ಇನ್ನೂ ಹಾಗೆಯೇ ಇವೆಯೇ ಎಂದು ಕೇಳಿದರು. ನನಗೆ ಆಶ್ಚರ್ಯವಾಯಿತು. ‘ನೀನು ದೇವಸ್ಥಾನಕ್ಕೆ ಯಾವಾಗ ಭೇಟಿ ನೀಡಿದ್ದು’ ಎಂದು ಕೇಳಿದೆ. ಬಹಳ ವರ್ಷಗಳ ಹಿಂದೆ ಕಾಶಿಗೆ ಹೋಗಿದ್ದೆ, ಆದರೆ ಎಲ್ಲವೂ ನೆನಪಿದೆ ಎಂದು ಅವರು ಉತ್ತರಿಸಿದರು.’
ನವದೆಹಲಿ:ತಾಯಿ ಹೀರಾಬೆನ್ ಮೋದಿಯವರ 100ನೇ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತನ ಗಾಂಧಿನಗರದಲ್ಲಿರುವ ನಿವಾಸದಲ್ಲಿ ತಾಯಿ ಪಾದಪೂಜೆ ನೆರವೇರಿಸಿ, ಆಶೀರ್ವಾದ ಪಡೆದರು. 100ನೇ ವರ್ಷದ ವಿಶೇಷ ಸಂದರ್ಭದಲ್ಲಿ ತಾಯಿ ಜತೆ ಭಾವನಾತ್ಮಕ ಕ್ಷಣಗಳನ್ನು ಕಳೆದ ಮೋದಿ, ಸಿಹಿ ತಿನಿಸಿ ಸಂಭ್ರಮಿಸಿದರು. ತಾಯಿ ಜತೆಗೆ ಮನೆಯಲ್ಲಿರುವ ದೇವರ ಗುಡಿಯಲ್ಲಿ ಪೂಜೆ ಸಲ್ಲಿಸಿದ ಮೋದಿ, ತಾಯಿ ಜತೆಗಿನ ತಮ್ಮ ಬಾಲ್ಯ, ವಡ್ ನಗರದಲ್ಲಿನ ಜೀವನ, ಬಡತನ, ಕುಟುಂಬ ನಿಭಾಯಿಸಿದ ಅಮ್ಮನ ಬದ್ಧತೆ ಮುಂತಾದ ವಿಚಾರಗಳನ್ನು ಲೇಖನದಲ್ಲಿ ಸ್ಮರಿಸಿದ್ದಾರೆ. ‘ತಂದೆ ಬದುಕಿದ್ದರೆ ಅವರು ಕೂಡ ಕಳೆದ ವಾರ ನೂರನೆಯ ವರ್ಷ ಆಚರಿಸಿಕೊಳ್ಳುತ್ತಿದ್ದರು. ತಾಯಿಯ ನೂರನೇ ವರ್ಷ ಆರಂಭವಾಗುತ್ತಿರುವ ಮತ್ತು ತಂದೆ ನೂರು ವರ್ಷ ಪೂರ್ಣಗೊಳಿಸಬಹುದಾಗಿದ್ದ 2022 ನನ್ನ ಪಾಲಿಗೆ ವಿಶೇಷ ವರ್ಷ’ ಎಂದು ಮೋದಿ ಬರೆದುಕೊಂಡಿದ್ದಾರೆ.
ದೇಗುಲ ಜೀರ್ಣೋದ್ಧಾರ:ರಾಜ್ಯದ ಪಂಚಮಹಲ್ ಜಿಲ್ಲೆಯ ಪವಗಡದ ಮಹಾಕಾಳಿ ದೇಗುಲಕ್ಕೆ ಭೇಟಿ ನೀಡಿದ ಮೋದಿ, ಹಲವು ದಶಕಗಳ ಬಳಿಕ ದೇಗುಲ ಮೇಲ್ಭಾಗದಲ್ಲಿ ಸಾಂಪ್ರದಾಯಿಕ ಧ್ವಜ ಹಾರಿಸುವ ಮೂಲಕ ಜೀರ್ಣೋದ್ಧಾರಗೊಂಡ ದೇಗುಲವನ್ನು ಭಕ್ತರಿಗೆ ಮುಕ್ತಗೊಳಿಸಿದರು. ದೇಗುಲದ ಮೇಲ್ಭಾಗದಲ್ಲಿ ಕಳೆದ 500 ವರ್ಷಗಳಿಂದ ದರ್ಗಾವೊಂದು ನೆಲೆಗೊಂಡಿತ್ತು. ಸಂಬಂಧಪಟ್ಟವರಿಂದ ಸಮ್ಮತಿ ಪಡೆದು ದರ್ಗಾವನ್ನು ಬೇರೆಡೆಗೆ ಸ್ಥಳಾಂತರಗೊಳಿಸಿದ ಬಳಿಕ ದೇಗುಲವನ್ನು ಅಭಿವೃದ್ಧಿಪಡಿಸಲಾಗಿದೆ. 500 ವರ್ಷಗಳ ಹಿಂದೆ ಗುಜರಾತಿನ ಸುಲ್ತಾನ ಮಹ್ಮದ್ ಬೇಗ್ದ ದಾಳಿಯಿಂದ ನಾಶವಾದ ದೇವಾಲಯದ ಶಿಖರವನ್ನು ಈಗ ಪುನಃಸ್ಥಾಪಿಸಲಾಗಿದೆ. ‘ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ವಿುಸುತ್ತಿರುವುದನ್ನು ನೋಡಿದ್ದೀರಿ. ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣ ಈಗಾಗಲೇ ಮರು ನಿರ್ವಣಗೊಂಡಿದೆ. ಕೇದಾರನಾಥದಲ್ಲೂ ಅದನ್ನೇ ಮಾಡಿದ್ದೇವೆ. ನಮ್ಮ ನಂಬಿಕೆ ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಮರುಸ್ಥಾಪಿಸಲಾಗುತ್ತಿದೆ. ಪವಗಡದಲ್ಲಿ ಮಾ ಕಾಳಿ ದೇವಸ್ಥಾನದ ಪುನರ್​ ನಿರ್ಮಾಣವು ಅದೇ ಗೌರವಯಾತ್ರೆಯ ಭಾಗವಾಗಿದೆ’ ಎಂದು ಮೋದಿ ಹೇಳಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
